ರಾಶಿ ಭವಿಷ್ಯ : ದಿನಾಂಕ 23/10/2021 ಶನಿವಾರ

ಮೇಷ: ಕುಟುಂಬದವರೊಂದಿಗೆ ಮನಸ್ತಾಪವಾಗಿ ಪ್ರಮುಖ ನಿರ್ಧಾರ ವಿಳಂಬ. ಉದ್ಯೋಗದ ವಿಚಾರದಲ್ಲಿ ಯಶಸ್ಸು. ಮಹಿಳೆಯರಿಗೆ ಆಭರಣ ಲಾಭ. ಹೊಸ ಸ್ನೇಹಿತರಿಂದ ನಿಮಗೆ ಸಿಗುತ್ತಿರುವ ಬೆಂಬಲದಿಂದಾಗಿ ನೀವು ಗೌರವವನ್ನು ಪಡೆಯುತ್ತೀರಿ.

ವೃಷಭ: ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ, ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಹಿಂದೆ ಕಷ್ಟದ ಸಂದರ್ಭದಲ್ಲಿ ನಿಮ್ಮಿಂದ ಸಹಾಯ ಪಡೆದವರು ಇಂದು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ವೃತ್ತಿ ಜೀವನದಲ್ಲಿ ನೆಮ್ಮದಿ ಇದೆ.

ಮಿಥುನ: ಚಂಚಲ ಸ್ವಭಾವ ಮತ್ತು ಅನಿರೀಕ್ಷಿತ ನಡವಳಿಕೆಯಿಂದಾಗಿ ಜಗಳ ಸಂಭವ. ಕುಟುಂಬ ಯಜಮಾನ ಹಣಕಾಸಿನ ನಿರ್ವಹಣೆ ಸಹ ಸ್ವಲ್ಪ ಅಸ್ಥಿರವಾಗಿರುತ್ತದೆ. ಜೇಷ್ಠ ಪುತ್ರ ಹಣ ಸಂಪಾದಿಸುವುದರಲ್ಲಿ ಅತ್ಯುತ್ತಮರು. ನೀವು ಉತ್ತಮ ಸಂವಹನಕಾರರು ಮತ್ತು ಜನರೊಂದಿಗೆ ಬಹಳ ಸುಲಭವಾಗಿ ಬೆರೆಯುತ್ತಿರಿ.

ಕಟಕ: ಗುರು ಹಿರಿಯರ ಭೇಟಿ. ಕುಟುಂಬದೊಂದಿಗೆ ಪ್ರವಾಸ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವಾಗ್ವಾದ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಕುಟುಂಬದ ಸದಸ್ಯರೊಡನೆ ನೆಮ್ಮದಿಯಿಂದ ಇರುತ್ತೀರಿ. ತಮ್ಮ ಸಹೋದರ ಸಹೋದರಿಯರ ಆರ್ಥಿಕ ಸ್ಥಿರತೆಯ ಬಗ್ಗೆ ಮಾತ್ರವಲ್ಲದೆ ತಮ್ಮ ಕುಟುಂಬ ಬಗ್ಗೆಯೂ ಕಾಳಜಿ ಬಯಸುತ್ತೀರಿ.

ಸಿಂಹ : ದೂರ ಪ್ರಯಾಣದ ಅವಕಾಶ ಕೂಡಿ ಬಂದರೂ ಸಹ ಹಣಕಾಸಿನ ಸಮಸ್ಯೆಯಿಂದ ಅನಿವಾರ್ಯವಾಗಿ ಅದನ್ನು ರದ್ದು ಮಾಡಬೇಕಾಗಿ ಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ಮಂದಗತಿಯ ಮುನ್ನಡೆ ಇರಲಿದೆ. ಹಿತಶತ್ರುಗಳ ಕಾಟವಿದೆ.

ಕನ್ಯಾ : ವ್ಯವಹಾರದ ನಿಮಿತ್ತ ವಿದೇಶ ಪ್ರಯಾಣ ಕೈಗೊಳ್ಳುವ ಸೂಚನೆಯಿದೆ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಮಕ್ಕಳು ಓದಿನ ಕಡೆಗೆ ಗಮನ ನೀಡಲಿದ್ದಾರೆ.

ತುಲಾ : ಸಂಗಾತಿಯೊಡನೆ ಇಂದು ಪ್ರವಾಸಿ ತಾಣಗಳಿಗೆ ಭೇಟಿ ನೀಡುವಿರಿ. ಇದರಿಂದ ನಿಮ್ಮ ಇಡೀ ದಿನ ಸಂತಸವಾಗಿ ಇರಲಿದೆ. ವ್ಯಾಪಾರ – ವ್ಯವಹಾರದಲ್ಲಿ ನಿಮಗೆ ಇಂದು ಅದ್ಭುತವಾದ ಲಾಭವಿದೆ. ವಿದೇಶಿ ಹೂಡಿಕೆದಾರರು ನಿಮ್ಮ ವ್ಯವಹಾರದತ್ತ ಒಲವು ತೋರಲಿದ್ದಾರೆ.

ವೃಶ್ಚಿಕ : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿಮಗೆ ಇಂದು ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ನಿಮ್ಮ ಕೆಲಸದ ಶೈಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಗಳಿಸಲಿದೆ. ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಸ್ನೇಹಿತರು ನೆರವಾಗಲಿದ್ದಾರೆ.

ಧನುಸ್ಸು: ನೀವು ನಿಮ್ಮನ್ನು ನಿಯಂತ್ರಿಸಬೇಕು. ಅನಗತ್ಯ ವಿಷಯಗಳಿಂದ ದೂರವಿರಿ ಮತ್ತು ನಿಮ್ಮ ಆಲೋಚನೆಯನ್ನು ಸಕಾರಾತ್ಮಕವಾಗಿರಿಸಿಕೊಳ್ಳಿ. ನೀವು ಜೀವನದಲ್ಲಿ ಮುಂದುವರಿಯಲು ಬಯಸಿದರೆ, ನಕಾರಾತ್ಮಕತೆಯಿಂದ ದೂರವಿರಿ. ಕೆಲಸದ ಬಗ್ಗೆ ಮಾತನಾಡುತ್ತಾ, ಅತಿಯಾದ ಆತ್ಮವಿಶ್ವಾಸದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

ಮಕರ: ಈ ದಿನ ಕೆಲಕಾಲ ಸ್ಥಗಿತಗೊಂಡ ಅಥವಾ ತಡವಾಗಿದ್ದ ಕೆಲಸವನ್ನು ಪೂರ್ಣಗೊಳಿಸಲು ಇಂದು ಸರಿಯಾದ ಸಮಯ. ಈ ಸಮಯದಲ್ಲಿ ಒಂದು ಹೊಸ ಸಾಧನೆಯು ನಿಮಗಾಗಿ ಕಾಯುತ್ತಿದೆ, ಮತ್ತು ನಿಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯಿಂದ ನೀವು ಅದನ್ನು ಪೂರೈಸಲು ಸಹ ಸಾಧ್ಯವಾಗುತ್ತದೆ.

ಕುಂಭ: ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಲ್ಲಿ ಅಭಿವೃದ್ಧಿ. ಕೃಷಿ ಭೂಮಿ ಖರೀದಿಗೆ ನಿರ್ಧಾರ. ಸಹೋದರರಿಂದ ಪ್ರತಿರೋಧ. ಹಿತೈಷಿಗಳ ಸಲಹೆ ಪಾಲಿಸಿ. ಕುಟುಂಬದ ಸದಸ್ಯರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀವು ಪ್ರಮುಖ ಪಾತ್ರವಹಿಸುವಿರಿ.

ಮೀನ: ಆತ್ಮೀಯರ ವಿಯೋಗ. ಸಹನೆಯಿಂದ ವರ್ತಿಸಿ. ಆಸ್ತಿ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಏರುವ ಪ್ರಸಂಗ. ವ್ಯಾಪಾರದಲ್ಲಿ ಧನಲಾಭ. ಮನೆಯನ್ನು ನೋಡಿಕೊಳ್ಳಲು ಮತ್ತು ಕುಟುಂಬ ಸದಸ್ಯರೊಂದಿಗೆ ಸರಿಯಾದ ಸಮಯವನ್ನು ಕಳೆಯಲಾಗುವುದು. ಆಧ್ಯಾತ್ಮಿಕ ಚಿಂತನೆಗಳಿಂದ ಸಮಾಧಾನ.

Leave a Reply

Your email address will not be published. Required fields are marked *

error: Content is protected !!