ರಾಶಿ ಭವಿಷ್ಯ : ಈ ರಾಶಿಯವರಿಗೆ ಇಂದು ಹಿತಶತ್ರುಗಳಿಂದ ತೊಂದರೆ

ಮೇಷ: ಆರೋಗ್ಯ ಗಮನಿಸಿ. ಮಾಡುವಂತಹ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚಿನ ಆದ್ಯತೆ ನೀಡುವುದರಿಂದ ನಿರೀಕ್ಷಿತ ಸಫ‌ಲತೆ. ಧನಾರ್ಜನೆ ಉತ್ತಮ ವಾಗಿದ್ದರೂ ಏನೋ ಒಂದು ವಿಧದ ಅತೃಪ್ತಿ ತೋರೀತು. ನಂಬಿದವರಿಂದಲೇ ಮೋಸ ಸಾಧ್ಯತೆ, ಹಿತಶತ್ರುಗಳಿಂದ ತೊಂದರೆ ಬರುವುದು.

ವೃಷಭ: ಹೊಸ ಆದಾಯದ ಮೂಲಗಳು ಗೋಚರವಾಗಲಿವೆ. ಸರಿ ತಪ್ಪುಗಳನ್ನು ಅರಿತು ಮುಂದುವರೆಯಿರಿ. ಯಾವುದೇ ವಿಚಾರದಲ್ಲಿ ಆತುರದ ತೀರ್ಮಾನ ಬೇಡ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದಾಗಿ ಒತ್ತಡ ಹೆಚ್ಚಾಗಿ ಮಾನಸಿಕ ಚಂಚಲತೆ ಮತ್ತು ಆಯಾಸ.

ಮಿಥುನ: ವ್ಯಾಪಾರ – ವ್ಯವಹಾರಗಳಲ್ಲಿ ನಿಮಗೆ ತೊಡಕು ಉಂಟಾದೀತು. ನೀವು ಮಾಡಿದ ತಪ್ಪು ಕೆಲಸ ಮುಂದಿನ ದಿನಗಳಲ್ಲಿ ನಿಮ್ಮನ್ನೇ ಕಾಡಲಿದೆ. ಹೀಗಾಗಿ ಅಡ್ಡ ದಾರಿಯಲ್ಲಿ ಹಣ ಸಂಪಾದನೆ ಬೇಡವೇ ಬೇಡ. ಗಂಟಲು ನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು.

ಕಟಕ: ವಿದೇಶದಲ್ಲಿ ಮಾಡುವಂತ ಉದ್ಯೋಗಿಗಳಿಗೆ ಬಿಡುವಿಲ್ಲದೆ ಕೆಲಸವಿರುತ್ತದೆ, ಶ್ರಮಕ್ಕೆ ತಕ್ಕಂತೆ ಫಲ ಸಿಗುವುದು, ಕೆಲವರು ಪಾರ್ಟ್ ಟೈಮ್ ಕೆಲಸಕ್ಕೆ ಪ್ರಯತ್ನ ಮಾಡುವವರಿಗೆ ಒಳ್ಳೆಯದಾಗಲಿದೆ, ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ, ಆರೋಗ್ಯ ಇಲಾಖೆ ಉದ್ಯೋಗಿಗಳಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ.

ಸಿಂಹ: ವ್ಯಾಪಾರದಲ್ಲಿ ಲಾಭವಾಗಲಿದೆ, ಆಸ್ತಿ ಮಾರಾಟದಿಂದ ಧನಪ್ರಾಪ್ತಿ, ಆಡಳಿತ ವರ್ಗ ಅಥವಾ ಅಧಿಕಾರಿ ಜೊತೆ ಉತ್ತಮ ಬಾಂಧವ್ಯ, ಶಿಕ್ಷಕ ವರ್ಗದವರಿಗೆ ಉತ್ತಮ ಧನಲಾಭ, ಹಿರಿಯರು ಅಥವಾ ಸಹೋದರರೊಂದಿಗೆ ವಾದ ವಿವಾದಗಳಿಂದ ದೂರ ಇರುವುದು ಉತ್ತಮ.

ಕನ್ಯಾ: ಶತ್ರುಗಳಿಂದ ಭಯ, ನಿಮ್ಮ ಪ್ರಯತ್ನಗಳಲ್ಲಿ ಅಪಜಯ, ವ್ಯವಹಾರಗಳಲ್ಲಿ ಸಾಧಾರಣ ಲಾಭ, ಕೆಲಸ ಕಾರ್ಯಗಳಲ್ಲಿ ವಿಳಂಬ ಸಾಧ್ಯತೆ, ಮನಸಿನಲ್ಲಿ ನಾನಾ ರೀತಿಯ ಋಣಾತ್ಮಕ ಚಿಂತೆ, ಮಹಿಳೆಯರಿಗೆ ಇಲ್ಲ ಸಲ್ಲದ ಅಪವಾದ, ಮನಸು ಚಂಚಲ ಸಾಧ್ಯತೆ, ಕೃಷಿಯಲ್ಲಿ ಧನಾಗಮನ.

ತುಲಾ: ಆರೋಗ್ಯ ವೃದ್ಧಿ. ಮನೋರಂಜನೆಯಿಂದ ಕೂಡಿದ ದಿನ. ಅನಿರೀಕ್ಷಿತ ಧನಾಗಮನ ಹೆಚ್ಚಿನ ಲಾಭ. ನೂತನ ಮಿತ್ರರ ಭೇಟಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಆಸ್ತಿ ವಿಚಾರಗಳಲ್ಲಿ ಪರಿಶ್ರಮದಿಂದ ಮುನ್ನಡ ಇತ್ಯಾದಿ ಶುಭಫ‌ಲ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಸರಕಾರಿ ಉದ್ಯೋಗಗಳಲ್ಲಿ ಸಫ‌ಲತೆ. ಸೋಮಾರಿತನದಿಂದಾಗಿ ಅತ್ಯುತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಸ್ತ್ರೀಯರಿಗೆ ಇಂದು ಸ್ನೇಹಿತರು ಸಹಾಯ ಮಾಡಲಿದ್ದಾರೆ. ಮನೆ ನವೀಕರಣ ಕಾರ್ಯ ಮಾಡುವಿರಿ.

ಧನು: ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದೇ ತಾಳ್ಮೆ ಯಿಂದ ವ್ಯವಹರಿಸಿ ಕಾರ್ಯ ಸಾಧನೆ. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಹಣಕಾಸಿನ ವಿಚಾರದ‌ಲ್ಲಿ ದುಡುಕು ನಿರ್ಧಾರ ಮಾಡದಿರಿ. ವಿದ್ಯಾರ್ಥಿಗಳ ವಿಚಾರದಲ್ಲಿ ವಿಪುಲ ಅವಕಾಶ.

ಮಕರ:ಈ ದಿನ ನಿರುದ್ಯೋಗಿಗಳು ಉತ್ತಮ ಅವಕಾಶಕ್ಕಾಗಿ ಕಾಯಬೇಕಾದೀತು. ನಿಮ್ಮ ಬಹುದಿನದ ಕನಸು ನೆರವೇರುವುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು.
ಹಿರಿಯರ ಬಳಿ ವಿನಯಪೂರ್ವಕವಾದ ಮಾತುಕತೆಯ ಪ್ರಭಾವದಿಂದ ಒಳಿತನ್ನೇ ಕಾಣುವಿರಿ.

ಕುಂಭ:ಆರೋಗ್ಯ ವೃದ್ಧಿ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ, ಪ್ರೋತ್ಸಾಹ. ವ್ಯಾಪಾರ ವ್ಯವಹಾರದಲ್ಲಿ ಪಾಲುದಾರರೊಂದಿಗೆ ವೈಮನಸ್ಯ ಮೂಡಲಿದೆ. ಸಂಗಾತಿಗೆ ದುಬಾರಿ ಬೆಲೆಯ ಉಡುಗೊರೆ ನೀಡಲಿದ್ದೀರಿ. ಬಂಧುಗಳು ಮನೆಗೆ ಆಗಮಿಸಲಿದ್ದಾರೆ. ಪೋಷಕರ ಆರೋಗ್ಯ ಸುಧಾರಿಸಲಿದೆ.

ಮೀನ: ಪತ್ನಿಯಿಂದ ಪದೇಪದೇ ಕಿರಿಕಿರಿ ಕಂಡುಬರಲಿದೆ, ಅತಿ ಭಾವುಕರಾಗಿ ವರ್ತಿಸುವಿರಿ, ಪ್ರೇಮಿಗಳಿಗೆ ಸಣ್ಣ ಪ್ರಮಾಣದ ಪ್ರಯಾಣ ಕೂಡಿಬರಲಿದೆ ಇದು ನಿಮಗೆ ಮಿಲನದ ದಿನವಾಗಲಿದೆ, ಅಧಿಕಾರಿಗಳು ಸಹೋದ್ಯೋಗಿಗಳ ಜೊತೆ ಉತ್ತಮ ಸಂವಹನ ಸಾಧಿಸುವುದರಲ್ಲಿ ವಿಫಲರಾಗುವಿರಿ

Leave a Reply

Your email address will not be published. Required fields are marked *

error: Content is protected !!