ಶಿರಸಿ: ಕುಮಾರಿ ಪೂಜಾ ಸತೀಶ್ ನಾಯ್ಕ ಇವರು ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಸ್ನಾತಕೋತ್ತರ ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ, ಮೇ 2019 ರಲ್ಲಿ ಜರುಗಿದ ಎಮ್.ಎಸ್ ಸಿ ಭೌತ ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ಸರ್ವೋಚ್ಚ ಸ್ಥಾನ ವನ್ನು ಪಡೆದಿರುವದರಿಂದ “ಮಿಸ್ ಕೀರ್ತಿ ಸಂಗೋರಾಮ”
ಬಂಗಾರದ ಪದಕ ಪ್ರದಾನ ವಾಗಿದೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಯಡಳ್ಳಿಯ ಗ್ರಾಮೀಣ ಪ್ರದೇಶದ ಪ್ರತಿಭೆಯಾದ ಕುಮಾರಿ ಪೂಜಾ ಅವರು ಶ್ರೀಮತಿ ಗಾಯತ್ರಿ ಮತ್ತು ಶ್ರೀ ಸತೀಶ್ ಮಂಜಪ್ಪ ನಾಯ್ಕ ಅವರ ಸುಪುತ್ರಿ.ಸತತ ಪರಿಶ್ರಮ, ಕಲಿಕೆಯ ಇಚ್ಚಾಶಕ್ತಿ, ಸಾಧನೆಯ ಹಂಬಲದೊಂದಿಗೆ ತನ್ನನ್ನು ತಾನು ತೊಡಗಿಸಿಕೊಂಡು ಬಂಗಾರದ ಪದಕ ಪಡೆಯುವಲ್ಲಿ ಗುರಿ ತಲುಪಿ ವಿಜಯಿಯಾಗಿದ್ದಾರೆ. ವಿದ್ಯಾರ್ಥಿನಿ ಪೂಜಾ ಅವರ ಈ ಸಾಧನೆಗಾಗಿ ಶಿಕ್ಷಕ ವೃಂದ,ತಂದೆ-ತಾಯಿ,ಸ್ನೇಹಿತರು, ಬಂದು-ಮಿತ್ರರು,ಹಿತೈಷಿಗಳು ಅವರನ್ನು ಅಭಿನಂದಿಸಿ ಮುಂದಿನ ಜೀವನ ಉಜ್ವಲವಾಗಲಿ ಎಂದು ಶುಭಕೋರಿದ್ದಾರೆ.
ವರದಿ: ಸ್ಪೂರ್ತಿ ಎನ್ ಶೇಟ್