ಗೋಕರ್ಣ: ತಾಲೂಕಿನ ಗೋಕರ್ಣದ ರುದ್ರಪಾದ ಸಮುದ್ರದಲ್ಲಿ ರವಿವಾರ ನಡೆದಿದೆ.ಬೆಂಗಳೂರು ಮೂಲದ ನಿವಾಸಿ ರವಿನಂದನ (23) ನೀರು ಪಾಲಾದ ಪ್ರವಾಸಿಗ ಎಂಬ ಮಾಹಿತಿ ದೊರೆತಿದೆ. ಸಮುದ್ರದಲ್ಲಿ ಈಜಲು ತೆರಳಿದ್ದ ಬೆಂಗಳೂರು ಮೂಲದ ಪ್ರವಾಸಿಗನೊಬ್ಬ ನೀರು ಪಾಲಾದ ಘಟನೆ ನಡೆದಿದೆ.
ಗೋಕರ್ಣದ ರುದ್ರಪಾದ ಸಮುದ್ರಕ್ಕೆ ಈಜಲು ಹೋದಾಗ ಅಲೆಯ ರಭಸಕ್ಕೆ ಕೊಚ್ಚಿ ನೀರು ಪಾಲಾಗಿದ್ದಾನೆ. ಈತ ಗೆಳೆಯರ ಜೊತೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ. ಈತ ಸಿ.ಎ ಅಭ್ಯಾಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಘಟನೆ ನಡೆದ ಸ್ಥಳಕ್ಕೆ ಗೋಕರ್ಣ ಪಿ.ಎಸ್.ಐ ನವೀನ ನಾಯ್ಕ ಹಾಗೂ ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ, ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ವರದಿ-ಸುಚಿತ್ರಾ ನಾಯ್ಕ ಹೊನ್ನಾವರ