ಮೇಷ: ನಿಮ್ಮ ಬಹುದಿನದ ಆಕಾಂಕ್ಷೆ ಈಡೇರುವುದು. ಗುರು ಹಿರಿಯರ ಕೃಪೆಯನ್ನು ಹೊಂದುವುದು ಒಳ್ಳೆಯದು. ನೆರೆಹೊರೆಯವರೊಂದಿಗೆ ಸೌಹಾರ್ದಯುತ ವಾತಾವರಣ. ಶರೀರದಲ್ಲಿ ಆರೋಗ್ಯ, ಬಂಧುಮಿತ್ರರೊಡನೆ ಭೋಜನ. ನಿಮ್ಮ ವಿಚಾರಗಳನ್ನು ಗೌಪ್ಯವಾಗಿ ಇಡುವುದು ಒಳ್ಳೆಯದು.
ವೃಷಭ: ನಿಮ್ಮ ಮಾತು ಜಗಳಕ್ಕೆ ಕಾರಣವಾಗುವ ಸಾಧ್ಯತೆ, ಅಧಿಕಾರಿ ಜೊತೆ ವಾಗ್ವಾದಕ್ಕೆ ಬೇಡ, ಆರೋಗ್ಯದಲ್ಲಿ ಏರುಪೇರು ಸಂಭವ, ಅಲರ್ಜಿ ಇದ್ದವರು ಜಾಗ್ರತೆವಹಿಸಿ, ಪ್ರೇಮಿಗಳ ದ್ವಂದ್ವ ನಿಲುವು, ದಾಂಪತ್ಯದಲ್ಲಿ ಚಂಚಲತೆ ಕಾಡುತ್ತದೆ, ಅಲಂಕಾರಿಕ ವಸ್ತುಗಳ ಉದ್ಯಮಿದಾರರು ಧನಲಾಭ.
ಮಿಥುನ: ತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ನೀವು ನಿಮ್ಮ ಹೂಡಿಕೆಗಳನ್ನು ಸಂಪ್ರದಾಯಬದ್ಧವಾಗಿ ಉಳಿತಾಯ ಮಾಡಿದರೆ ಹಣ ಮಾಡುತ್ತೀರಿ.
ಕಟಕ: ನಿಮ್ಮ ಕಾರ್ಯಕ್ಷಮತೆಯಲ್ಲಿ ಸಣ್ಣದೊಂದು ಕುಸಿತವಾಗಲು ಬಿಡಬೇಡಿ. ವ್ಯಾಪಾರಿಗಳು ದೊಡ್ಡ ಲಾಭ ಪಡೆಯಲು ತಮ್ಮ ವ್ಯಾಪಾರ ಯೋಜನೆಗಳಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಲು ಸೂಚಿಸಲಾಗಿದೆ. ನೀವು ಇತ್ತೀಚೆಗೆ ಹೊಸ ವ್ಯವಹಾರವನ್ನು ಆರಂಭಿಸಿದ್ದರೆ ಪ್ರಚಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ಸಿಂಹ: ಫಲಿತಾಂಶದ ಬಗ್ಗೆ ಯೋಚಿಸಬೇಡಿ. ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ಅಗೌರವ ಆಗುವ ಸಂಭವ ಇರುವುದರಿಂದ ಸೂಕ್ಷ್ಮವಾಗಿರುವದು ಉತ್ತಮ. ಅನಪೇಕ್ಷಿತರಿಗೆ ಉಪಕಾರ ಮಾಡುವುದು ಸರಿಯಲ್ಲ. ಮಕ್ಕಳ ಚಿಂತೆ ಇರುವುದು. ವಧುವರರಿಗೆ ಮದುವೆಯ ಯೋಗ ಕೂಡಿಬರುವುದು.
ಕನ್ಯಾ: ಸ್ನೇಹಿತನ ಭೇಟಿ. ಈ ದಿನ ನಿಮ್ಮ ಸ್ನೇಹಿತನ ಅಂತರಾತ್ಮ ತಿಳಿಯುವಿರಿ. ಹಿತಶತ್ರುಗಳಿಂದ ದೂರವಿರಿ. ಭವಿಷ್ಯದ ಯೋಜನೆಗಳಿಗೆ ಇಂದು ಒಳ್ಳೆಯ ಸಮಯ. ಹಣಕಾಸು ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ.
ತುಲಾ: ಹಣ ಖರ್ಚಿನ ಬಗ್ಗೆ ಎಚ್ಚರ, ನಿಮ್ಮ ಮಾತಿನ ಬಗ್ಗೆ ನಿಗಾ ಇರಲಿ, ಇದು ವಾಗ್ವಾದಕ್ಕೆ ದಿನವಲ್ಲ,
ಈದಿನ ದುಂದು ವೆಚ್ಚಗಳಿಂದ ಬೇಸರ, ಹೊಸ ವ್ಯವಹಾರಕ್ಕೆ ಬಂಡವಾಳ ಹೂಡಿಕೆ ಮಾಡುವುದು ಉತ್ತಮ ದಿನವಲ್ಲ, ವ್ಯಾಪಾರಸ್ಥರ ವ್ಯವಹಾರದಲ್ಲಿ ಏರುಪೇರು ಸಂಭವ.
ವೃಶ್ಚಿಕ: ಸಾಲದಿಂದ ಮುಕ್ತಿ ಹೊಂದುವ ದಿನಗಳು ಹತ್ತಿರವಾಗಿವೆ, ಆಸ್ತಿ ಮಾರಾಟ ಬಯಸಿದವರಿಗೆ ಒಳ್ಳೆಯ ಬೆಲೆ ಸಿಗಲಿದೆ,ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ಮುಂದಿನ ಭವಿಷ್ಯದ ದೃಷ್ಟಿಕೋನದಿಂದ ಜಮೀನು ಖರೀದಿ ಸಾಧ್ಯತೆ. ಕೆಲವೊಮ್ಮೆ ಸಹೋದರ ವರ್ಗದಿಂದ ಅನಗತ್ಯವಾಗಿ ವಾದ-ವಿವಾದ ಹೆಚ್ಚಾಗಲಿದೆ.
ಧನುಸ್ಸು: ಆರೋಗ್ಯ ಚೆನ್ನಾಗಿರುತ್ತದೆ. ಇಂದು ನೀವು ಯಾವುದೇ ಅಜ್ಞಾತ ಮೂಲಗಳಿಂದ ಹಣವನ್ನು ಪಡೆಯಬಹುದು, ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ನೀವು ಪಾರ್ಟಿ ನೀಡಲು ಯೋಜಿಸುತ್ತಿದ್ದಲ್ಲಿ ನಿಮ್ಮ ಎಲ್ಲಾ ಒಳ್ಳೆಯ ಸ್ನೇಹಿತರನ್ನು ಆಮಂತ್ರಿಸಿ.
ಮಕರ: ಸಂಗಾತಿಯ ಹಿತದೃಷ್ಟಿಯಿಂದ ನಿಮ್ಮೆಲ್ಲಾ ಕಾರ್ಯಗಳಿಗೆ ಜಯ ಸಿಗುವ ಸಾಧ್ಯತೆ ಇದೆ. ಕುಟುಂಬಸ್ಥರ ಬೇಡಿಕೆಗಳು ಹೆಚ್ಚಾಗುವ ಸಂಭವ ಕಂಡುಬರುತ್ತದೆ. ಒಂದು ಉತ್ತಮ ರೀತಿಯ ಹಾಗೂ ನೆನಪಿನಲ್ಲಿಡುವಂತಹ ಪ್ರಯಾಣಕ್ಕೆ ಸಿದ್ಧತೆ ನಡೆಸುವಿರಿ. ಕೆಲಸದಲ್ಲಿ ಹಿರಿಯ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗಲಿದೆ.
ಕುಂಭ: ವ್ಯವಹಾರಿಕ ಏಳ್ಗೆ ಇರುವುದು. ದೂರ ಪ್ರಯಾಣದ ಸಂಭವ. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ವಿವಿಧ ಸೌಭಾಗ್ಯಪ್ರಾಪ್ತಿ. ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ವಾಹನ, ಮಶಿನರಿಗಳಿಂದ ತೊಂದರೆ.
ಮೀನ: ವಿದ್ಯಾರ್ಥಿಗಳಿಗೆ ಇಂದು ಅತ್ಯಂತ ಮಹತ್ವದ ದಿನ. ನೀವು ಹೊಸ ಕೋರ್ಸ್ ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ಅದಕ್ಕೆ ಅನುಕೂಲಕರವಾಗಿದೆ. ಇದರ ಹೊರತಾಗಿ, ನಿಮ್ಮ ಶಿಕ್ಷಣದಲ್ಲಿ ಬರುವ ಯಾವುದೇ ಪ್ರಮುಖ ಅಡಚಣೆಯನ್ನು ಸಹ ಜಯಿಸಬಹುದು.