ತುಮಕೂರು ನಗರದ ಕ್ಯಾತ್ಸಂದ್ರದಲ್ಲಿರುವ 4 ವರ್ಷದ ವಿಲಾಸ್ ಪಿ. ಅವರು ಹ್ಯಾಂಡ್ ಶ್ಯಾಡೋ ಫೊಟೋಗ್ರಫಿಯಲ್ಲಿ ಅದ್ವಿತೀಯ ಸಾಧನೆ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ.
ನಗರದ ಕ್ಯಾತ್ಸಂದ್ರದ ಸುನೀತ ಮತ್ತು ಪುನೀತ್‌ಕುಮಾರ್ ಎಂಬ ದಂಪತಿಗಳ 4 ವರ್ಷದ ಮಗು ವಿಲಾಸ್ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದು, ರಾಜ್ಯದ ರಾಜಧಾನಿಗಳ ಹೆಸರುಗಳನ್ನು ಕ್ಷಣ ಮಾತ್ರದಲ್ಲಿ ಹೇಳುತ್ತಾರೆ.
ಚಿಕ್ಕವಯಸ್ಸಿನಲ್ಲಿಯೇ ನೆರಳಿನಲ್ಲಿ ಆಟವಾಡುವುದನ್ನು ಗಮನಿಸಿದ ತಾ. ಸುನೀತಾ ಅವರು ಶ್ಯಾಡೋ ಮಾಡುವುದಕ್ಕೆ ಪ್ರೋತ್ಸಾಹ ನೀಡುತ್ತಾ ಬಂದರು. ವಿವಿಧ ಬಗೆಯ 35ಕ್ಕಿಂತ ಹೆಚ್ಚು ಪ್ರಾಣಿ, ಪಕ್ಷಿಗಳ (ನಾಯಿ, ಬೆಕ್ಕು, ಕಾಂಗರೋ, ಆನೆ), ಮನುಷ್ಯನ ಶ್ಯಾಡೋ ಚಿತ್ರಗಳನ್ನು ಕೈಯಲ್ಲೇ ಮೂಡಿಸುತ್ತಾರೆ.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಅಸಾಧ್ಯವಾದುದನ್ನು ಸಾಧಿಸಬಹುದು ಎನ್ನುತ್ತಾರೆ ಈ ಪುಟ್ಟ ಮಗುವಿನ ಪೋಷಕರು.
ನಾಲ್ಕು ವರ್ಷದ ವಿಲಾಸ್ ಗುರುಕುಲ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿಲಾಸ್ ಪ್ರತಿಭೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಸಹ ಪ್ರೋತ್ಸಾಹ ನೀಡುತ್ತಿದ್ದಾರೆ.