ಕರುನಾಡು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕೋಲಾರ, ತನುಶ್ರೀ ಪ್ರಕಾಶನ ಸೂಲೇನಹಳ್ಳಿ , ವಿಚಾರ ಮಂಟಪ ಸಾಹಿತ್ಯ ವೇದಿಕೆ – ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ವಿಶೇಷ ಉಪನ್ಯಾಸ ಮತ್ತು ಮುಕ್ತ ಸಂವಾದ ಕಾರ್ಯಕ್ರಮವನ್ನು ದಿನಾಂಕ : 03.10.2021 ರಂದು ಗೂಗಲ್ ಮೀಟ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಗುಡಿಬಂಡೆಯ ಖ್ಯಾತ ಪಾರಂಪಾರಿಕ ಸ್ವಾಸ್ಥ್ಯ ಆಯು ನಾಟಿ ಔಷದ ತಜ್ಞರಾದ ಶ್ರೀ ಫಯಾಜ್ ಅಹಮದ್ ಖಾನ್ ಅವರು ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ಬಿಲ್ವ, ಹಿಪ್ಪಲಿ, ಬೆಳ್ಳುಳ್ಳಿ, ಅಮೃತಬಳ್ಳಿ, ಮುಟ್ಟಿದರೆ ಮುನಿ, ಪುನರ್ನವ, ಕರ್ಪೂರ, ಸಾಸಿವೆ, ಹರಿಶಿಣ, ಶುಂಠಿ, ಏಲಕ್ಕಿ, ಮುದುರು ಬೆಂಡೆ, ಮುಂತಾದ ೧೫ ಕ್ಕೂ ಹೆಚ್ಚಿನ ಸುಲಭದಲ್ಲಿ ಲಭ್ಯವಾಗುವ ಅತ್ಯುಪಯುಕ್ತವಾದ ಗಿಡ ಮೂಲಿಕೆಗಳ ಕುರಿತು ವಿವರವಾದ ಮಾಹಿತಿ ನೀಡಿದಲ್ಲದೇ, ಗ್ಯಾಸ್ಟ್ರಿಕ್, ಮೂಲವ್ಯಾದಿ, ಅಜೀರ್ಣ, ನಿಶ್ಯಕ್ತಿ, ಮುಂತಾದ ಹಲವು ಆರೋಗ್ಯ ಸಮಸ್ಯಗಳಿಗೆ ಸುಲಭ ಪರಿಹಾರ ಕ್ರಮಗಳನ್ನು ವಿವರಿಸಿದರು. ಹಾಗೂ ಸಂವಾದದಲ್ಲಿ ಹಲವರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ತಿಳಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಾನ್ಯ ಗಣಪತಿ ಛಲವಾದಿ ಅವರು ಮಾತನಾಡುತ್ತಾ ‘ಆರೋಗ್ಯವೆ ಭಾಗ್ಯ’ ಆರೋಗ್ಯ ಒಂದಿದ್ದರೆ ನಾವು ಏನನ್ನಾದರೂ ಸಾಧಿಸಬಹುದು ಎಂದು ಹೇಳಿ.ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಆಯೋಜಕರಿಗೆ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ರಾಜು ಎಸ್ ಸೂಲೇನಹಳ್ಳಿ, ಶ್ರೀ ಅಕ್ರಂಪಾಷ ಕೆ ಎನ್, ಶ್ರೀ ರಾಜ್ ಕುಮಾರ ವಿ, ಶ್ರೀ ವರುಣ್ ರಾಜ್ ಜೀ, ಶ್ರೀ ಅಂಜನ್ ಕುಮಾರ್ ಪಿ ಆರ್, ಕುಮಾರಿ ಪ್ರೇಮ ಈ, ಶ್ರೀ ಹರೀಶ ಪಿ ಎ, ಮುಂತಾದವರು ಉಪಸ್ಥಿತರಿದ್ದರು.