ರಾಶಿ ಭವಿಷ್ಯ: ದಿನಾಂಕ 26/10/2021 ಮಂಗಳವಾರ

ಮೇಷ : ಬೆಳಗಿನ ಆರಂಭ ತುಂಬಾ ಚೆನ್ನಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಗತಿಯನ್ನು ಕ್ರಮೇಣ ಕಾಣಬಹುದು. ಯಾವುದೇ ದೊಡ್ಡ ವ್ಯಾಪಾರ ಸಂಬಂಧಿತ ಸಮಸ್ಯೆಯನ್ನು ಮಂಗಳವಾರ ಪರಿಹರಿಸಬಹುದು.

ವೃಷಭ : ಅನಿರೀಕ್ಷಿತ ಧನಾಗಮನವಾಗಲಿದೆ. ಒತ್ತಡದಿಂದ ದಿನ ಕಳೆಯುವಿರಿ. ವೈಯಕ್ತಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಕುಟುಂಬದ ಸದಸ್ಯರೊಂದಿಗೆ ಸಂತಸದಿಂದ ದಿನ ಕಳೆಯುವಿರಿ. ದೂರದ ಪ್ರಯಾಣ ಕೈಗೊಳ್ಳುವಿರಿ. ಹೊಸ ವ್ಯವಹಾರ ಶುರು ಮಾಡುವಿರಿ.

ಮಿಥುನ : ಕಲಾವಿದರಿಗೆ ಇಂದು ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಹಿಂದೆಂದೋ ಕೂಡಿಟ್ಟ ಹಣವು ಇಂದು ನಿಮ್ಮನ್ನು ದೊಡ್ಡ ಕಷ್ಟದಿಂದ ಪಾರು ಮಾಡಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಗುರು ಅನುಗ್ರಹ ಇರಲಿದೆ.

ಕಟಕ : ಸ್ನೇಹಿತರಲ್ಲಿಯ ಮನಸ್ತಾಪ ದೂರಾಗುವುದು. ಶಕ್ತಿ ಮೀರಿ ದುಡಿಯುವ ಕಾರ್ಯಭಾರವಿರುವುದು. ನಿಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳುವ ಮೂಲಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ನೀವು ಹೊಸದಾಗಿ ಆರಂಭಿಸಬೇಕಾಗುತ್ತದೆ.

ಸಿಂಹ : ನಿಮ್ಮ ಕೆಲಸದ ನಿಷ್ಠೆಯೂ ಮತ್ತಷ್ಟು ಹೆಚ್ಚಿನ ಜವಾಬ್ದಾರಿ ತಂದು ಕೊಡುತ್ತದೆ. ಹಿರಿಯರು ನಿಮ್ಮ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಅವರ ಪ್ರತಿಯೊಂದು ಆಶಾ ಕಿರಣ ನೀವೇ ಆಗಿರುವಿರಿ. ಕೆಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಸಂದಿಗ್ಧ ಪರಿಸ್ಥಿತಿಗೆ ಸಿಲುಕುವ ನೀವು ಮಾನಸಿಕವಾಗಿ ತೊಂದರೆ ಅನುಭವಿಸುವ ಸ್ಥಿತಿ.

ಕನ್ಯಾ : ಅಗೌರವ ಆಗುವ ಸಂಭವ ಇರುವುದರಿಂದ ಸೂಕ್ಷ್ಮವಾಗಿರುವುದು ಉತ್ತಮ. ಅನಪೇಕ್ಷಿತರಿಗೆ ಉಪಕಾರ ಮಾಡುವುದು ಸರಿಯಲ್ಲ. ಮಕ್ಕಳ ಚಿಂತೆ ಇರುವುದು. ವಧುವರರಿಗೆ ಮದುವೆಯ ಯೋಗ ಕೂಡಿಬರುವುದು.  ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಏರ್ಪಡುವ ಸಾಧ್ಯತೆ ಇದೆ.

ತುಲಾ : ಇಂದು ಕಚೇರಿಯಲ್ಲಿ ನಿಮ್ಮ ಯಾವುದೇ ಪ್ರಮುಖ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ, ಅದು ನಿಮಗೆ ಸಮಾಧಾನವನ್ನು ನೀಡುತ್ತದೆ. ಇದರೊಂದಿಗೆ ಉನ್ನತ ಅಧಿಕಾರಿಗಳು ನಿಮ್ಮ ಶ್ರಮವನ್ನು ಶ್ಲಾಘಿಸುತ್ತಾರೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಇಂದು ಮಿಶ್ರ ದಿನ.

ವೃಶ್ಚಿಕ : ಅಧಿಕಾರಿಗಳ ಜೊತೆ ಮಾತನಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ, ಉದ್ಯಮ ಒಡಂಬಡಿಕೆ ಸಾಧ್ಯತೆ, ಪ್ರೇಮಿಗಳಲ್ಲಿ ಕಾಮಪ್ರಚೋದನೆ ನಿಯಂತ್ರಿಸುವುದು ಬಹಳ ಮುಖ್ಯ, ನೆರೆಹೊರೆಯವರೊಂದಿಗೆ ಗೊಂದಲ ಸಾಧ್ಯ, ಹೊಸ ಸಂಬಂಧ ಜೊತೆ ಮದುವೆ ಬಲ ಕೂಡಿ ಬರುತ್ತದೆ.

ಧನು : ಉದ್ಯೋಗ ವಿಳಂಬ ಸಾಧ್ಯತೆ, ಪ್ರಯಾಣ ಮುಂದೂಡುವುದು ಒಳಿತು, ಮಹಿಳೆಯರು ಧರಿಸಿರುವ ಆಭರಣಗಳ ಬಗ್ಗೆ ಜಾಗ್ರತೆ ಇರಲಿ, ಗುತ್ತಿಗೆದಾರರಿಗೆ ಅನುದಾನದ ಕೊರತೆ ಎದುರಾಗಬಹುದು, ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವವರಿಗೆ ಅನುದಾನದ ಕೊರತೆ.

ಮಕರ : ಮನರಂಜನೆ ಮತ್ತು ಮೋಜಿನ ಹವ್ಯಾಸಗಳಿಂದ ಧನಹಾನಿ, ಕೂಡಿಟ್ಟ ಹಣ ದುಃಖದ ಸಮಯದಲ್ಲಿ ಲಾಭ ಆಗಲಿದೆ, ನಿಮ್ಮ ಪ್ರೀತಿಯ ಜೀವನದಲ್ಲಿ ಕಹಿಘಟನೆಗಳನ್ನು ಕ್ಷಮಿಸಿ ಒಂದಾಗಿ, ಅರ್ಥಮಾಡಿಕೊಳ್ಳದೆ ದಾಖಲೆಗಳ ಮೇಲೆ ಸಹಿ ಮಾಡಬೇಡಿ.

ಕುಂಭ : ಈ ದಿನ ನಿಮ್ಮ ಜೀವನದಲ್ಲಿ ಕೆಲವು ನಿರ್ದಿಷ್ಟ ನಿರ್ಧಾರ ಧನಾತ್ಮಕ ಬದಲಾವಣೆಗಳನ್ನು ತರುತ್ತಿದೆ. ಇದರಿಂದ ನೀವು ಉತ್ತಮ ಸಾಧನೆಗಳನ್ನು ಪಡೆಯುತ್ತೀರಿ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆ ಮತ್ತು ಪ್ರಾಬಲ್ಯ ಮತ್ತಷ್ಟು ಹೆಚ್ಚಾಗುತ್ತದೆ.

ಮೀನ : ನಿಮ್ಮ ಮನೆಬಾಗಿಲಲ್ಲಿ ಅದೃಷ್ಟ ಲಕ್ಷ್ಮೀ ಒಲಿದು ಬರುತ್ತಾಳೆ. ಆರೋಗ್ಯ ಸುಧಾರಣೆಯಾಗುವುದು. ಸ್ಥಿತಿಗಳು ಅನುಕೂಲಕರವಾಗಿ ಮುಂದವರೆಯುವುದು. ಗ್ರಹಸುಖ ಯೋಗವು ಇದೆ. ಮನೋಚಿಂತಿತ ಕನಸು ನನಸಾಗಲಿದೆ. ವಿವಾಹ ಸಂಬಂಧಕ್ಕೆ ಹುಡುಕಾಟ ನಡೆಸುತ್ತಿರುವವರಿಗೆ ಕಂಕಣಬಲ ಕೂಡಿ ಬರಲಿದೆ.

Leave a Reply

Your email address will not be published. Required fields are marked *

error: Content is protected !!