ಗ್ರಾಮಕ್ಕೆ ಸಾರ್ವಜನಿಕ ರಸ್ತೆ ಇಲ್ಲದೆ ಹೈರಾಣಾದ ಗ್ರಾಮಸ್ಥರು

ತುಮಕೂರು : ಗ್ರಾಮದ ಅಭಿವೃದ್ಧಿಗೆ ಪೂರಕವಾದ ಮೂಲಭೂತ ಸೌಕರ್ಯಗಳಲ್ಲಿ ಮುಖ್ಯವಾದ ದ್ದು ರಸ್ತೆ ರಸ್ತೆ ಇದ್ದರೆ ಇಡೀ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಆದರೆ ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯಲ್ಲಿ ಬರುವ ಬೆಳ್ಳಿ ಬಟ್ಟಲ ಹಳ್ಳಿ ಗ್ರಾಮ ಇದಕ್ಕೆ ತದ್ವಿರುದ್ಧವಾಗಿದೆ ಎಂದು ಹೇಳಬಹುದು. ಸುಮಾರು 80 ಮನೆಗಳನ್ನು ಹೊಂದಿರುವ ಗ್ರಾಮದಿಂದ ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ಜನ ವಾಸವಿದ್ದು ಇಡೀ ಪ್ರದೇಶವೆಲ್ಲವೂ ಬೆಟ್ಟಗುಡ್ಡಗಳಿಂದ ಕೂಡಿದೆ ಆದರೆ ಈ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಇಲ್ಲದೆ ಒಂದುವರೆ ವರ್ಷದಿಂದ ಗ್ರಾಮಸ್ಥರು ರಸ್ತೆಗಾಗಿ ಪರಿತಪಿಸುವಂತಾಗಿದೆ.

ಗ್ರಾಮದಲ್ಲಿರುವ ರೈತಾಪಿ ವರ್ಗದ ಜನರು ಕೃಷಿ ಚಟುವಟಿಕೆಯಿಂದ ಜೀವನ ನಡೆಸುತ್ತಿದ್ದು ಮೂಲಭೂತ ಸೌಕರ್ಯಗಳು ಹಾಗೂ ಅಗತ್ಯ ವಸ್ತುಗಳ ಪೂರೈಕೆಗಾಗಿ ಉರ್ಡಿಗೆರೆ ಗ್ರಾಮವನ್ನು ಅವಲಂಬಿಸಿದ್ದಾರೆ ಆದರೆ ಸುಮಾರು 40 ವರ್ಷದಿಂದ ರೂಡಿ ದಾರಿಯಲ್ಲಿ ಸಾಗುತ್ತಿದ್ದ ಗ್ರಾಮಸ್ಥರಿಗೆ ಖಾಸಗಿ ಜಮೀನಿನ ಮಾಲೀಕರು ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿದ ಪರಿಣಾಮ ಇಡೀ ಗ್ರಾಮಕ್ಕೆ ರಸ್ತೆ ಇಲ್ಲದೆ ನಲುಗಿ ಹೋಗಿದ್ದಾರೆ.

ಗ್ರಾಮದಲ್ಲಿ ಹೆಚ್ಚಿನದಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಕುಟುಂಬಗಳು ವಾಸವಿದ್ದು ,ಗರ್ಭಿಣಿಯರು, ಮಕ್ಕಳು ,ವಯೋವೃದ್ಧರೂ ಸೇರಿದಂತೆ ಹಲವರು ಆಸ್ಪತ್ರೆಗಳಿಗೂ ಹಾಗೂ ಶಾಲೆಗಳಿಗೆ ತರಳದಂತಹ ಸ್ಥಿತಿ ನಿರ್ಮಾಣವಾಗಿದೆ ಆದರೆ ಇದಕ್ಕೆ ಸಂಬಂಧಿಸಿದಂತೆ ತುಮಕೂರು ತಹಸಿಲ್ದಾರ್ ,ಉಪವಿಭಾಗಾಧಿಕಾರಿಗಳು ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸ್ಥಳೀಯ ಮಟ್ಟದ ಎಲ್ಲಾ ಅಧಿಕಾರಿಗಳಿಗೂ ಗ್ರಾಮಸ್ಥರು ಗಮನಕ್ಕೆ ತಂದರೂ ಇದುವರೆಗೂ ರಸ್ತೆ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ಹೈರಾಣಾಗಿದೆ.

ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೂ ಸಹ ಇದರ ಬಿಸಿ ತಟ್ಟಿದ್ದು ಅಂಗನವಾಡಿಗೆ ಪೂರೈಕೆಯಾಗದ ಆಹಾರ ಸಾಮಗ್ರಿ ಗಳನ್ನು ಸುಮಾರು ಎರಡು ಕಿಲೋಮೀಟರ್ ದೂರದಿಂದ ತಲೆಮೇಲೆ ಹೊತ್ತು ತಂದು ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡುವಂತಹ ನಿರ್ಮಾಣವಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಮಾಹಿತಿ ನೀಡಿದ್ದಾರೆ.

ಗ್ರಾಮದಲ್ಲಿ ಸಾಕಷ್ಟು ವಯೋವೃದ್ಧರು ಸ್ಥಳೀಯ ಆಸ್ಪತ್ರೆಗಳಿಗೂ ಸಹ ತೆರಳದೆ ಮನೆಯಲ್ಲಿಯೇ ದಿನ ದುಡುವಂತಹ ಸ್ಥಿತಿ ಸಹ ನಿರ್ಮಾಣವಾಗಿದೆ.

40 ವರ್ಷದಿಂದ ರೂಢಿಯಲ್ಲಿದ್ದ ರಸ್ತೆಯಲ್ಲಿ ಜಮೀನಿನ ಮಾಲೀಕರು ಮಾನವೀಯತೆಯನ್ನು ಮರೆತು ಏಕಾಏಕಿ ಬಂದ್ ಮಾಡಿದ್ದು ಇಡಿ ಗ್ರಾಮಸ್ಥರೇ ಅದರ ವಿರುದ್ಧ ತಿರುಗಿಬಿದ್ದಿದ್ದರು ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆಯದೆ ಹೈರಾನಾಗಿದ್ದಾರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಗ್ರಾಮಸ್ಥರಿಗೆ ರಸ್ತೆ ತೆರವು ಮಾಡಿಕೊಡಬೇಕೆಂದು ಇಡೀ ಗ್ರಾಮದ ಜನತೆಯ ಒಕ್ಕೊರಲ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!