ಶುಭ ಶುಕ್ರವಾರದಂದು ನಿಮ್ಮ ರಾಶಿಯ ಫಲ ಹೇಗಿದೆ ಎಂಬುದು ತಿಳಿಯಿರಿ

ಮೇಷ: ಈ ರಾಶಿಯವರಿಗೆ ಶುಭ ಫಲಿತಾಂಶ ನಿರೀಕ್ಷಣೆ ಮಾಡುವಿರಿ, ವಿದೇಶ ಪ್ರವಾಸ ಯಶಸ್ಸು,
ಬಹು ರಾಷ್ಟ್ರೀಯ ಕಂಪನಿಗಳ ಜೊತೆ ಹೂಡಿಕೆ, ಆಮದು-ರಫ್ತು ವಹಿವಾಟ ಲಾಭದಾಯಕ, ಉದ್ಯೋಗ ಸೇರಲು ತುಂಬಾ ಅವಕಾಶಗಳು ಸಿಗುವುದು, ಆರೋಗ್ಯದಲ್ಲಿ ಅಸಡ್ಡೆ ತೋರದಿರಿ.

ವೃಷಭ: ನಿಮ್ಮ ಅದೃಷ್ಟದ ಭಾಗವು ಬಲವಾಗಿರುತ್ತದೆ ಮತ್ತು ಇಂದು ಕಡಿಮೆ ಪ್ರಯತ್ನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಮನೆಯ ವಾತಾವರಣದಲ್ಲಿ ಸುಧಾರಣೆ ಕಂಡುಬರಬಹುದು. ಪ್ರೀತಿಪಾತ್ರರ ನಡುವಿನ ಅಂತರ ಕಡಿಮೆ ಇರುತ್ತದೆ. ಇಂದು ಹೆತ್ತವರೊಂದಿಗೆ ಹೆಚ್ಚುವರಿ ಸಮಯ ಕಳೆಯುವ ಅವಕಾಶ ಪಡೆಯುತ್ತೀರಿ.

ಮಿಥುನ : ಸಾರ್ವಜನಿಕ ಜೀವನದಲ್ಲಿ ಗೌರವ ಗಳಿಸಲಿದ್ದೀರಿ. ಉದ್ಯಮದಲ್ಲಿ ಹೂಡಿಕೆದಾರರ ಸಂಖ್ಯೆ ಹೆಚ್ಚಲಿದೆ. ಹಣ ಸಂಪಾದನೆಗೆಂದು ಅಡ್ಡದಾರಿ ಹಿಡಿಯಬೇಡಿ. ಶಾಂತಿ ಕಾಯ್ದುಕೊಳ್ಳಿ. ಯಾವುದೇ ಸಂದರ್ಭದಲ್ಲೂ ಕೋಪದ ಕೈಗೆ ಬುದ್ಧಿ ನೀಡಬೇಡಿ.

ಕಟಕ : ಅನಿರೀಕ್ಷಿತ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಆರ್ಥಿಕವಾಗಿ ಸದೃಢರಾಗಿ ಇರಬೇಕು ಅಂದರೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕದೇ ಬೇರೆ ವಿಧಿಯಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಸಿಗಲಿದೆ.

ಸಿಂಹ: ಹೆಂಡತಿ-ಮಕ್ಕಳೊಂದಿಗೆ ಮನಸ್ತಾಪ. ಸ್ಪರ್ಧಾಳು ಗಳಿಗೆ ಅಂತಿಮ ಹಂತದಲ್ಲಿ ಸೋಲು. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಸಿದ್ಧಿ. ನಿಮ್ಮ ಜವಾಬ್ದಾರಿಯ ಪಾಲು ದೊಡ್ಡದೇ ಇದೆ. ಬಳಲಿಕೆ ತೋರಿಬರುವುದು. ನಿಮ್ಮ ಮನಸ್ಸಿಗೆ ಒಪ್ಪದ ಕೆಲಸಗಳ ಬಗ್ಗೆ ಚಿಂತಿಸುವುದು ತರವಲ್ಲ ಮತ್ತು ನಿಮಗೆ ಸಂಬಂಧಪಡದ ವಿಷಯಗಳಲ್ಲಿ ಮೂಗು ತೂರಿಸದಿರಿ.

ಕನ್ಯಾ: ಹಿತಶತ್ರುಗಳು ನಿಮ್ಮನ್ನು ಪೀಡಿಸುವಂತಹ ಸಾಧ್ಯತೆಗಳು ಹೇರಳವಾಗಿದೆ ಆದರೆ ಅವರು ಪೀಡಿಸುತ್ತಾರೆ ಎಂಬ ಕಾರಣದಿಂದ ಇದ್ದ ಜವಾಬ್ದಾರಿ ಸ್ಥಾನದಿಂದ ಕೆಳಗಿಳಿಯುವುದು ತರವಲ್ಲ. ಆದಷ್ಟು ಕುಲದೇವರ ಪ್ರಾರ್ಥನೆ ಮಾಡಿ. ವಿಶೇಷ ಅಧಿಕಾರ ಪ್ರಾಪ್ತಿ. ಮನೋಧೈರ್ಯ. ಬಂಧು ಮಿತ್ರರ ಸಹಾಯ ಸಿಗುವುದು.

ತುಲಾ: ಸಾಲದಿಂದ ಋಣಮುಕ್ತಿ, ವ್ಯಾಪಾರದಲ್ಲಿ ಆರ್ಥಿಕ ಚೇತರಿಕೆ, ಸಂತಾನಪ್ರಾಪ್ತಿ ,ಹೊಸ ಮನೆ ಕಟ್ಟಡ ಯಶಸ್ಸು ,ಆಸ್ತಿ ಖರೀದಿ ಖುಷಿ ತರಲಿದೆ, ವಿದೇಶ ಪ್ರವಾಸ ತಾಂತ್ರಿಕ ದೋಷ ನಿವಾರಣೆ, ವೈರಿಗಳು ಶರಣಾಗತಿ, ಕೋರ್ಟ್ ಕೇಸ್ ನಿಮಗೆ ಜಯ ಸಿಗಲಿದೆ.

ವೃಶ್ಚಿಕ: ಖರ್ಚುವೆಚ್ಚಗಳ ಬಗ್ಗೆ ನಿಗಾ ಇರಲಿ, ಕಾಮ ಕ್ರೋಧ ಹತೋಟಿಯಲ್ಲಿರಲಿ, ಮೇಲಾಧಿಕಾರಿಗಳ ಜೊತೆ ಮಾತನಾಡುವಾಗ ಹಿಡಿತ ಇರಲಿ, ಖಾಸಗಿ ಸಂಸ್ಥೆಗಳಲ್ಲಿ ಹಣ ಹೂಡಿಕೆ ಬೇಡ, ಚಿಕ್ಕಪುಟ್ಟ ವಿಷಯಗಳಿಂದ ದಾಂಪತ್ಯದಲ್ಲಿ ಮನಸ್ತಾಪ, ಪ್ರೇಮಿಗಳ ಮದುವೆ ವಿಳಂಬ ಸಾಧ್ಯತೆ.

ಧನುಸ್ಸು: ಯಾವಾಗಲೂ ಅತೃಪ್ತಿ ಹೊಂದುವ ಅಭ್ಯಾಸವನ್ನು ಹೊಂದಿರುವ ಜನರಿಂದ ದೂರವಿರಲು ಪ್ರಯತ್ನಿಸಿ. ಅಂತಹ ಜನರು ನಿಮ್ಮ ಸಕಾರಾತ್ಮಕತೆಯನ್ನು ನಾಶಪಡಿಸುತ್ತಾರೆ. ಕಳೆದ ಕೆಲವು ದಿನಗಳಿಂದ, ಕೌಟುಂಬಿಕ ಜೀವನದಲ್ಲಿ ಏರಿಳಿತದ ಪರಿಸ್ಥಿತಿ ಇದ್ದರೆ, ಇಂದು ಉತ್ತಮ ದಿನ.

ಮಕರ: ಇಂದು ನೀವು ಕೂಡ ಹೆಚ್ಚಿನ ಒತ್ತಡ ಅನುಭವಿಸುವ ಸಾಧ್ಯತೆಯಿದೆ. ನೀವು ಕೆಲಸ ಮಾಡಿದರೆ, ನಿಮ್ಮ ಅಲ್ಪ-ಸ್ವಭಾವವು ನಿಮಗೆ ತೊಂದರೆ ಉಂಟುಮಾಡಬಹುದು. ಕೋಪವನ್ನು ಇತರರ ಮೇಲೆ ಅನಗತ್ಯವಾಗಿ ಹೊರಹಾಕಬೇಡಿ. ಇಂದು ನಿಮ್ಮನ್ನು ತುಂಬಾ ಟೀಕಿಸಬಹುದು.

ಕುಂಭ: ಹೊಸ ಉದ್ಯಮ ಪ್ರಾರಂಭಿಸುವುದು ಸದ್ಯಕ್ಕೆ ಬೇಡ, ಶುಭ ಮಂಗಳ ಕಾರ್ಯ ಮುಂದೂಡುವುದು ಒಳಿತು, ಉದ್ಯೋಗ ಬದಲಾವಣೆ ಬೇಡ, ತಂತ್ರಜ್ಞಾನ ಪದವಿ ಪಡೆದವರು ಕೌಶಲ್ಯ ತರಬೇತಿ ಕಲಿಯಲು ಮರೆಯದಿರಿ, ಹೊಸ ನಿರ್ಧಾರಗಳು ಬೇಡ, ಪ್ರೇಮಿಗಳ ಮದುವೆ ಹಿರಿಯರ ವಿರೋಧ, ದಾಂಪತ್ಯದಲ್ಲಿ ಕಲಹ.

ಮೀನ: ವಾದ-ವಿವಾದ, ಹಠ ಸಾಧನೆ, ತಪ್ಪುಗಳ ಸಮರ್ಥನೆ, ಮತ್ತೊಬ್ಬರ ಮೇಲೆ ದೋಷಾರೋಪಣೆ ಬೇಡ. ಆಯಾಸದಿಂದ ಕೂಡಿದ ಕೆಲಸ ಇರುವುದು. ಅಧಿಕಾರ ಪ್ರಾಪ್ತಿಗಾಗಿ ಅಲೆದಾಟ ಸಂಭವ. ನಿರೀಕ್ಷಿತ ಆದಾಯಕ್ಕೆ ತೊಂದರೆ ಇಲ್ಲ.

Leave a Reply

Your email address will not be published. Required fields are marked *

error: Content is protected !!