🌱 _*ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ*_ 🍀 _*ಸ್ವಾಸ್ಥ್ಯ ಸರ್ವರದ್ದೂ ಆಗಲಿ*_
_ಈ ವಿಷಯ ಸಧ್ಯಕ್ಕೆ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಶೇಷ ಸುದ್ದಿ ಮತ್ತು ಅನೇಕ ಓದುಗರು ಅಥರ್ವದಿಂದ ಇದರ ಬಗ್ಗೆ ಮಾಹಿತಿ ಕೋರಿದ್ದಾರೆ…_
•••••••••••••••••••••••••••••••••••••••••••••••
_ಆತ್ಮೀಯರೇ, ನಮ್ಮ ಮೊದಲ ಕೋರಿಕೆ ಏನೆಂದರೆ ಈ ವರ್ಷ ನವೆಂಬರ್ 4ರ ಸಂಜೆಯ ಒಳಗೆ ಬೀಳುವ ಮಳೆಯನ್ನು ಶುದ್ಧ ಮಣ್ಣಿನ, ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿ(ತಾಮ್ರದ ಪಾತ್ರೆ ಬೇಡ) ಇಡಿ. ತರ್ಕ ಮತ್ತು ವಿಜ್ಞಾನದ ದೃಷ್ಠಿಯನ್ನು ನಂತರ ನೋಡೋಣ. ಎಲ್ಲ ಒಪ್ಪಿಗೆಯಾದರೆ, ಮುಂದೆ ಬೇಕೆಂದರೂ ಒಂದು ವರ್ಷ ಕಾಯಬೇಕಾಗುತ್ತದೆ…_
•••••••••••••••••••••••••••••••••••••••••••••••
_*ವಿಶೇಷ:*_
_ಓದುಗರಾದ ಶ್ರೀಯುತ ವೆಂಕಟೇಶ ಪ್ರಸಾದ ಅವರು ಈ ಬಗ್ಗೆ ಬರೆಯಲು ಒತ್ತಾಯಿಸಿದ್ದರು. ಮೊದಲು ಪರೀಕ್ಷಿಸಿ ಬರೆಯುವೆ ಎಂದು ಇದೇ ಶನಿವಾರ ದಿನಾಂಕ: 23.10.2021ರ ಮಧ್ಯಾಹ್ನ ಬೀಳುತ್ತಿದ್ದ ಮಳೆಯನ್ನು ಒಂದು ಶುದ್ಧ ಮತ್ತು ಒಣಗಿದ(ಇದು ಬಹು ಮುಖ್ಯ) ಪಾತ್ರೆಯಲ್ಲಿ, ನೇರ ಮಳೆನೀರನ್ನು ಸ್ವಲ್ಪವೇ ಹಿಡಿದುಕೊಂಡು, ಹೆಪ್ಪು ಹಾಕುವ ಕ್ರಮದಲ್ಲಿ ಹಾಲಿಗೆ ಹಾಕಿಟ್ಟರು ಶ್ರೀಮತಿ ಡಾ. ಸುಮತಿ._
_ರಾತ್ರಿಗೆ ಅತ್ಯಂತ ಶುದ್ಧ, ಎಳ್ಳಷ್ಟೂ ಹುಳಿ ಇರದ, ಪರಿಮಳಭರಿತ ಮೊಸರು ತಯಾರಾಗಿತ್ತು. ಆಯುರ್ವೇದ ಓದಿದ ನಂತರ ಪ್ರಥಮ ಬಾರಿಗೆ ರಾತ್ರಿ ಆಹಾರದಲ್ಲಿ ಮೊಸರನ್ನು ಸೇವಿಸಿದ್ದೆ! ಬೆಳಿಗ್ಗೆ ಹುಳಿಯಾದರೆ ಸ್ವಾತಿ ಮಳೆಯ ನೀರಿನಿಂದ ತಯಾರಾದ ಮೊಸರಿನ ರುಚಿ ತಿಳಿಯುವುದೆಂತು? ಇದರ ಸೇವನೆಯ ನಂತರ ಸೂಕ್ಷ್ಮವಾಗಿ ಗಮನಿಸಿದರೂ ಏನೂ ಋಣಾತ್ಮಕ ಪರಿಣಾಮ ಕಂಡಿಲ್ಲ, ಧನಾತ್ಮಕ ಪರಿಣಾಮ ಗಮನಿಸಲು ಹಗಲು ಸೇವನೆ ಮಾಡಬೇಕು, ಆಗ ತಿಳಿಯುತ್ತದೆ…_
•••••••••••••••••••••••••••••••••••••••••••••••
_*ವಿಶೇಷತೆ ಏನು?:*_
_ಸ್ವಾತಿ ಮಳೆಯ ನೀರು ವಿಶೇಷ ಗುಣವನ್ನು ಹೊಂದಿರುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಕಣ್ಣಿಗೆ ಕಂಡ ಸತ್ಯಗಳು, ಓದಿ ತಿಳಿದ ಸತ್ಯಗಳು, ಆಯುರ್ ವೈಜ್ಞಾನಿಕ ಹಿನ್ನೆಲೆ ಈ ಎಲ್ಲಾ ದೃಷ್ಠಿಗಳಿಂದ ನೋಡೋಣ…_
👇
_*ಪ್ರತ್ಯಕ್ಷ ದರ್ಶನ 1)*_
_ಹಾಲು ಮೊಸರಾದ ಬಗ್ಗೆ ಕಣ್ಣಾರೆ ನೋಡಿರುವ ಕಾರಣ ಈ ಮಳೆಯ ನೀರು ಮಾತ್ರ ಈ ವಿಶೇಷ ಗುಣ ಹೊಂದಿದೆ, ಬೇರಾವ ನೀರೂ ಈ ಗುಣ ಹೊಂದಿಲ್ಲ. ಕೇವಲ ಅದರಲ್ಲಿ ಆ್ಯಸಿಡ್ ಇರಬಹುದೆಂದರೆ ಅದೂ ಸುಳ್ಳು, ಏಕೆಂದರೆ ನಮ್ಮ ಆರ್.ಒ. ಫಿಲ್ಟರ್ ನೀರು ಪಕ್ಕಾ ಆ್ಯಸಿಡ್ ಆಗಿದೆ, ಅದನ್ನು ಹಾಲಿಗೆ ಹಾಕಿದರೆ ಹಾಲು ಮೊಸರಾಗದು? ಇಲ್ಲಿ ವಿಶೆಷ ಗುಣ ಇದೆ ಮತ್ತು ಪರಿಮಳ ಭರಿತ ಅದುವರೆಗೆ ಸೇವಿಸಿರದ ವಿಶೇಷ ಮೊಸರು ತಯಾರಾದದ್ದನ್ನು ನಾವು ನೋಡಿದ್ದೇವೆ, ಸವಿದಿದ್ದೇವೆ. ಇಂತಹ ಮೊಸರು ನಿಜವಾಗಿಯೂ ಪಿತ್ತಶಾಮಕವಾಗಿದೆ, ತಂಪನ್ನು ಕೊಡಬಲ್ಲದು, ಅದೇ ಹುಳಿಬಂದ ನಂತರ ಬಳಸಿದರೆ ಪಿತ್ತ ಹೆಚ್ಚುತ್ತದೆ. ಇನ್ನಷ್ಟು ಗಮನಿಸಿ ಬರೆಯುತ್ತೇವೆ…_
_*ಸತ್ಯವನ್ನೇ ನುಡಿವ ಋಷಿಗಳು ಬರೆದದ್ದನ್ನು ಓದಿದ್ದು ಮತ್ತು ಕಂಡದ್ದು 2):*_
_ಆಯುರ್ವೇದ ಗ್ರಂಥಗಳಲ್ಲಿ ನಮ್ಮ ಆಚಾರ್ಯರು ತಿಳಿಸಿರುವ, ಹಂಸೋದಕದ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ತಾವು ಓದಿರಬಹುದು. ಶರದೃತು ಆಗಮನದ ನಂತರ ಸೂರ್ಯ ಮತ್ತು ಚಂದ್ರರ ಪ್ರಭಾವ ಭೂಮಿಯ ಮೇಲೆ ವಿಶೇಷ ರೀತಿಯಿಂದ ಬೀಳುತ್ತದೆ. ಅದುವರೆಗೆ ವರ್ಷಾ ಋತುವಿನಲ್ಲಿ ಮೋಡಗಳಿಂದ ಬಹಳ ಸಮಯ ಮರೆಯಾಗಿ ನೇರ ಬಿಸಿಲು ಬೆಳಕನ್ನೇ ಕಾಣದ ಭೂಮಿ, ಈಗ ನೇರ ಸೂರ್ಯ ಚಂದ್ರರ ಕಿರಣಗಳಿಗೆ ತೆರೆದುಕೊಳ್ಳುತ್ತದೆ, ಆಗ ಭೂಮಿಯ ನೀರೇ ಶುದ್ಧವಾಗುತ್ತದೆ. ಎಷ್ಟು ಶುದ್ಧವಾಗುತ್ತದೆ ಎಂದರೆ ಅದನ್ನು_ _*ಹಂಸೋದಕ*_ _ಎಂದು ಕರೆಯುತ್ತಾರೆ, ಅಂದರೆ ಹಂಸ ಪಕ್ಷಿಯು ಹಾಲು ಮತ್ತು ನೀರನ್ನು ಸೇರಿಸಿ ಇಟ್ಟರೆ ಶುದ್ಧ ನೀರನ್ನು ಉಳಿಸಿ ಕೇವಲ ಹಾಲನ್ನು ಕುಡಿಯುತ್ತದೆ. ಆ ಉಳಿದ ನೀರು ಕೇವಲ ನೀರು, ಶುದ್ಧ ನೀರು, ಇದು ರೋಗನಾಶಕ ಎಂದಿದ್ದಾರೆ ಆಚಾರ್ಯರು._
_ಭೂಮಿಯ ನೀರೇ ಇಷ್ಟು ಶುದ್ಧವಾದರೆ, ಅಂತರಿಕ್ಷದ ಜಲ ಇನ್ನೆಷ್ಟು ಗುಣಭರಿತವಾಗಿರಬಹುದು?! ಹಾಗಾಗಿ, ಶರದೃತುವಿನಲ್ಲಿ ಬರುವ ಸ್ವಾತಿ ಮಳೆಯು ರೋಗನಾಶಕ ಎಂದು ಅಭಿಪ್ರಾಯಕ್ಕೆ ಬರಬಹುದು. ಈ ವರ್ಷ ಬಳಸಿ ನೋಡಿ, ಈ ಬಗ್ಗೆ ವಿಸ್ತೃತವಾಗಿ ಬರೆಯುತ್ತೇವೆ…_
_*ಸನಾತನ ಸತ್ಯ 3):*_
_ಸ್ವಾತಿ ಮಳೆಯ ಹನಿ ಮುತ್ತಾಗುತ್ತದೆ, ಎಂದರೆ ಇದನ್ನು ಕಣ್ಣಾರ ನೋಡಿಲ್ಲದಿದ್ದರೂ ಅತ್ಯಂತ ಪ್ರಾಚೀನ ಕಾಲದಿಂದಲೂ ಕೇಳಿದ್ದೇವೆ. ಈ ಮುತ್ತು ಬಳಕೆಯಲ್ಲಿ ಪಿತ್ತದ ದೋಷಗಳನ್ನು ನಿವಾರಿಸುವಲ್ಲಿ ಅತ್ಯಂತ ಶ್ರೇಷ್ಠ, ಕೊವಿಡ್ ಚಿಕಿತ್ಸಾರ್ಥ ಇದರ ಬಳಕೆಯನ್ನು ವಿಶೇಷ ಸಂದರ್ಭಗಳಲ್ಲಿ ಮಾಡಿದ್ದೇವೆ, ಅದನ್ನು ಮುಕ್ತಾಪಿಷ್ಟಿ ಎಂಬ ಔಷಧದ ರೂಪದಲ್ಲಿ ಬಳಸುತ್ತೇವೆ. ಮುತ್ತಿನ ಅದರ ಮೂಲವಾದ ಸ್ವಾತೀ ಮಳೆಯ ನೀರಿಗೂ ಅದೇ ಗುಣ ಇರಬೇಕೆಂಬುದು ತರ್ಕ ಗಮನಿಸಬೇಕು…_
_*ಬಾಲ್ಯದಿಂದಲೂ ಕಂಡ ಸತ್ಯ 4):*_
_ರೈತಾಪಿ ಹಿನ್ನೆಲೆಯಿಂದ ಬಂದ ನಾವು ಬಾಲ್ಯದ ಆಟ-ಪಾಠಗಳ, ಆ ಹಳ್ಳಿ ಬಸ್-ವಿದ್ಯುತ್ ಕಾಣದ 50-60 ಮನೆಗಳ ಪುಟ್ಟಗ್ರಾಮ ಅಲ್ಲಿನ ಆಟ ಎಂದರೆ ನಿತ್ಯದ ಕೆಲಸಗಳೇ ಆಗಿದ್ದವು, ಪ್ರಕೃತಿಯೇ ಆಟದ ಮನೆಯಾಗಿತ್ತು, ಯಾವ ಕೆಲಸಗಳೂ ಆಟದಿಂದ ಹೊರತಾಗಿ ಗಂಭಿರವಾಗಿ, ಆತಂಕದಿಂದ ಕೂಡಿರಲಿಲ್ಲ, ಹಸು ಮೇಯಿಸುವುದು, ಹುಲ್ಲು ತರುವುದು, ಕೋಳಿಗಳನ್ನು ಸಾಕುವುದು, ಮೊಟ್ಟೆ ಎತ್ತಿಡುವುದು, ಅವುಗಳ ಮಾರಾಟ, ಈಗಿನಂತೆ ಮುಂದುವರಿದಿದ್ದರೆ ಮೊಟ್ಟೆಯ ರುಚಿ ನೋಡದೇ ಬಿಡುತ್ತಿರಲಿಲ್ಲ, ಆಗ ಅದೊಂದು ಅತ್ಯಂತ ನಿಷಿದ್ಧ ಕಾರ್ಯವಾಗಿತ್ತು. ಬಾವಿ, ಹಳ್ಳಗಳಿಂದ ನೀರು ತರುವುದು, ಸೋಪಿನ ಬದಲು ಚೌಳುಪ್ಪು ಹೆಕ್ಕಿ ತರುವುದು, ಜೋಳ ಬೀಸಿ ಹಿಟ್ಟು ತೆಗೆಯುವುದು….._
_ಇವೆಲ್ಲಾ ನಮಗೆ ಕೇವಲ ಕೆಲಸಗಳಾಗಿರಲಿಲ್ಲ, ಆಟವೂ ಆಗಿದ್ದವು. ಇರಲಿ, ದಸರಾ ಹಬ್ಬದ ಬಿಲ್ಲು ಬಾಣಗಳ ಆಟದಲ್ಲಿ ಗುರಿ ಕಲಿಯುವಿಕೆ ಎಲ್ಲಿಯವರೆಗೆ ಎಂದರೆ ಆ ಬಿಲ್ಲು ಮುರಿದು ಹೋಗುವ ತನಕ ಗುರಿ ಇಟ್ಟು ಹೊಡೆಯುವ ಆಟ, ನಂತರ ದೀಪಾವಳಿಯಲ್ಲಿ ಹಸುಕರುಗಳಿಗೆ ಕಬ್ಬಿಣ ಕಾಯಿಸಿ ಗುಲ್ಲು ಹಾಕಿ, ಹೊನ್ನ ಆವರಕೆ ಹೂ ತಂದು ಮನೆತುಂಬಾ ಸುರಿದು ಕುಣಿಯುವ ಈ ಹಬ್ಬಗಳ ನಡುವೆ ನಾವು ಕಾಣುತ್ತಿದ್ದ, ಬೇಸರದ ಸಂಗತಿ ಎಂದರೆ ಕಾಡು ತುರಚಿ ಗಿಡಗಳಲ್ಲಿ ಸಿಗುತ್ತಿದ್ದ ಜೀರುಂಡೆಗಳ ಸಾಲು ಸಾಲು ಸಾವು. ಅದುವರೆಗೆ ದಾರ ಕಟ್ಟಿ ಹಾರಾಡಿಸುತ್ತಾ ಆಡಿಸಿದ್ದ ಜೀರುಂಡೆಗಳು ಇದ್ದಕ್ಕಿದ್ದಂತೆ ಅಕಾಲ ಮರಣ. ನಮ್ಮ ಬೆಂಕಿ ಪೊಟ್ಟಣದಲ್ಲಿ ಬಚ್ಚಿಟ್ಟು, ಅದರಲ್ಲಿ ಸೊಪ್ಪು ಹಾಕಿ, ಪುಟ್ಟ ಹಳದಿ ಮೊಟ್ಟೆಗಳನ್ನು ನೋಡಿ ಸಂಭ್ರಮಿಸುತ್ತಿದ್ದ ಈ ಜೀರುಂಡೆಗಳು ಸ್ವಾತಿ ಮಳೆಯ ನಂತರ ಎಲ್ಲವೂ ಸತ್ತೇ ಹೋಗುತ್ತಿದ್ದವು!! ನಮ್ಮ ಪೊಟ್ಟಣದ ಜೀರುಂಡೆಗೆ ಮಳೆಯೇ ತಾಗಿಲ್ಲವಾದರೂ ಅದೂ ಸಹ ಸತ್ತು ಹೋಗಿರುತ್ತಿತ್ತು!!! ಇದು ನಮಗೆಲ್ಲಾ ಅತ್ಯಂತ ನೋವಿನ ಸಂಗತಿ. ಬಾಣದ ಗುರಿ ಇಡಲು ಕಾಡುಗಳಲ್ಲಿ, ಸಣ್ಣ ಹುಳುಗಳು, ನೀರ ಕಪ್ಪೆಗಳು, ಯಾವೂ ಸಿಗುತ್ತಿರಲಿಲ್ಲ!? ಎಲ್ಲಾ ಮಾಯ. ಇಲ್ಲಿ ಅಮ್ಮನನ್ನು ಕೇಳಿ ಪರಿಶೀಲಿಸಿದ ವಿಚಾರ ಎಂದರೆ, ಸ್ವಾತಿ-ವಿಶಾಖ(ಅವರ ಬಾಯಲ್ಲಿ ಅದು ಈಗಲೂ, ಸೌತೆ ಮತ್ತು ವಿಷಸೌತೆ) ಮಳೆಯು ಭೂಮಿಯ ಕ್ರಿಮಿ ಕೀಟಗಳನ್ನು ನಿವಾರಿಸುವ ಔಷಧಿ, ಈ ಮಳೆ ಬಂದರೆ ರೈತರಿಗೆ ಬೆಳೆ, ಮಳೆಯೆ ಇಲ್ಲದಿದ್ದರೆ ಅದು ಹುಳುಗಳಿಗೆ. ಹಾಗಾಗಿ ಈ ಮಳೆ ಕೀಟನಾಶಕವಂತೆ. ಸರಿ ಅಲ್ಲಿಂದ ನಮ್ಮ ತಪಾಸಣೆ ಶುರುವಾಗಿತ್ತು, ಪ್ರತಿ ವರ್ಷ ದಸರಾ ನಂತರ ಮಳೆಯು ಬಂದರೆ ಎಲ್ಲಾ ಬೇಲಿ, ಹೊಲ, ಪೈರುಗಳ ಪರಿಶೀಲನೆ, ಎಲ್ಲ ಕ್ರಿಮಿಗಳು ದಾರಿ ದಾರಿಗಳಲ್ಲಿ ಸತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದೆವು, ಅನೇಕಾನೇಕ ಕಪ್ಪೆಗಳು, ಚೇಳು, ಕೆಲವಿಧದ ಹಾವುಗಳು ಸಹ ಶವವಾಗಿ ಬಿದ್ದಿರುತ್ತಿದ್ದವು. ಅದು ದೃಢವಾಯಿತು, ಸ್ವಾತಿ ಮಳೆ ಕ್ರಿಮಿನಾಶಕ ಎಂದು…_
•••••••••••••••••••••••••••••••••••••••••••••••
_ಆತ್ಮೀಯರೇ, ಬಾಲ್ಯದ ಸವಿನೆನಪಿನಲ್ಲಿ ಸ್ವಲ್ಪ ಹೆಚ್ಚು ಬರೆದಂತೆ ಕಾಣಿಸಿದೆ. ಒಟ್ಟಾರೆ, ಇನ್ನು ಈ ಬಗ್ಗೆ ಪ್ರಯೋಗ ಪ್ರಾರಂಭಿಸಿ ನೋಡಿ ಕಂಡ ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ…_
_ಮನುಷ್ಯ “ಆಸ್ಪತ್ರೆ ರಹಿತವಾಗಿ ಬಾಳಬೇಕು” ರೋಗಗಳ ಈ ಭಯಾತಂಕ, ಆರ್ಥಿಕ ಹಿನ್ನೆಡೆ ಎಲ್ಲ ಮಾಯವಾಗಬೇಕು, ಅದೇ ಆಯುರ್ವೇದ ವೈದ್ಯರ ನಿಜವಾದ ಆಶಯ, ಅಲ್ಲವೇ?_
•••••••••••••••••••••••••••••••••••••••••••••••
_ಪ್ರತಿದಿನದ ಆರೋಗ್ಯ ಮಾಹಿತಿಗಾಗಿ ಲಿಂಕ್ ಒತ್ತಿ “ಆಸ್ಪತ್ರೆ ರಹಿತ ಜೀವನ” ಗುಂಪಿಗೆ ಸೇರಿ_
👇
https://t.me/joinchat/Pzj2OBdb9refGJ5DbP1CSw
_ಮತ್ತು ನಿಮ್ಮ ಆಪ್ತ ಬಳಗವನ್ನು ಈ ಗುಂಪಿಗೆ ಸೇರಿಸಬಹುದು…_
•••••••••••••••••••••••••••••••••••••••••••••••
_*ನಿಮ್ಮ ಸಂಪರ್ಕಕ್ಕೆ:*_
📞 8792290274 9148702645
🙏 _*ಧನ್ಯವಾದಗಳು*_ 🙏
•••••••••••••••••••••••••••••••••••••••••••••••
_*ವಿಶ್ವ ಹೃದಯಾಶೀರ್ವಾದವಂ ಬಯಸಿ*_
_~ಡಾ. ಮಲ್ಲಿಕಾರ್ಜುನ ಡಂಬಳ_
_*ATHARVA Institute of Ayurveda Research, Shimoga | Davanagere | Bengaluru | Kangra(H.P)*_