ಮೇಷ – ಮಕ್ಕಳಿಂದ ನಷ್ಟ ಸಂಭವ, ಸಹೋದರರಿಗಾಗಿ ಹಣನಷ್ಟ, ಸೇವಾವಲಯದಲ್ಲಿ ಕ್ರಿಯಾಶೀಲತೆ ಚಟುವಟಿಕೆ ನಡೆಯಲಿದೆ. ಸಹಾಯ ಅಪೇಕ್ಷಿಸಿ ಕೆಲವರು ಬರಬಹುದು, ನಿಮ್ಮಿಂದ ಸಕಾರಾತ್ಮಕ ಪ್ರತಿಕ್ರಿಯೆ ಇರಲಿ.
ವೃಷಭ – ಸಣ್ಣ ವ್ಯಾಪಾರಿಗಳಿಗೆ ಇಂದು ಬಹಳ ಲಾಭದಾಯಕ ದಿನವಾಗುವ ಸಾಧ್ಯತೆಯಿದೆ. ನಿಮ್ಮ ತಿಳುವಳಿಕೆಯಿಂದ ನೀವು ಉತ್ತಮ ಲಾಭ ಗಳಿಸಲು ಸಾಧ್ಯವಾಗುತ್ತದೆ. ಒಡಹುಟ್ಟಿದವರೊಂದಿಗೆ ದೂರವಾಗಬಹುದು.
ಮಿಥುನ – ಆದಾಯದಲ್ಲಿ ಹೆಚ್ಚಳ, ಆದಾಯದ ಮೂಲ ಹುಡುಕುವಿರಿ, ಉದ್ಯೋಗದಲ್ಲಿ ಬಡ್ತಿ ವೇತನ ಹೆಚ್ಚಳ ಯೋಗ ಇದೆ, ದೀರ್ಘಕಾಲದ ಕಾಯಿಲೆ ಕಿರಿಕಿರಿ, ಸೂಕ್ತ ಔಷಧೋಪಚಾರನಿಂದ ಮುಕ್ತಿ, ಅನಗತ್ಯ ಚಿಂತನೆ.
ಕಟಕ – ವಿದ್ಯಾರ್ಥಿಗಳು ಓದಿನಲ್ಲಿ ಮುನ್ನಡೆ ಕಾಣಲಿದ್ದಾರೆ. ಆಸ್ತಿಗಳ ವಿಚಾರದಲ್ಲಿ ದಾಯಾದಿಗಳ ನಡುವೆ ಕಲಹ ಉಂಟಾಗಲಿದೆ. ಮಕ್ಕಳ ಅನಾರೋಗ್ಯ ನಿಮ್ಮನ್ನು ಚಿಂತೆಗೀಡು ಮಾಡಬಹುದು. ಕುಟುಂಬ ಸಂಬಂಧಿ ಕಲಹಗಳಲ್ಲಿ ತೀರಾ ಮೂಗು ತೂರಿಸಬೇಡಿ.
ಸಿಂಹ – ಮನೆಯಲ್ಲಿ ಶುಭ ಕಾರ್ಯ ನಡೆಸಲು ಹಣದ ಅಡಚಣೆ ಎದುರಾಗಲಿದೆ. ಕೃಷಿಯಲ್ಲಿ ಲಾಭವಿದೆ. ಆಪ್ತರ ಜೊತೆ ಸಂಯಮದಿಂದ ಮಾತನಾಡಿ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ವೈವಾಹಿಕ ಸಂಬಂಧಕ್ಕಾಗಿ ಅರಸುತ್ತಿರುವವರಿಗೆ ಕಂಕಣ ಭಾಗ್ಯವಿದೆ.
ಕನ್ಯಾ – ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಆಸ್ತಿ ಮಾರಾಟ ಬಯಸಿದವರಿಗೆ ಒಳ್ಳೆಯ ಬೆಲೆ ಸಿಗಲಿದೆ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಆರ್ಥಿಕ ಮುನ್ನಡೆ, ಗುತ್ತಿಗೆದಾರರಿಗೆ ಟೆಂಡರ್ ಸಿಗುವ ಭಾಗ್ಯ, ತಡೆಹಿಡಿದ ಪಾವತಿ ಹಣ ಸಿಗಲಿದೆ.
ತುಲಾ – ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದು ನಿಮ್ಮ ಇಡೀ ದಿನದ ನೆಮ್ಮದಿಯನ್ನು ಹಾಳುಗೆಡವಲಿದೆ. ಮೋಜು – ಮಸ್ತಿಯ ನೆಪದಲ್ಲಿ ವ್ಯರ್ಥ ಹಣಪೋಲು ಮಾಡಬೇಡಿ. ಹಣವನ್ನು ಭವಿಷ್ಯಕ್ಕೆಂದು ಕೂಡಿಟ್ಟಲ್ಲಿ ನಿಮಗೆ ಒಳ್ಳೆಯದು.
ವೃಶ್ಚಿಕ – ಕೆಲವರಿಗೆ ಗಂಟಲಿನ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ, ವ್ಯಾಪಾರದ ನಷ್ಟದಿಂದ ಆರ್ಥಿಕ ತೊಂದರೆ ಉಂಟಾಗಬಹುದು, ಕೂಡಿಟ್ಟ ಹಣ ನಷ್ಟ ಸಂಭವ, ಚೀಟಿ ವ್ಯವಹಾರದಲ್ಲಿ ಮೋಸ, ಸಾಲದ ಹೊರೆ ಸಾಧ್ಯತೆ.
ಧನುಸ್ಸು – ವ್ಯಾಪಾರದಲ್ಲಿ ನಷ್ಟ, ನಂಬಿದ ಮಹಿಳೆಯಿಂದ ಮನಸ್ತಾಪ, ದಿನಗೂಲಿ ನೌಕರರು ಆತಂಕ ಬೇಡ, ಶುಭವಾಗಲಿದೆ, ಕೆಲವರಿಗೆ ಉದ್ಯೋಗದಿಂದ ಉಚ್ಛಾಟನೆ, ಕುಟುಂಬದವರ ಜೊತೆ ಭಿನ್ನಾಭಿಪ್ರಾಯ.
ಮಕರ – ನಿಮ್ಮ ಅಜಾಗರೂಕತೆಯಿಂದ ಹಣ ಕಳೆದುಕೊಳ್ಳುವಿರಿ, ಯೋಗ ಅಧ್ಯಾತ್ಮಿಕ ಶಾಲೆ ಪ್ರಾರಂಭಿಸುವ ಚಿಂತನೆ ಮಾಡುವಿರಿ, ಪ್ಲೇವುಡ್ ವ್ಯಾಪಾರಸ್ಥರಿಗೆ ಅಧಿಕ ಲಾಭ, ಮಕ್ಕಳ ನಡವಳಿಕೆ ಆತಂಕ ತರಲಿದೆ.
ಕುಂಭ – ಕೌಟುಂಬಿಕ ಜೀವನದಲ್ಲಿ ಇಲ್ಲಸಲ್ಲದ ತಕರಾರು ಸೃಷ್ಟಿಯಾಗಲಿದೆ. ಇದರಿಂದ ಮಾನಸಿಕ ಒತ್ತಡ ಉಂಟಾದೀತು. ಅನಾರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನಿಮ್ಮ ಮನಸ್ಸಿನ ನೋವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಿ.
ಮೀನ – ಕೆಲಸದ ಬಗ್ಗೆ ನಿಮಗೆ ಗೌರವ ಹೆಚ್ಚು ಸಿಗಲಿದೆ. ಸಂಗಾತಿಯೊಡನೆ ಇರುವ ಮನಸ್ತಾಪ ಇಂದು ದೂರವಾಗಲಿದೆ. ಪ್ರೇಮಿಗಳಿಗೆ ಅತಿ ಉತ್ಸಾಹದ ದಿನವಿದು. ಹಳೆಯ ವಸ್ತುಗಳಲ್ಲಿ ಅಭಿರುಚಿ ಹೆಚ್ಚಾಗಿ ಕಂಡುಬರುತ್ತದೆ.