ಮಸ್ಕಿ:ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಇಟಗಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಜಮದಗ್ನಿ ಎಂಬ ಯುವಕನ ಮೇಲೆ ಅಲ್ಲಿನ ಮೇಲ್ಜಾತಿಯ ಜನರು ಕೊಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಇನ್ನಿತರ ದಲಿತರಿಗೆ ಗಂಭೀರವಾದ ಗಾಯಗಳಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ವಹಿಸಿ ಹಲ್ಲೆ ನಡೆಸಿದ ಮೇಲ್ಜಾತಿಯವರ ಪ್ರಕರಣವನ್ನು ಮೊದಲು ದಾಖಲಿಸಿಕೊಂಡಿದ್ದಾರೆ. ಮೃತಪಟ್ಟ ಜಮದಗ್ನಿ ಕುಟುಂಬಕ್ಕೆ ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆಯವರು ಹಲ್ಲೆ ನಡೆಸಿದ ಲಕ್ಷ್ಮಿಕಾಂತ ರೆಡ್ಡಿ ಎಂಬ ಗೂಂಡಾ ಮನೆಗೆ ಕಾವಲುಗಾರರಾಗಿ ಕಾಯುತ್ತಿರುವುದು ದುರ್ದೈವದ ಸಂಗತಿ.
ಈ ಘಟನೆ ಗಂಭೀರವಾಗಿ ಪರಿಗಣಿಸಿ ಕುನ್ನಟಗಿ ಗ್ರಾಮದ ದಲಿತರಿಗೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು. ಮತ್ತು ಜಮದಗ್ನಿ ಸಾವಿಗೆ ಕಾರಣವಾದವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಈ ಮೂಲಕ ಗ್ರಹಿಸಲಾಗುತ್ತದೆ. 11 ಜನರ ಮೇಲೆ ಹಾಕಿದ ಸುಳ್ಳು ಕೇಸನ್ನು ಕೂಡಲೇ ವಜಾಗೊಳಿಸಬೇಕು ಆತನ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರೂಪಾಯಿ ಪರಿಹಾರದೊಂದಿಗೆ ಮೂರು ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ ಸರಕಾರದಿಂದ ಬರಿಸುವ ಉಚಿತ ಶಿಕ್ಷಣ ನೀಡಬೇಕೆಂದು ಆಗ್ರಹಿಸಲಾಗುತ್ತದೆ. ಮುಖ್ಯವಾಗಿ ನಿಮ್ಮ ಪಕ್ಷ ಮತ್ತು ಸರ್ಕಾರದಲ್ಲಿರುವ ಕೆಲವು ಸಚಿವರು ಜಾತಿವ್ಯವಸ್ಥೆಯನ್ನು ಸಮರ್ಥಿಸುವ ಮುತ್ತು ಸಂವಿಧಾನವನ್ನು ಬದಲಾಯಿಸುವ ಮಾತನಾಡಿರುವುದು ರಿಂದಲೇ ಇಂತಹ ಬೆಳವಣಿಗೆಯಿಂದಲೇ ಗ್ರಾಮೀಣ ಭಾಗದಲ್ಲಿ ಗೃಹಿಣಿ ಮನಸ್ಸಿನ ಜಾತಿವಾದಿಗಳು ಇನ್ನಷ್ಟು ಪ್ರಚೋದನೆಗೊಂಡು ದಲಿತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಸರ್ಕಾರ ಮತ್ತು ನಮ್ಮ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ತಾಲೂಕ ದಂಡಾಧಿಕಾರಿಗಳಾದ ಆರ್. ಕವಿತಾ ಕೆಎಎಸ್ ಇವರಿಗೆ ಛಲವಾದಿ ಮಹಾಸಭಾ ಮನವಿ ಮಾಡಿತು.
ನಂತರ ಮಾತನಾಡಿದ ದಂಡಾಧಿಕಾರಿಗಳಾದ ಆರ್ .ಕವಿತಾ ಇವರು ಮಸ್ಕಿ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದರಾಮ ಬಿದರಾಣಿ ಇವರಿಗೆ ನಿಮ್ಮ ಪೊಲೀಸ್ ಠಾಣೆ ವ್ಯಾಪ್ತಿಗೊಳಪಡುವ ದಲಿತರ ಮೇಲಿನ ಹಲ್ಲೆ ಮತ್ತು ದೌರ್ಜನ್ಯದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಿ, ನ್ಯಾಯ ಒದಗಿಸಿಕೊಡಲು ಪ್ರಾಮಾಣಿಕ ಸೇವೆ ಮಾಡಿ ಎಂದು ಹೇಳಿದರು.
ಈ ವೇಳೆಯಲ್ಲಿ ಮಲ್ಲಪ್ಪ ಎಸ್ ಗೋನಾಳ್, ಯಮನಪ್ಪ ತಳವಾರ, ಮೌನೇಶ್ ಅಮೀನಗಡ, ವೆಂಕೋಬ ಯದ್ದಲ ದಿನ್ನಿ, ಅಶೋಕ ಕಟ್ಟಿಮನಿ, ಹುಚ್ಚಪ್ಪ ಬಸಾಪುರ, ಸುರೇಶ್ ಬಸಾಪುರ, ಹುಲುಗಪ್ಪ ಹಸಮಕಲ್, ಹಾಗೆಯೇ ಸೈಯದ್ ಅಖ್ತರ್ ಅಲಿ ಶಿರಸ್ತೇದಾರರು, ಮಸ್ಕಿ ಠಾಣೆಯ ಪೊಲೀಸ್ ಸಿಬ್ಬಂದಿ ವರ್ಗ ಸೇರಿದಂತೆ ಇನ್ನಿತರರಿದ್ದರು.
ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,