ಮೇಷ: ಅನ್ಯರ ಮಾತಿನ ಬಗ್ಗೆ ವಿಶ್ವಾಸ ಬೇಡ. ನಿಶ್ಚಿತ ಆರ್ಥಿಕ ಸ್ಥಿತಿ ಇರುವುದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ.
ವೃಷಭ: ಹಾನಿ ತಪ್ಪಿಸಲು ಪ್ರಯತ್ನಿಸುವಿರಿ. ಕಠಿಣ ಆತಂಕದಿಂದ ಪಾರಾಗುವಿರಿ. ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ಡಿಟ್ಟತನದಿಂದ ಕೆಲಸ ನಿರ್ವಹಿಸಿ. ವ್ಯಾಪಾರವೃದ್ಧಿಯಾಗುವುದು. ಆರ್ಥಿಕ ಸಂಕಷ್ಟ ದೂರಾಗುವುದು.
ಮಿಥುನ: ನಿಮ್ಮ ಕುಟುಂಬದಲ್ಲಿ ಸದಾ ಮನಸ್ತಾಪ ಕಲಹ ಇದ್ದರೂ ತೊಂದರೆ ಆಗದು, ನಿಮ್ಮ ರಾಶಿಯಿಂದ 4ನೇ ಸ್ಥಾನ ಮಂಗಳ ಇದ್ದು ಲಾಭಾಧಿಪತಿ ಆಗಿರುತ್ತಾನೆ, ಇದರಿಂದ ಭೂಮಿ ಖರೀದಿ, ನಿವೇಶನ ಖರೀದಿ, ಕಟ್ಟಡ ನಿರ್ಮಾಣ ಯಶಸ್ವಿಯಾಗಲಿದೆ, ಮದುವೆಗೆ ಸೂಕ್ತವಾದ ಅವಕಾಶಗಳು ಬರಲಿದೆ.
ಕಟಕ: ವಾಹನ ಸಂಚರಿಸುವಾಗ ಎಡವಿ ಬೀಳುವ ಸಾಧ್ಯತೆ, ಪಿತ್ರಾರ್ಜಿತ ಆಸ್ತಿಗಳಿಗಾಗಿ ಘರ್ಷಣೆ ವಾಗ್ವದ ಎದುರಿಸುವ ಸಾಧ್ಯತೆ, ಧನಾಧಿಪತಿ ತೃತೀಯ ಸ್ಥಾನದಲ್ಲಿ ಇರುವುದರಿಂದ ಸಹೋದರ-ಸಹೋದರಿಯ ಸಹಕಾರ ಸಿಗುವುದು, ಮೇಲಾಧಿಕಾರಿ ಯಿಂದ ಉದ್ಯೋಗದಲ್ಲಿ ಸಹಕಾರ.
ಸಿಂಹ: ಕೆಲಸದ ವಿಳಂಬದಿಂದ ನಿಮ್ಮಲ್ಲಿ ಯೋಚನೆ ಹೆಚ್ಚಾಗಬಹುದು. ನಿಮ್ಮ ಉದ್ಯಮವನ್ನು ವಿಸ್ತರಣೆ ಮಾಡುವ ಸದಾವಕಾಶ ದೊರೆಯಲಿದೆ. ರಾಜಿ ಪಂಚಾಯತಿಗಳಲ್ಲಿ ಹೋಗಬೇಡಿ, ಇಲ್ಲಿ ನಿಮ್ಮನ್ನು ಕೆಟ್ಟದಾಗಿ ಬಿಂಬಿಸಬಹುದು ಎಚ್ಚರವಿರಲಿ.
ಕನ್ಯಾ: ಕೆಲವು ಮುಖ್ಯವಾದ ಕೆಲಸಗಳನ್ನು ಮರೆತಿರಬಹುದು ಜ್ಞಾಪಿಸಿಕೊಂಡು ಇಂದು ಪೂರ್ಣಗೊಳಿಸಿ. ದೈಹಿಕ ಆಲಸ್ಯವನ್ನು ತೆಗೆದುಹಾಕಿ. ಮಾನಸಿಕ ಸ್ಥಿತಿ ಉತ್ತಮವಾಗಿರಲಿ. ಮುಂದಿನ ಕೆಲಸದ ಬಗ್ಗೆ ಇಂದೇ ತಾಲಿಮು ನಡೆಸುವುದು ಒಳ್ಳೆಯದು. ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಉತ್ತಮ ಬೆಳವಣಿಗೆ ಕಂಡು ಬರುತ್ತದೆ.
ತುಲಾ: ಇಂದು ಹೆಚ್ಚು ಕೋಪಗೊಳ್ಳುವುದನ್ನು ತಪ್ಪಿಸಬೇಕು. ಕೋಪವು ನಿಮ್ಮ ಕೆಲಸವನ್ನು ಹಾಳುಮಾಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ವಿವಾದ ಹೊಂದಿರಬಹುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ಇಂದು ನೀವು ಹಣ ಸಂಪಾದಿಸಲು ಉತ್ತಮ ಅವಕಾಶ ಪಡೆಯಬಹುದು.
ವೃಶ್ಚಿಕ: ಹೊಸ ಯೋಜನೆಗಳನ್ನು ಮತ್ತು ಕಾರ್ಯಗಳು ಪ್ರಾರಂಭಗೊಳ್ಳಬಹುದು. ನಿಮ್ಮ ಸಹೋದ್ಯೋಗಿಗಳು ಮತ್ತು ಜೊತೆಕೆಲಸಗಾರರು ಸ್ನೇಹ ಹಾಗೂ ಸಹಕಾರ ಮನೋಭಾವದಿಂದ ಕೂಡಿರುತ್ತಾರೆ. ನಿಮ್ಮ ಆತ್ಮೀಯ ಸ್ನೇಹಿತರನ್ನು ಅಥವಾ ಸಂಬಂಧಿಕರನ್ನು ಭೇಟಿ ಮಾಡಬಹುದು.
ಧನುಸ್ಸು: ಕಚೇರಿ ಕೆಲಸದಲ್ಲಿ ಆಸಕ್ತಿ. ಮನೆ ಖರೀದಿ ಸಾಧ್ಯತೆ. ನಿಶ್ಚಿತ ಆರ್ಥಿಕ ಸ್ಥಿತಿ ಇರುವುದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ.
ಮಕರ: ಅನವಶ್ಯಕ ಅಲೆದಾಟದ ಸಾದ್ಯತೆ ಇದೆ. ಕರ್ತವ್ಯಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಲು ಪ್ರಯತ್ನ ಮಾಡುವಿರಿ. ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆರ್ಥಿಕಬಲ ಕುಗ್ಗುವ ಸಂಭವವಿದೆ. ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ.
ಕುಂಭ: ನ್ಯಾಯಾಲಯದಲ್ಲಿ ಜಯ. ಪಾಲುದಾರಿಕೆಯಲ್ಲಿ ಹಿಂಜರಿತ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ. ಆಸ್ತಿ ಸಂಪತ್ತಿನ ಸಮಸ್ಯೆ ಬಗೆಹರಿಯಲಿದೆ, ವಿದೇಶ ಪ್ರವಾಸ ತಾಂತ್ರಿಕ ದೋಷ ನಿವಾರಣೆ, ಮದುವೆಗೆ ಪೂರ್ವಸಿದ್ಧತೆ, ನಿವೇಶನ ಖರೀದಿ ಸುವ ಸಾಧ್ಯತೆ.
ಮೀನ: ಅವಕಾಶಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಸುಖಾಸುಮ್ಮನೆ ಸಣ್ಣ ವಿಷಯಕ್ಕೆ ಮಾನಸಿಕ ವೇದನೆ ಅನುಭವಿಸುವ ಸ್ಥಿತಿಯಲ್ಲಿರುವಿರಿ. ಪತ್ನಿಯ ಪ್ರೇಮ ನಿಮಗೆ ಅತಿ ಆನಂದ ತರಲಿದೆ. ಕೆಲಸದಲ್ಲಿ ಆರೋಪಗಳು ಬರಬಹುದು ನೀವು ನಿರಾಳರಾಗಿ ಇದ್ದುಬಿಡಿ ಎಲ್ಲಾ ಸರಿ ಹೋಗಲಿದೆ.