ಮೇಷ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸಮಾಧಾನಕರ ತಿರುವು. ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳು ಕಂಡುಬಂದರೂ ಅದು ಕೇವಲ ಕ್ಷಣಿಕ ಪುನಃ ಪತಿ-ಪತ್ನಿಯರು ಒಮ್ಮತದಿಂದ ಈ ದಿನವನ್ನು ಕಳೆಯುವಿರಿ. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವವು.
ವೃಷಭ: ವಿದೇಶದಿಂದ ವ್ಯಾಪಾರ ಮಾಡುವವರು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಪ್ರಭಾವ ಮತ್ತು ತೇಜಸ್ಸು ಹೆಚ್ಚಾಗುತ್ತದೆ. ಮೇಲಾಧಿಕಾರಿಗಳು ಆದ ನೀವು ಕೆಲಸದಲ್ಲಿ ಏಕಾಗ್ರತೆಯನ್ನು ಕಾಪಾಡಿಕೊಳ್ಳಿ, ನೀವು ಯಶಸ್ಸನ್ನು ಪಡೆಯುತ್ತೀರಿ.
ಮಿಥುನ: ಸ್ಥಿರಾಸ್ತಿಗಾಗಿ ಸಾಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ನಷ್ಟ ಬಂಧು, ಆರ್ಥಿಕ ಅನುಕೂಲ, ಅಧಿಕ ಕೋಪ, ಆತುರದಿಂದ ಸಮಸ್ಯೆಗಳು, ವಿದ್ಯಾಭ್ಯಾಸದಲ್ಲಿ ಹಿನ್ನಡೆ ಸಂಗಾತಿಯೊಂದಿಗೆ ವಿರಸ, ಸಮಾಧಾನಚಿತ್ತರಾಗಿರಿ. ಭೂ ವ್ಯವಹಾರದಲ್ಲಿ ಯಶಸ್ಸು.
ಕಟಕ: ಕೆಲವು ಅಹಿತಕರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಸ್ನೇಹಿತರ ನೆರವಿನಿಂದ ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ. ಮದುವೆ ಪ್ರಸ್ತಾಪ ಬರಲಿದೆ. ಮನೆಗೆ ದೂರದ ಸಂಬಂಧಿಕರ ಆಗಮನವಾಗಲಿದೆ.
ಸಿಂಹ : ಪರಸ್ತ್ರೀಯರಿಂದ ಅತಿಯಾದ ಸಲುಗೆಯಿಂದ ಮಾತನಾಡುತ್ತಿದ್ದೀರಿ. ಇದು ನಿಮ್ಮ ಚಾರಿತ್ರ್ಯದ ಮೇಲೆ ಕಪ್ಪು ಚುಕ್ಕೆ ಇಡಲಿದೆ ಎಂಬುದು ಗಮನದಲ್ಲಿರಲಿ. ಕಚೇರಿಯಲ್ಲಿ ನಿಮ್ಮ ಕೆಲಸವು ಪ್ರಶಂಸೆ ಪಡೆದುಕೊಳ್ಳಲಿದೆ. ಸಾರ್ವಜನಿಕ ಜೀವನದಲ್ಲಿ ಗೌರವವನ್ನು ಪಡೆಯಲಿದ್ದೀರಿ.
ಕನ್ಯಾ : ಈ ದಿನವು ನಿಮಗೆ ಮಿಶ್ರಫಲವನ್ನು ತಂದುಕೊಡಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿಮಗಿಂದು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಸಂಗಾತಿಯು ನಿಮ್ಮೆಲ್ಲ ಕಷ್ಟಗಳಿಗೆ ಹೆಗಲಾಗಲಿದ್ದಾರೆ. ಸಿಟ್ಟಿನ ಕೈಗೆ ಬುದ್ಧಿ ನೀಡದಿರಿ.
ತುಲಾ : ಅತಿಯಾದ ಬೆನ್ನು ನೋವು ಇಂದು ನಿಮ್ಮನ್ನು ಕಾಡಲಿದೆ. ಪಿತ್ರಾರ್ಜಿತ ಆಸ್ತಿ ಪಾಲು ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ವ್ಯವಹಾರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಧಕ್ಕಲಿದೆ. ಕಲಾವಿದರಿಗೆ ಉತ್ತಮ ಅವಕಾಶ ಸಿಗಲಿದೆ.
ವೃಶ್ಚಿಕ: ದಾಂಪತ್ಯ ಜೀವನದಲ್ಲಿ ಮಾಧುರ್ಯವಿರುತ್ತದೆ. ಕುಟುಂಬ ಅಥವಾ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಲಾಗುತ್ತದೆ. ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ಸಿಗಲಿದೆ. ನೀವು ಸಕಾರಾತ್ಮಕ ಚಿಂತನೆ ಮಾಡಿ ವ್ಯಾಪಾರ ಪ್ರಾರಂಭಿಸಿ.
ಧನುಸ್ಸು: ಸ್ನೇಹಿತರು ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಅವಹೇಳನ ಮಾಡಿ ಗೊಂದಲ ಸೃಷ್ಟಿ ಮಾಡುವರು. ಮಾತಾಪಿತೃ ನಿಮಗೆ ಉತ್ತಮ ಸಲಹೆ ನೀಡುತ್ತಾರೆ. ನೀವು ಪ್ರೀತಿಸುತ್ತಿದ್ದ ಹುಡುಗಿ ಮನೆ ಕಡೆಯಿಂದ ವಿರೋಧ. ಪ್ರೀತಿಪಾತ್ರರನ್ನು ಮರೆಬೇಕಾಗುತ್ತದೆ. ನಿಮ್ಮ ಕಳಪೆ ಪ್ರಯತ್ನ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು.
ಮಕರ:ಆತ್ಮೀಯರ ವಿಶ್ವಾಸವನ್ನು ವೃದ್ಧಿಸಿಕೊಳ್ಳಿ. ಕುಟುಂಬದೊಡನೆ ಒಡನಾಟವನ್ನು ಹೆಚ್ಚು ಪಡಿಸಿ ಕೊಳ್ಳುವುದು ಒಳ್ಳೆಯದು. ಈ ದಿನ ಪೂರ್ಣಪ್ರಮಾಣದ ಚೈತನ್ಯ ತುಂಬಿಕೊಂಡು ಕೆಲಸದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ದೇಗುಲಗಳ ಭೇಟಿಯು ನಿಮ್ಮ ಕಾರ್ಯ ಯಶಸ್ವಿಯಾಗಲು ಅದ್ಭುತ ಶಕ್ತಿಯನ್ನು ದಯಪಾಲಿಸಲಿದೆ.
ಕುಂಭ: ನಕಾರಾತ್ಮಕ ಆಲೋಚನೆಗಳು ಮಾಡಬೇಡಿ, ಇದರಿಂದ ಪ್ರಗತಿ ಆಗಲು ಸಾಧ್ಯವಿಲ್ಲ. ನಿಮ್ಮ ಏಕಾಂಗಿತನ ಮಾನಸಿಕ ಕಾಯಿಲೆಗಳಾಗುವ ಸಂಭವ. ಸಂಗಾತಿಯ ಅಗಲಿಕೆಯಿಂದ ಮನೋವೇದನೆ.ನೀವು ನಿಮಗೆ ಸಂಪೂರ್ಣ ಮಾನಸಿಕ ತೃಪ್ತಿಗಾಗಿ ಸ್ಥಳ ಬದಲಾವಣೆ ಬೇಕು.
ಮೀನ: ನೀವು ಇಂದು ತುಂಬಾ ಉತ್ಸುಕರಾಗುತ್ತೀರಿ ಮತ್ತು ಶಕ್ತಿಯುತವಾಗಿರುತ್ತೀರಿ. ನಿಮ್ಮ ಎಲ್ಲಾ ಕೆಲಸಗಳನ್ನು ನೀವು ಕಚೇರಿಯಲ್ಲಿ ವೇಗವಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನೂ ಪಡೆಯುತ್ತೀರಿ.