ಗುಬ್ಬಿ ತಾಲ್ಲೂಕಿನ ತಾಲೂಕು ಕಛೇರಿ ಹಿಂಭಾಗದಲ್ಲಿ ಇರುವ ಹಳೆಯ ತಾಲೂಕು ಕಛೇರಿಯ ಕಟ್ಟಡಕ್ಕೆ ಸರಿ ಸುಮಾರು ನೂರು ವರ್ಷಗಳ ಇತಿಹಾಸವಿದೆ ಈ ಕಟ್ಟದಲ್ಲಿ ಇಂದಿಗೂ ಪೊಲೀಸ್ ವೃತ್ತ ನಿರಿಕ್ಷಕರ ಕಛೇರಿ ರಾಜಸ್ವ ನಿರಿಕ್ಷಕರ ಕಛೇರಿ ಹಾಗು ಕೆಲವು ಹೋಬಳಿಯ ಕಂದಾಯ ನಿರಿಕ್ಷಕರ ಕಛೇರಿಗಳು ಇದ್ದು ಈ ಕಛೇರಿಗಳಿಗೆ ಗುಬ್ಬಿ ತಾಲ್ಲೂಕಿನ ಕೆಲವು ಗ್ರಾಮೀಣ ಪ್ರದೇಶದ ರೈತರು ವಯೋ ವೃದ್ದರು ತಮ್ಮ ಕೆಲಸ ಕಾರ್ಯಗಳನ್ನ ಮಾಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನವೂ ಬರುತ್ತಿರುತ್ತಾರೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಕಟ್ಟಡ ಈಗಾಗಲೇ ಸಂಪೂರ್ಣ ಶಿಥಿಲಗೂಂಡಿದ್ದು ಯಾವ ಸಂದರ್ಭದಲ್ಲಿ ಬೇಕಾದರೂ ನೆಲಕ್ಕೂರುಳುವ ಪರಿಸ್ಥಿತಿ ನಿರ್ಮಾಣವಾಗಿದೆ .
ಈ ಶಿಥಿಲಗೂಂಡಿರುವ ಕಟ್ಟಡದಲ್ಲಿ ಸಾಕಷ್ಟು ಸರ್ಕಾರಿ ದಾಖಲೆಗಳು ಇದ್ದು ಈಗಾಗಲೇ ಮಳೆಗಾಲವಾಗಿರುವುದರಿಂದ ಮಳೆ ನೀರು ಬಿದ್ದು ದಾಖಲೆಗಳು ಹಾಳಾಗಿ ಹೋದರೆ ಜವಾಬ್ದಾರಿ ಯಾರು ಎಂಬ ಪ್ರಶ್ನೆ ತಾಲ್ಲೂಕಿನ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ .
ಈ ಸಂಬಂಧವಾಗಿ ಶಿಥಿಲಗೂಂಡಿರುವ ಕಟ್ಟಡವನ್ನು ದುರಸ್ಥಿ ಮಾಡಿಸುವಂತೆ ತಾಲ್ಲೂಕಿನ ತಹಶೀಲ್ದಾರ್ ರವರಿಗೆ ತಾಲ್ಲೂಕಿನ ಸಾಮಾಜಿಕ ಹೋರಾಟಗಾರರು ಅಲವಾರು ಭಾರಿ ಮನವಿ ಮಾಡಿದರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಇಲ್ಲಿಗೆ ಬರುವ ರೈತರಿಗೆ ಹಾಗುಸಾರ್ವಜನಿಕರಿಗೆ ತೊಂದರೆ ಅದರೆ ಇದಕ್ಕೆ ನೇರವಾಗಿ ತಾಲೂಕು ಆಡಳಿತ ಹೊಣೆಗಾರಿಕೆ ಯಾಗಬೇಕಾಗುತ್ತದೆ ಎಂಬುದು ಸಾರ್ವಜನಿಕರ ಹೋತ್ತಾಯವಾಗಿದೆ
ವರದಿ ಯೋಗೀಶ್ ಮೇಳೇಕಲ್ಲಹಳ್ಳಿ