ತುಮಕೂರಿನ ಬಟವಾಡಿ ಬಳಿಯ 35ನೇ ವಾರ್ಡಿನಲ್ಲಿ ಬರುವ ಸಾಬರ ಪಾಳ್ಯದಲ್ಲಿ ಎಂದು ಪಾಲಿಕೆ ವತಿಯಿಂದ ರಸ್ತೆಗೆ ಅಡ್ಡಲಾಗಿ ಇದ್ದ ಮನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.
ಇನ್ನು ಪಾಲಿಕೆ ಆಯುಕ್ತರಾದ ರೇಣುಕಾ ರವರ ನೇತೃತ್ವದಲ್ಲಿ ರಸ್ತೆ ತೆರವು ಕಾರ್ಯಾಚರಣೆ ಕೈಗೊಂಡಿದ್ದು ಇದೇ ಸಂದರ್ಭದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಮಹಾಪೌರರಾದ ಬಿಜಿ ಕೃಷ್ಣಪ್ಪ, ಪಾಲಿಕೆ ಇಂಜಿನಿಯರ್ಗಳು ,ಅಧಿಕಾರಿಗಳು ,ಸ್ಥಳೀಯ ಪೊಲೀಸರ ನೆರವಿನೊಂದಿಗೆ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾದ ರೇಣುಕಾ ರವರು ಮಾತನಾಡಿ ಬಟವಾಡಿ ಇಂದ ರಿಂಗ್ ರಸ್ತೆ ರೋಟಿ ಘರ್ ವರೆಗೆ ಪಿಡಬ್ಲ್ಯೂಡಿ ಇಲಾಖೆಯಿಂದ ಸುಮಾರು 5 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು ಇನ್ನು ರಸ್ತೆಗೆ ಅಡ್ಡಲಾಗಿ ಇದ್ದ ಮನೆಗಳಿಂದ ರಸ್ತೆ ಅಭಿವೃದ್ಧಿ ಕಾರ್ಯ ನಿಂತಿತ್ತು ಈಗ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಅಡ್ಡ ಲಾಗಿದ್ದ ಕಟ್ಟಡಗಳನ್ನು ಮಾರ್ಕ್ ಮಾಡಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಇನ್ನು ತೆರವು ಕಾರ್ಯಾಚರಣೆಗೆ ಸ್ಥಳೀಯ ನಿವಾಸಿಗಳು ಒಪ್ಪಿಕೊಂಡಿದ್ದು ಅವರು ಸಹ ಸಹಕರಿಸುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ವತಿಯಿಂದ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲಾಗುವುದು ಇದಕ್ಕೆ ಸ್ಥಳೀಯ ಕುಟುಂಬಗಳು ಸಹ ಒಪ್ಪಿಗೆ ನೀಡಿದ್ದು ಯಾವುದೇ ಆತಂಕವಿಲ್ಲದೆ ಸ್ಥಳೀಯರ ನೆರವಿನೊಂದಿಗೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.
ಇದೆ ಸಂದರ್ಭದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಕೃಷ್ಣಪ್ಪರವರು ಮಾತನಾಡಿ ಇನ್ನು ರಸ್ತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ಥಳೀಯರು ಸಹ ಕೈಜೋಡಿಸಿದ್ದು ಸ್ವಯಂಪ್ರೇರಿತವಾಗಿ ತಮ್ಮ ಕಟ್ಟಡಗಳನ್ನು ತೆರವುಗೊಳಿಸಲು ಒಪ್ಪಿಕೊಂಡಿದ್ದಾರೆ ಅದರಂತೆ ಇಂದು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.