ತುಮಕೂರು ನಗರ ವಿಧಾನಸಭಾ ಕ್ಷೇತ್ರ-132ರ ಮತದಾರರ ಪಟ್ಟಿ ಕಳೆದ ೨೦೧೩ ರಿಂದಲೂ ಅನೇಕ ಅಕ್ರಮ ಮತ್ತು ಗೊಂದಲಗಳಿಂದ ಕೂಡಿವೆ. ಒಂದೇ ಕೋಮಿನ ಅಕ್ರಮ ಮತದಾರರ ಸೇರ್ಪಡೆಯ ವಿರುದ್ಧ 2013 ರಿಂದಲೂ ಬಿಜೆಪಿ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಅದಾಗ್ಯೂ ಈಗ ಮತ್ತೆ 2021ರ ಪರಿಷ್ಕೃತ ಪಟ್ಟಿಯಲ್ಲೂ ಸಹ ಒಂದು ಕೋಮಿನ ಮತದಾರರ ವ್ಯಾಪಕ ಸೇರ್ಪಡೆ ಮತ್ತೊಂದು ಕೋಮಿನ ಮತದಾರರ ವ್ಯಾಪಕ ತೆಗೆದು ಹಾಕುವಿಕೆ ಕಂಡುಬಂದಿದೆ.
ಉದ್ದೇಶ ಪೂರ್ವಕವಾಗಿ ಬೇರೆ ಬೇರೆ ಕ್ಷೇತ್ರದ ಮುಸ್ಲಿಂ ಮತದಾರರನ್ನ ವ್ಯಾಪಕವಾಗಿ ಅಕ್ರಮವಾಗಿ ಸೇರಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಕರೋನ ದಂತಹ ಸನ್ನಿಗ್ಧ ಪರಿಸ್ಥಿತಿಯಲ್ಲೂ ಸಹ 7 ಸಾವಿರಕ್ಕೂ ಅಧಿಕ ಮತದಾರರು ಸೇರ್ಪಡೆಯಾಗಿದ್ದು, ಅದರಲ್ಲೂ ಬಹುತೇಕ ಸುಮಾರು 5 ಸಾವಿರಕ್ಕೂ ಅಧಿಕ ಮುಸ್ಲಿಂ ಮತದಾರರ ಸೇರ್ಪಡೆ ಆಶ್ಚರ್ಯ ಮತ್ತು ಅನುಮಾನವನ್ನ ಉಂಟು ಮಾಡುತ್ತದೆ. ಸೂಕ್ತ ದಾಖಲಾತಿಗಳಿಲ್ಲದೇ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಹಾಗಾಗಿ ತಾವು ಈ ವಿಷಯವನ್ನ ಗಂಭೀರವಾಗಿ ತೆಗೆದುಕೊಂಡು ಪ್ರತಿ ಮತದಾರರ ಕೂಲಂಕುಶ ಪರಿಶೀಲನೆ ಹಾಗೂ ದಾಖಲಾತಿಗಳಿಲ್ಲದ ಮತದಾರರನ್ನ ತೆಗೆದು ಹಾಕುವ ಮುಖಾಂತರ ಮತದಾರರ ಪಟ್ಟಿಯ ಅಕ್ರಮ ಸರಿಪಡಿಸಿ, ಪ್ರಜಾ ಪ್ರಭುತ್ವಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಬಿಜೆಪಿ ನಗರಾಧ್ಯಕ್ಷರಾದ ಟಿ.ಹೆಚ್.ಹನುಮಂತರಾಜು ರವರ ಅಧ್ಯಕ್ಷತೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಿರುಪಾಕ್ಷಪ್ಪ, ಪ್ರಸನ್ನ, ಕಮಲಮ್ಮ, ಪ್ರಧಾನ ಕಾರ್ಯದರ್ಶಿ ರಾಜೀವ್, ಗಣೇಶ್, ಬಿಜೆಪಿ ಬಿ.ಎಲ್.ಎ-೧ ಕುಮಾರ್, ಕಾರ್ಯದರ್ಶಿ ಗಂಗಾಧರ್, ರತ್ನಮ್ಮ, ಖಜಾಂಚಿ ರಾಘವೇಂದ್ರ ನಿಯೋಗದಲ್ಲಿದ್ದರು.