ಮೇಷ – ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರಗಳಲ್ಲಿ ಹೆಚ್ಚು ಮುಂದಾಲೋಚನೆ ವಹಿಸಿ ಲಾಭದತ್ತ ಹೆಜ್ಜೆ ಹಾಕುವಿರಿ. ಸೃಜನಶೀಲ ರಾಜಕಾರಣಿಯಾಗಿ ಹೊರಹೊಮ್ಮುವಿರಿ. ಮತಕ್ಷೇತ್ರ ಕಾರ್ಯಗಳಲ್ಲಿ ಹೆಚ್ಚು ಮಗ್ನರಾಗಿ ಯಶಸ್ಸು ಗಳಿಸುವಿರಿ.
ವೃಷಭ – ಕೃಷಿಕರಿಗೆ ಹಾಗೂ ಜವಳಿ ಉದ್ಯಮಿಗಳಿಗೆ ಈ ದಿನವು ಹೆಚ್ಚು ಲಾಭಕರವಾಗಲಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ಸಾಧಿಸಲಿದ್ದಾರೆ.
ಮಿಥುನ – ಆರ್ಥಿಕ ದೃಢತೆ ನಿಮ್ಮಲ್ಲಿ ಧೈರ್ಯ ತುಂಬುವುದು. ವಾಹನ ಖರೀದಿ ಸದ್ಯಕ್ಕೆ ಬೇಡ. ಅತ್ಯವಸರದಲ್ಲಿ ಯಾವುದೇ ಕಾರ್ಯಗಳನ್ನು ಕೈಗೊಳ್ಳಬೇಡಿ. ಮಿತ್ರರು ಸಕಾಲದಲ್ಲಿ ಕೊಡುವ ಸಲಹೆಗಳನ್ನು ಅಲಕ್ಷಿಸಬೇಡಿ. ಉದ್ಯೋಗ ದೊರೆಯುವ ಅದೃಷ್ಟದ ಸಮಯ. ಅಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ.
ಕಟಕ – ಉದ್ಯೋಗದಲ್ಲಿ ಮಹತ್ತರ ಬದಲಾವಣೆಯ ವಿಚಾರವಾಗಿ ಹಿರಿಯ ಅಧಿಕಾರಿಗಳೊಡನೆ ಚರ್ಚೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ಒದಗಿಬರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಬೆಳೆ ಪಡೆಯುವ ಯೋಗವಿದೆ.
ಸಿಂಹ – ಮುಖ್ಯ ನಿರ್ಧಾರ ಕೈಗೊಳ್ಳುವುದನ್ನು ಬೇರೊಂದು ದಿನಕ್ಕೆ ಮುಂದೂಡಿ, ಈ ದಿನವು ಸೂಕ್ತವಾಗಿಲ್ಲ. ಮಾತನಾಡುವ ಮುನ್ನ ಎರಡೆರಡು ಬಾರಿ ಯೋಚಿಸಿ ಮತ್ತು ಯಾರೊಂದಿಗೂ ವಿಶೇಷವಾಗಿ ಸಂಬಂಧಿಗಳು ಮತ್ತು ನೆರೆಹೊರೆಯವರೊಂದಿಗೆ ವಾಗ್ವಾದಕ್ಕಿಳಿಯುವುದನ್ನು ತಪ್ಪಿಸಿ.
ಕನ್ಯಾ – ಮಾತು ಹಾಗೂ ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ, ವ್ಯವಹಾರದಲ್ಲಿ ಹೊಸ ಪಾಲುದಾರರನ್ನು ಸೇರ್ಪಡೆ ಮಾಡಿಕೊಳ್ಳುವ ಮುನ್ನ ಆತನ ಪೂರ್ವಾಪರಗಳನ್ನು ತಿಳಿಯಿರಿ. ಸಮಯಕ್ಕೆ ಸರಿಯಾಗಿ ಸ್ನೇಹಿತರ ಸಹಾಯ ದೊರೆಯಲಿದೆ. ಸಮಾಜ ಸೇವೆ ಮಾಡಲು ಬಯಸುವಿರಿ.
ತುಲಾ – ತಂದೆ-ಮಕ್ಕಳಲ್ಲಿ ಕಲಹ, ಆರೋಗ್ಯದಲ್ಲಿ ಹಾನಿ, ಭಯದ ವಾತಾವರಣ, ಸ್ತ್ರೀ ಬಗ್ಗೆ ಟೀಕಿಸುವ ಮುನ್ನ ವಾಸ್ತವ ತಿಳಿದು ಮಾತನಾಡಿ. ಉಸಿರಾಟದ ತೊಂದರೆ ವೈದ್ಯರ ಸಲಹೆ ಪಡೆಯಿರಿ . ಫ್ಯಾಷನ್ ಡಿಸೈನ್ ದಿಂದ ಕೈತುಂಬಾ ಕೆಲಸ ದೊರೆತು ಹಣ ಸಂಪಾದನೆ ಮಾಡುವಿರಿ .
ವೃಶ್ಚಿಕ – ಸರ್ಕಾರಿ ಕಚೇರಿ, ಕೋರ್ಟ್ ಕೆಲಸಗಳ ಅಡಚಣೆಗಳು ಮುಂದುವರೆಯಲಿವೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣದ ಹರಿವು ಸಾಕಷ್ಟು ವೃದ್ಧಿಸುತ್ತದೆ. ಶತ್ರುಗಳ ಮನಸ್ಸು ಪರಿವರ್ತನೆ ಸಾಧ್ಯತೆ. ಅನಿರೀಕ್ಷಿತವಾಗಿ ಮಕ್ಕಳ ಮದುವೆ ವಿಚಾರ ಸಾಧ್ಯತೆ. ಮಕ್ಕಳಿಂದ ಧನಸಹಾಯ ಒದಗಿ ಬರುತ್ತದೆ.
ಧನುಸ್ಸು: ಅಗತ್ಯ ಇರುವವರಿಗೆ ಸರಿಯಾದ ಸಮಯಕ್ಕೆ ಸಹಾಯ ಮಾಡುವ ಮೂಲಕ ಮೆಚ್ಚುಗೆ ಗಳಿಸಲಿದ್ದೀರಿ. ಕಚೇರಿ ಕೆಲಸದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಲಾಭವನ್ನು ಪಡೆಯಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕೂಡ ಕಡಿಮೆಯೇ.
ಮಕರ: ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ, ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ
ಕುಂಭ: ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಾಭ ಪಡೆಯುವವರು ಇದ್ದಾರೆ. ಅವರ ಬಗ್ಗೆ ಎಚ್ಚರ ವಹಿಸಿರಿ. ಸಂಗಾತಿಯ ಸೂಕ್ತ ಸಹಕಾರದಿಂದ ಸಂಸಾರದಲ್ಲಿ ನೆಮ್ಮದಿ ಇರುತ್ತದೆ.
ಮೀನ: ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುವುದು ಬೇಡ. ನೇರ, ನಿಷ್ಠೂರವಾಗಿ ನಡೆದುಕೊಳ್ಳಿ, ಮೀನು ನೀರನ್ನು ಬಿಟ್ಟಿರುವುದಿಲ್ಲ. ಮನುಷ್ಯನು ದೇವತಾ ಪ್ರಾರ್ಥನೆ ಬಿಟ್ಟಿರಬಾರದು. ದ್ವಾದಶ ಗುರುವು ಏಕಾದಶಕ್ಕೆ ಬರುತ್ತಾನೆ. ಹನ್ನೊಂದನೆ ಮನೆಯ ಗುರು-ಶನಿ ಭಾಗ್ಯವನ್ನು ಅನುಭವಿಸಿ