ರಾಶಿ ಫಲಗಳು: ದಿನಾಂಕ 22/09/2021

ಮೇಷ: ದಿನಪೂರ್ತಿ ಆರಂಭದಲ್ಲಿ ತಾಳ್ಮೆಯಿಂದ ಇದ್ದು, ಮಧ್ಯದಲ್ಲಿ ಅತ್ಯಂತ ಕಠಿಣ ಸ್ವಭಾವ ಹೊಂದುವಿರಿ. ಉದ್ಯೋಗಿಗಳಿಗೆ ಉತ್ತಮವಾಗಿದೆ . ಸಂಗಾತಿಯ ಆಸೆ ಆಕಾಂಕ್ಷಿಗಳು ಈಡೇರುತ್ತವೆ. ಕಣ್ಣಿನ ತೊಂದರೆ ಕಾಡಲಿದೆ. ಶಸ್ತ್ರಚಿಕಿತ್ಸೆ ಸಂಬಂಧ ವೈದ್ಯರಿಗೆ ಭೇಟಿ.

ವೃಷಭ: ನಿಮ್ಮ ಪರೀಕ್ಷೆಗಳು ಶೀಘ್ರದಲ್ಲೇ ಬರಲಿದ್ದರೆ, ಹೆಚ್ಚು ಶ್ರಮವಹಿಸಲು ಸೂಚಿಸಲಾಗುತ್ತದೆ. ಇಂದು ಒಂದು ಸಣ್ಣ ತಪ್ಪು ಕೂಡ ನಿಮಗೆ ತೊಂದರೆ ಆಗಬಹುದು. ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಸಮಯದ ಬಗ್ಗೆಯೂ ಕಾಳಜಿ ವಹಿಸಿ.

ಮಿಥುನ: ಮಕ್ಕಳು ವಿದ್ಯಾಭ್ಯಾಸದಲ್ಲಿ ಕಡಿಮೆ ಲಕ್ಷ್ಯ ತೋರಲಿದ್ದಾರೆ. ಪೋಷಕರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಕಲಹ ಉಂಟಾಗಬಹುದು.

ಕಟಕ: ನಿಮ್ಮ ಅನಾರೋಗ್ಯ ಸಮಯದಲ್ಲಿ ಸಂಗಾತಿಯು ಒಳ್ಳೆಯ ಆರೈಕೆ ಮಾಡಲಿದ್ದಾರೆ, ಇದರಿಂದ ನಿಮಗೆ ಚೇತರಿಕೆ ಇನ್ನಷ್ಟು ಸುಲಭ ಎನಿಸಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ನೀಡಲಿದ್ದಾರೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ.

ಸಿಂಹ: ತುಂಬಾ ದಿನದ ಹಣಹೂಡಿಕೆ ಇಂದು ನಿಮಗೆ ನೆಮ್ಮದಿ ತರಲಿದೆ, ವಾಹನ ಖರೀದಿಸುವ ಸಾಧ್ಯತೆ, ವಿದೇಶ ಪ್ರವಾಸ ತಾಂತ್ರಿಕ ದೋಷ ಕಾಣಲಿದೆ, ದಾಂಪತ್ಯದಲ್ಲಿ ಹಠಮಾರಿತನ ಧೋರಣೆಯಿಂದ ವೈಮನಸ್ಸು, ಬೆಲೆಬಾಳುವ ವಸ್ತು ಕಳೆದುಕೊಳ್ಳುವ ಸಾಧ್ಯತೆ.

ಕನ್ಯಾ: ಕುಟುಂಬದ ಸಹಕಾರ ಇಲ್ಲದಿದ್ದರೂ ಸ್ನೇಹಿತರ ಬೆಂಬಲದಿಂದ ಕಾರ್ಯಸಿದ್ಧಿ. ಹಣಕಾಸಿನ ವ್ಯವಹಾರದಲ್ಲಿ ಮನಸ್ತಾಪ. ಶುಭಸಂಖ್ಯೆ: 6

ತುಲಾ: ನಿಮ್ಮ ಆತ್ಮವಿಶ್ವಾಸ ಪ್ರವೃತ್ತಿ ಹಲವರಿಗೆ ದಾರಿದೀಪ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕುಟುಂಬದಲ್ಲಿ ಗೊಂದಲ. ಹೃದಯದ ಸಮಸ್ಯೆ ಕಾಣಬಹುದು, ಅನಿರೀಕ್ಷಿತ ಹಣ ಖರ್ಚು ಸಂಭವ. ಉದ್ಯೋಗದಲ್ಲಿ ಕಿರುಕುಳ.

ವೃಶ್ಚಿಕ: ನಿಮ್ಮ ವ್ಯಾಪಾರ ಉದ್ಯೋಗಗಳು ಉತ್ತಮವಾಗಿ ನಡೆಯುತ್ತವೆ. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಸುಖಜೀವನ. ನೀವಾಡುವ ಮಾತಿನಿಂದ ಗೌರವ, ಸ್ನೇಹಿತರ ಸಕಾರಾತ್ಮಕ ಸಲಹೆಗಳಿಗೆ ಮುನ್ನಣೆ, ಸುಖ ಭೋಜನ.

ಧನುಸ್ಸು: ಬಂಧು ಮಿತ್ರರು ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಅಂತರ್ಜಾಲ ಸ್ಪರ್ಧೆಗಳಲ್ಲಿ ವಿಶೇಷ ಯಶಸ್ಸು ವಿರೋಧಿಗಳ ಮುಖಭಂಗ. ಗಂಡ-ಹೆಂಡತಿ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಹಾಗೂ ಸಂಸಾರದಲ್ಲಿ ಇದ್ದ ಕಿರಿಕಿರಿ ಶಾಂತವಾಗುತ್ತದೆ.

ಮಕರ: ಧಾರ್ಮಿಕ ಕ್ಷೇತ್ರಗಳಿಗೆ ದೊಡ್ಡ ಮಟ್ಟದ ಹಣವನ್ನು ದಾನ ಮಾಡಲಿದ್ದೀರಿ. ಇದು ನಿಮ್ಮ ಪೋಷಕರಿಗೆ ಖುಷಿ ಕೊಡುವ ವಿಚಾರವಾಗಿದೆ. ಹೊಸ ಸ್ನೇಹಿತರ ಪರಿಚಯದಿಂದ ನಿಮ್ಮ ಜೀವನ ಬದಲಾಗಿದೆ. ಅನಗತ್ಯ ಜಗಳಗಳಿಗೆ ಮೂಗು ತೂರಿಸಲು ಹೋಗಬೇಡಿ.

ಕುಂಭ: ಮಕ್ಕಳ ಆರೋಗ್ಯಕ್ಕಾಗಿ ಖರ್ಚು ಹೆಚ್ಚಾಗಬಹುದು.ನಿಮ್ಮ ದುಡಿಮೆ ಆದಾಯ ಸರಿ ಪ್ರಮಾಣದಲ್ಲಿ ಇದೆ. ಸಮತೋಲನ ಸಾಧಿಸಿರಿ. ಆರ್ಥಿಕ ಸಲಹೆಗಾರ ಜೊತೆ ನಿಮ್ಮ ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಉಳಿತಾಯದ ಬಗ್ಗೆ ಗಮನ ಕೊಡಿ.

ಮೀನ: ಮನಸ್ಸು ಉತ್ಸಾಹದಿಂದ ಇರುವುದು. ಸುಖ ಭೋಜನ ಪ್ರಾಪ್ತಿ. ವ್ಯವಹಾರದಲ್ಲಿ ಅನಿರೀಕ್ಷಿತ ಗೆಲುವು. ದಿನಾಂತ್ಯದಲ್ಲಿ ಶುಭಸುದ್ದಿ. ಮನಸ್ತಾಪ ಆಗಿ ದೂರ ಹೋದ ದಾಂಪತ್ಯ ಮತ್ತೆ ಹತ್ತಿರ ಆಗಲಿದ್ದಾರೆ, ವಿದೇಶ ಪ್ರಯಾಣ ಯೋಗ.

Leave a Reply

Your email address will not be published. Required fields are marked *

error: Content is protected !!