ಒಡೆದ ಮನೆಯಲ್ಲಿ ರಿಜೆಕ್ಟ್ ಆದ ವ್ಯಕ್ತಿಗಳಿಗೆ ಕಾಂಗ್ರೆಸ್ ನಲ್ಲಿ ಅವಕಾಶವಿಲ್ಲ ಮುಖಂಡ ಹೋನ್ನಗಿರಿ ಗೌಡ

ರಾಜ್ಯದಲ್ಲಿ ಜೆಡಿಎಸ್ ಪಕ್ಷ ಒಂದು ಒಡೆದ ಮನೆಯಾಗಿದೆ ಆ ಒಡೆದ ಮನೆಯಲ್ಲೇ ರಿಜೆಕ್ಟ್ ಆದಂತಹ ವ್ಯಕ್ತಿಗಳನ್ನು ಕಾಂಗ್ರೆಸ್ ಗೆ ಕರೆತರುವ ಮಾತೆಇಲ್ಲಾ ಎಂದು ಕಾಂಗ್ರೆಸ್ ಮುಖಂಡ ಹೋನ್ನಗಿರಿ ಗೌಡ ನೇರವಾಗಿ ಅವರ ಅಭಿಪ್ರಾಯ ವ್ಯಕ್ತಪಡಿಸಿದರು.
ಗುಬ್ಬಿ ನಗರದ ಕಾಂಗ್ರೆಸ್ ಭವನದಲ್ಲಿ ಪಕ್ಷದ ಬಲವರ್ಧನೆ ಹಾಗು ಕಾರ್ಯಕರ್ತರಲ್ಲಿ ಮೂಡಿರುವ ಗೂಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಗುಬ್ಬಿ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಕೇಲವು ಇಲ್ಲಾದ ವದಂತಿಗಳು ಹರಿದಾಡುತ್ತಿವೆ ಈ ಸಲ್ಲದ ವದಂತಿಗಳಿಗೆ ಯಾವುದೇ ನಮ್ಮ ಕಾರ್ಯಕರ್ತರು ಕಿವಿಗೂಡದೆ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೆಚ್ಚಿನ ಹೋತ್ತು ನಿಡಬೇಕಾಗಿದೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಲ್ಲರೂ ಒಟ್ಟಾಗಿ ಪಕ್ಷದ ಪರವಾಗಿ ಕೇಲಸ ಮಾಡಲು ಬದ್ಧರಾಗಿದ್ದೆವೆ ಮುಂಬರುವ ಸ್ಥಳೀಯ ಚುನಾವಣೆ ಹಾಗು ಎಂಎಲ್ ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುವ ಕೆಲಸಕ್ಕೆ ಸಿದ್ದರಿದ್ದೇವೆ ಎಂದು ತಿಳಿಸಿದರು.
ಗುಬ್ಬಿ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆಂಬ ಮಾತುಗಳು ಕೇಳಿಬರುತ್ತಿವೆ ಅದು ಅಕ್ಷರಶಃ ಸತ್ಯಕ್ಕೆ ದೂರವಾದುದು ಕಾಂಗ್ರೆಸ್ ಪಕ್ಷದಲ್ಲಿ ಆನೇಕ ನಾಯಕರು ಒಬ್ಬ ಸಾಮಾನ್ಯ ಕಾರ್ಯಕರ್ತನಿಗಿ ಕೇಲಸ ಮಾಡಿ ಪಕ್ಷ ಕಟ್ಟಿ ಬೆಳಸಿ ಉಳಿಸಿ ಇಂದಿಗೂ ಪಕ್ಷದಲ್ಲಿ ನಿಷ್ಠೆಯಿಂದ ಪಕ್ಷ ಸಂಘಟನೆ ಮಾಡುತ್ತಿರುವ ನಾಯಕರು ನಮ್ಮಲ್ಲಿದ್ದಾರೆ ಅದರೆ ಬೇರೆ ಪಕ್ಷದಿಂದ ವಲಸೆ ಬಂದ ನಾಯಕರಿಗೆ ಅಧ್ಯತೆ ನಿಡುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದರು.

ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಮ್ ಪಾಷಾ ಮಾತನಾಡಿ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವ ಬಗ್ಗೆ ಸಾಕಷ್ಟು ಗೊಂದಲ ನಮ್ಮ ಪಕ್ಷದಲ್ಲಿ ಮೂಡುತ್ತಿದೆ. ಈಗಲೇ ಗೊಂದಲ ಮೂಡಿದರೆ ಪಕ್ಷ ಸಂಘಟನೆ ಕಷ್ಟವಾಗುತ್ತದೆ.
ಈಗಾಗಲೇ ಹಾಲಿ ಶಾಸಕರು ಕೊಳೆತ ಬದನೆಕಾಯಿ ಅವರ ಪಕ್ಷದ ರಾಜ್ಯ ನಾಯಕರು ಹಾಗು ನಮ್ಮ ಗುಬ್ಬಿ ಕ್ಷೇತ್ರದ ಜನತೆ ಅವರನ್ನು ತಿರಸ್ಕಾರ ಮಾಡಿದ್ದಾರೆ ಸತತವಾಗಿ 15 ವರ್ಷ ದಿಂದ ತಾಲ್ಲೂಕಿನ ಜನತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ವಂಚಿತರಾಗಿದ್ದಾರೆ ಗುಬ್ಬಿ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳು ಭದ್ರವಾಗಿದೆ. ಸೋಲು ಕಂಡು ಓಡಿ ಹೋಗುವ ಅಭ್ಯರ್ಥಿಗಳು ನಮ್ಮಲ್ಲಿ ಯಾರೂ ಇಲ್ಲ ಅಥವಾ ವಲಸೆ ಬರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಅನಿವಾರ್ಯತೆ ಈ ಬಾರಿ ನಮ್ಮಲ್ಲಿ ಇಲ್ಲ. ನಮ್ಮಲ್ಲೇ ಉತ್ತಮ ಅಭ್ಯರ್ಥಿಗಳಾಗಿ ಹೊನ್ನಗಿರಿಗೌಡ, ಎಂ
ವಿ.ಶ್ರೀನಿವಾಸ್ ಮತ್ತು ಜಿ.ಎಸ್.ಪ್ರಸನ್ನಕುಮಾರ್ ಈ ಮೂರು ಜನ ತಾಲ್ಲೂಕಿನ ಅಭಿವೃದ್ಧಿ ಮಾಡುವಂತ ಸಮರ್ಥವಾದ ಅಭ್ಯರ್ಥಿಗಳು ಇದ್ದಾರೆ. ಈ ಮೂವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಗುಬ್ಬಿ ತಾಲ್ಲೂಕಿನ ಎಲ್ಲಾ ಕಾರ್ಯಕರ್ತರು ಒಮ್ಮತದಲ್ಲಿ ಕೆಲಸ ಮಾಡಲು ಸಿದ್ದರಿದ್ದೇವೆ. ಆದರೆ ಐದು ವರ್ಷ ಸತತವಾಗಿ ಕ್ಷೇತ್ರದಲ್ಲಿ ಪಕ್ಷ ಕಟ್ಟಿದವರನ್ನು ಬಿಟ್ಟು ವಲಸೆ ಬಂದವರಿಗೆ ಮಣೆ ಹಾಕಿದ್ದಲ್ಲಿ ಮಾತ್ರ ಸಲ್ಲದ ಗೊಂದಲಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂದು ನೇರ ಸಂದೇಶವನ್ನು ಜೀಲ್ಲೆಯ ನಾಯಕರಿಗೆ ಹಾಗು ಹೈಕಮಾಂಡ್ ನಾಯಕರಿಗೆ ನೀಡಿದರು.

ಮುಖಂಡರಾದ ಜಿ ಎಸ್ ಪ್ರಸನ್ನಕುಮಾರ್ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಮ್ಮ ಸಂಬಂಧಿ ಎಂದು ಹೇಳಿದ ಗುಬ್ಬಿ ಶಾಸಕರು ಅವರು ಚುನಾವಣೆ ಸಂದರ್ಭದಲ್ಲಿ ನನಗೆ ಸಹಕಾರ ನೀಡಿದ್ದರು ಎನ್ನುವ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಗುಬ್ಬಿ ಬ್ಲಾಕ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಜಿಲ್ಲಾ ಕಾರ್ಯದರ್ಶಿ ಎಂ.ವಿ.ಶ್ರೀನಿವಾಸ್, ಮುಖಂಡರಾದ ಟಿ.ಆರ್.ಚಿಕ್ಕರಂಗಯ್ಯ, ಜಿ.ವಿ.ಮಂಜುನಾಥ್, ಕೆ.ಜಿ.ನಾರಾಯಣ್, ಜಿ.ಎಂ.ಶಿವಾನಂದ್, ಜಿ.ಎಸ್.ಮಂಜುನಾಥ್, ಜಿ.ಎಲ್.ರಂಗನಾಥ್, ವಿನಯ್, ಮಧು, ರೂಪಾ, ವಸಂತಮ್ಮ, ಬೃಂದಾ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!