ಮೇಷ: ನೆನಪು ಮರುಕಳಿಸುತ್ತದೆ. ವ್ಯಾಪಾರಸ್ಥರಿಗೆ ಲಾಭದ ಸಾಧ್ಯತೆ. ಯಾವುದೇ ಅಡೆತಡೆ ಇಲ್ಲದೆ ನಿರಾತಂಕ ಜೀವನ ಇರುವುದು. ಸಾಮಾಜಿಕ ಕಾರ್ಯಗಳಿಂದ ಗೌರವಾದರಗಳು ದೊರೆಯುವವು. ಆಶೆಗೆ ತಕ್ಕಂತೆ ಫಲಗಳು ಕೈಗೂಡುವವು. ಬಂಧುಗಳಲ್ಲಿ ಮನಸ್ತಾಪ ಕಂಡುಬರುವುದು.
ವೃಷಭ: ನಿಮ್ಮ ಹೊಸ ಯೋಜನೆಯನ್ನು ಕಾರ್ಯಗತಗೊಳಿಸಿ. ಹಿರಿಯರ ಮಾರ್ಗದರ್ಶನದಿಂದ ಕಷ್ಟಕರ ಪರಿಸ್ಥಿತಿ ಮತ್ತು ಸಾಲ ಪರಿಹಾರ, ಸಾಲ ನೀಡುವಾಗ ಸ್ವಲ್ಪ ಜಾಗೃತಿವಹಿಸಿ, ಅವಶ್ಯಕತೆ ಇದ್ದರೆ ಮಾರುಕಟ್ಟೆಗೆ ಹೋಗಿ, ವೇಗದ ವಾಹನ ಚಾಲನೆಯಿಂದ ಪೆಟ್ಟು ಸಂಭವ
ಮಿಥುನ: ನಗರ ಪ್ರದೇಶದಲ್ಲಿ ನಿವೇಶನ ಖರೀದಿಸುವ ಸಾಧ್ಯತೆ, ಹಣಕಾಸಿನ ವಿಚಾರದಲ್ಲಿ ಮಧ್ಯಮ ಫಲಶ್ರುತಿ, ಹೊಸ ಉದ್ಯಮ ಪ್ರಾರಂಭಿಸುವುದು ಸದ್ಯಕ್ಕೆ ಬೇಡ, ಉದ್ಯೋಗ ಕ್ಷೇತ್ರದಲ್ಲಿ ಅನಾನುಕೂಲತೆ ಎದುರಾಗುವ ಸಾಧ್ಯತೆ, ವ್ಯಾಪಾರದಲ್ಲಿ ಧನಲಾಭ.
ಕಟಕ: ಇಂದು ವ್ಯಾಪಾರಸ್ಥರಿಗೆ ಉತ್ತಮ ದಿನವಲ್ಲ. ಇಂದು ಲಾಭ ಗಳಿಸುವ ಉತ್ತಮ ಅವಕಾಶ ಕಳೆದುಹೋಗಬಹುದು. ಆದಾಗ್ಯೂ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ಈ ನಷ್ಟವನ್ನು ಸರಿದೂಗಿಸಲು ಶೀಘ್ರದಲ್ಲೇ ನಿಮಗೆ ಅವಕಾಶ ಸಿಗಬಹುದು. ಕಚೇರಿಯಲ್ಲಿ ಬಾಸ್ ಮನಸ್ಥಿತಿ ಚೆನ್ನಾಗಿರುವುದಿಲ್ಲ.
ಸಿಂಹ: ಇಂದು ನೀವು ಪ್ರಯತ್ನಿಸಿದ ಕಾರ್ಯಗಳು ಯಶಸ್ವಿ, ಉದ್ಯೋಗ ಬದಲಾಯಿಸುವ ಸಾಧ್ಯತೆ, ಆಸ್ತಿ ಖರೀದಿಗೆ ಧನ ಸಹಾಯ ಸಿಗಲಿದೆ, ವಿದೇಶ ಪ್ರವಾಸದ ಅಡಚಣೆ ನಿವಾರಣೆಯಾಗಲಿದೆ, ಸುವರ್ಣ ಖರೀದಿ ಸಾಧ್ಯತೆ, ನಗರ ಪ್ರದೇಶದಲ್ಲಿ ನಿವೇಶನ ಖರೀದಿಸುವಿರಿ.
ಕನ್ಯಾ: ನಿಮ್ಮ ದುಡುಕುತನದಿಂದ ಉತ್ತಮ ಅವಕಾಶ ಕೈ ತಪ್ಪುವ ಸಾಧ್ಯತೆ. ಮುಂದಿನ ಭವಿಷ್ಯದ ದೃಷ್ಟಿಕೋನದಿಂದ ಜಮೀನು ಖರೀದಿ ಸಾಧ್ಯತೆ. ಕೆಲವೊಮ್ಮೆ ಸಹೋದರ ವರ್ಗದಿಂದ ಅನಗತ್ಯವಾಗಿ ವಾದ-ವಿವಾದ ಹೆಚ್ಚಾಗಲಿದೆ. ಕಡಿಮೆ ಖರ್ಚಿನ ವ್ಯಾಪಾರ ಪ್ರಾರಂಭ ಮಾಡುವಿರಿ.
ತುಲಾ: ಉತ್ತಮ ಜೀವನಕ್ಕಾಗಿ ನಿಮ್ಮ ಆರೋಗ್ಯ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸಿ. ನಿಮಗೆ ಆಕರ್ಷಕವಾಗಿ ತೋರುವ ಯಾವುದೇ ಹೂಡಿಕೆಯ ಯೋಜನೆಯ ಬಗ್ಗೆ ಹೆಚ್ಚು ಕಂಡುಹಿಡಿಯಲು ಮೇಲ್ಮೈಗಿಂತ ಕೆಳಗೆ ಆಳವಾಗಿ ಕೆದಕಿ.
ವೃಶ್ಚಿಕ: ನೀವು ಅಂದುಕೊಂಡ ಕಾರ್ಯ ಪೂರ್ಣ ಪ್ರಮಾಣದಲ್ಲಿ ಅಲ್ಲದೇ ಹೋದರೂ ಸಹ ಅಲ್ಪ ಪ್ರಮಾಣದಲ್ಲಿ ಈಡೇರಲಿದೆ. ಅನೇಕ ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಗೂಡು ಮಾಡಿದೆ.ಇದು ಹೆಮ್ಮರವಾಗುವ ಮುನ್ನ ಬಗೆಹರಿಸಿಕೊಳ್ಳಲು ಯತ್ನಿಸಿ.
ಧನುಸ್ಸು: ಈ ದಿನ ನಿಮ್ಮ ಮಡದಿಯ ವಿಷಯಗಳಿಂದ ಆಸಕ್ತಿ ವಹಿಸಬೇಕು. ಉನ್ನತ ಶಿಕ್ಷಣ ಪಡೆದ ಬಳಿಕ ಉದ್ಯೋಗ ಪ್ರಗತಿ ಸಾಧ್ಯ. ಕುಟುಂಬದ ಸದಸ್ಯರ ಜೊತೆಗಿನ ಸಂಬಂಧ ಬಹಳ ಮುಖ್ಯ. ಸಾಲಗಾರರಿಂದ ಮನಸ್ತಾಪವಾಗುವ ವಿಚಾರ ಇರುವುದರಿಂದ ಹಣ ವಾಪಸ್ಸು ನೀಡಿ.
ಮಕರ: ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ಉದ್ಯಮಗಳಿಗೆ ಇಂದು ಅಲ್ಪಲಾಭವಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಮ್ಮ ಉದಾರ ಗುಣವು ನಿಮಗೆ ಪ್ರಶಂಸೆ ತಂದುಕೊಡಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಕುಂಭ: ಸಹೋದರರೊಂದಿಗೆ ಮನಸ್ತಾಪ. ಕೃಷಿಕರಿಗೆ ಧನಲಾಭ ಸಾಧ್ಯತೆ. ಚಿನ್ನ ಬೆಳ್ಳಿ ವ್ಯವಹಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಕೊರತೆ. ಸಂಸಾರಿಕ ನೆಮ್ಮದಿ ದೊರಕಲಿದೆ. ಅಮೂಲ್ಯ ವಸ್ತುವಿನ ಖರೀದಿ. ಗುರು-ಹಿರಿಯರ ಆಶೀರ್ವಾದ ಮಾತ್ರವಲ್ಲ ದೈವ ಸ್ವರೂಪ ನಿಮ್ಮ ಮೇಲಿರುತ್ತದೆ.
ಮೀನ: ಅಪಪ್ರಚಾರ. ಸಹೋದ್ಯೋಗಿಗಳಿಂದ ಸಹಾಯ. ಅಧಿಕಾರ ಕಳೆದುಕೊಳ್ಳುವ ಭೀತಿ. ಸ್ತ್ರೀಯರಿಗೆ ಲಾಭ. ದೂರ ಪ್ರಯಾಣದ ಅವಶ್ಯಕತೆ ಕಂಡುಬರುವುದು. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ಅನೇಕ ರೀತಿಯ ಸೌಭಾಗ್ಯಗಳು ದೊರೆಯುವವು.