ಮೇಷ: ಜನಪ್ರತಿನಿಧಿಗಳು ಸಾರ್ವಜನಿಕರೊಡನೆ ಸಹಬಾಳ್ವೆ ಮತ್ತು ಕೀರ್ತಿವಂತರಾಗುತ್ತಾರೆ, ಪ್ರಯತ್ನಿಸಿದ ಎಲ್ಲಾ ಕೆಲಸ ಕಾರ್ಯಗಳು ಸಫಲ, ಭಿನ್ನಾಭಿಪ್ರಾಯ ಮೂಡಿರುವ ಕುಟುಂಬ ಒಂದಾಗುವ ಸಾಧ್ಯತೆ, ಬಂಧು-ಮಿತ್ರರಿಂದ ಧನಸಹಾಯ.
ವೃಷಭ: ವ್ಯಾಪಾರಿಗಳು ಇಂದು ಬಹಳ ಜಾಗರೂಕರಾಗಿರಬೇಕು. ನಿಮ್ಮ ಸಣ್ಣ ನಿರ್ಲಕ್ಷ್ಯವು ನಿಮಗೆ ದೊಡ್ಡ ನಷ್ಟವನ್ನು ಉಂಟುಮಾಡಬಹುದು. ನೀವು ದೊಡ್ಡ ಉದ್ಯಮಿಯಾಗಿದ್ದರೆ ಉದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ.
ಮಿಥುನ: ಇಂದು, ನೀವು ಹೆಚ್ಚು ನಿರೀಕ್ಷಿಸಬಾರದು. ನಿಮ್ಮ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ನೀವು ಪರಿಸ್ಥಿತಿಯನ್ನು ಸಮತೋಲನದಲ್ಲಿರಿಸಿಕೊಳ್ಳಬಹುದು. ನೀವು ಹಣಕಾಸಿನ ವಿಷಯಗಳ ಬಗ್ಗೆ ಚಿಂತೆ ಮಾಡಬಹುದು.
ಕಟಕ: ಜವಳಿ ಉದ್ಯಮಿಗಳಿಗೆ ಇಂದು ಲಾಭವಿದೆ. ವೈದ್ಯಕೀಯ ವೃತ್ತಿಯವರಿಗೆ ಇಂದು ಕೆಲಸ ಒತ್ತಡಮಯವಾಗಿ ಇರಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಇನ್ನಷ್ಟು ಗಮನ ಹರಿಸಲೇಬೇಕು. ನವ ವಿವಾಹಿತರಿಗೆ ಸಂತಾನ ಭಾಗ್ಯವಿದೆ. ಮನೆಯ ಕಿರಿಯ ಪುತ್ರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಸಿಂಹ: ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಾಧಿಸುವಿರಿ. ಸಹೋದ್ಯೋಗಿಗಳ ಸಹಾಯ ಪಡೆಯದೇ ನಿಮ್ಮ ಸ್ವಂತ ಶಕ್ತಿಯನ್ನು ನಂಬಿ ಕೆಲಸ ಮಾಡಿ. ಸ್ತ್ರೀಯರಿಗೆ ಕಿರಿಕಿರಿ ಉಂಟಾಗುವ ಸಾಕಷ್ಟು ಪ್ರಸಂಗಗಳು ಎದುರಾಗಲಿದೆ.
ಕನ್ಯಾ: ಕಾರ್ಯನಿಮಿತ್ತ ಪ್ರಯಾಣ. ಪರಿಶ್ರಮಕ್ಕೆ ಪ್ರಯೋಜನ ತಕ್ಷಣ ಸಿಗುವುದಿಲ್ಲ. ಕ್ರಮಬದ್ಧ ಅಧ್ಯಯನ ಮಾಡಿದವರಿಗೆ ಪ್ರಗತಿ. ನೀವು ಅತಿಯಾಗಿ ನಂಬಿದವರೇ ಇಂದು ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ. ಆತುರದ ನಿರ್ಧಾರ ಭಾರೀ ನಷ್ಟ ತಂದೊಡ್ಡಬಹುದು.
ತುಲಾ: ಕಡಿಮೆ ಪರಿಶ್ರಮದಲ್ಲಿ ಅಧಿಕ ಲಾಭ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಆರೋಗ್ಯದಲ್ಲಿ ಏರುಪೇರು. ಇಷ್ಟವಿಲ್ಲದವರ ಜೊತೆ ಅನಿವಾರ್ಯವಾಗಿ ಮಾತನಾಡಬೇಕಾದ ಸಂದರ್ಭ ಎದುರಾಗಬಹುದು.
ವೃಶ್ಚಿಕ: ಸಾಲಗಾರರಿಂದ ಕಿರುಕುಳ ಸಂಭವ, ಹೊಸದಾಗಿ ಪ್ರಾರಂಭಿಸಿರುವ ವ್ಯಾಪಾರದಲ್ಲಿ ಹಣಕಾಸಿನ ತೀವ್ರ ಅಡಚಣೆ, ಸದ್ಯದಲ್ಲಿ ಮದುವೆ ಆಗುತ್ತೆ ಎಂಬುದರಲ್ಲಿ ನಿರಾಸೆ, ಕೆಲಸಕ್ಕಾಗಿ ಪರಸ್ಥಳ ವರ್ಗಾವಣೆ.
ಧನುಸ್ಸು: ಹಣಕಾಸಿನ ವಿಚಾರಕ್ಕಾಗಿ ಬಂಧು ಮಿತ್ರರೊಡನೆ ವಿರೋಧ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ ಸಂಭವ, ಹೃದಯದ ಕಾಯಿಲೆ ಇದ್ದವರು ಜಾಗೃತಿ ವಹಿಸಿ, ಮಕ್ಕಳ ಮದುವೆ ಚಿಂತನೆ, ಆಡಳಿತ ವರ್ಗದಿಂದ ಶಿಕ್ಷಕರಿಗೆ ತೊಂದರೆ ಸಂಭವ, ಅನಾವಶ್ಯಕವಾಗಿ ಧನವ್ಯಯ.
ಮಕರ: ಜನಪ್ರತಿನಿಧಿಗಳಿಗೆ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ, ಸರಕಾರಿ ಉದ್ಯೋಗಿಗಳಿಗೆ ಧನಪ್ರಾಪ್ತಿ, ಕೆಲಸದಲ್ಲಿ ಹೆಚ್ಚಿನ ಒತ್ತಡ ತಿರುಗಾಟ ಸಂಭವ, ಆರೋಗ್ಯಕ್ಕಾಗಿ ಧನವ್ಯಯ, ಕೋರ್ಟು ವ್ಯವಹಾರಗಳಲ್ಲಿ ಅಡಚಣೆ ಸಂಭವ, ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಯಿಂದ ಕಿರಿಕಿರಿ ಸಂಭವ.
ಕುಂಭ: ಆರ್ಥಿಕ ಪ್ರಗತಿ ಅಷ್ಟಕ್ಕಷ್ಟೆ. ಮದುವೆ ವಿಚಾರಕ್ಕಾಗಿ ಬಂಧು ವಿರೋಧ, ಉದ್ಯೋಗದ ಸ್ಥಳ ಬದಲಾವಣೆ ಸಾಧ್ಯತೆ, ಆಸ್ತಿ ಖರೀದಿಗಾಗಿ ಧನವ್ಯಯ, ವ್ಯಾಪಾರ-ವ್ಯವಹಾರಗಳಲ್ಲಿ ಮಂದಗತಿ, ಶತ್ರುಗಳಿಂದ ಮಾನಹಾನಿ, ಸಂತಾನ ಮನಸ್ಸಿಗೆ ಚಿಂತನೆ.
ಮೀನ: ಉದ್ಯೋಗದಲ್ಲಿ ಚೇತರಿಕೆ ಕಾಣಲಿದೆ. ಇಂದು ನೀವು ಹೆಚ್ಚು ಕೆಲಸ ಮಾಡಬೇಕಾಗಬಹುದು, ಆದರೆ ಯಶಸ್ಸನ್ನು ಪಡೆಯಲು ನೀವು ಉತ್ಸುಕರಾಗುತ್ತೀರಿ. ಕತ್ತಿನ ಮೇಲಿನ ಭಾಗಗಳಲ್ಲಿ ಸ್ವಲ್ಪ ಅಸ್ವಸ್ಥತೆ ಇರಬಹುದು, ಬದಲಾಗುತ್ತಿರುವ ಹವಾಮಾನವನ್ನು ನಿರ್ಲಕ್ಷಿಸಬೇಡಿ.