ರಾಶಿ ಭವಿಷ್ಯ: ಈ ರಾಶಿಯವರು ಇಂದು ಅಂದುಕೊಂಡ ಕೆಲಸಗಳು ನೆರವೇರಲಿವೆ.

ಮೇಷ: ಕುಟುಂಬದಲ್ಲಿ ಅಶಾಂತಿ, ಕಾಯಿಲೆಗಾಗಿ ಆಸ್ಪತ್ರೆಗಳ ಅಲೆದಾಟ, ಸಂಜೆಯೊಳಗೆ ಅಶುಭ ಸಮಾಚಾರ,ಗರ್ಭಿಣಿಗೆ ಗರ್ಭಪಾತ ಸಂಭವ, ಪ್ರೇಮ ಪ್ರಕರಣಗಳು ಹೆಚ್ಚಾಗಲಿವೆ, ಪ್ರೇಮದಲ್ಲಿ ಮೋಸ ಸಂಭವ.

ವೃಷಭ: ನಿಮ್ಮ ಪ್ರಯತ್ನದಲ್ಲಿದ್ದ ಲಾಭವಾಗುವ ಸಾಧ್ಯತೆ,ತಪ್ಪು ತೀರ್ಮಾನಗಳಿಂದ ಪ್ರೇಮಿಗಳಲ್ಲಿ ವೈಮನಸ್ಸು ಉಂಟಾಗುವ ಸಾಧ್ಯತೆ, ನಿರ್ಮಾಣ ಬೋರ್ವೆಲ್ ನಿರ್ಮಾಣ ಕೆಲಸಗಳನ್ನು ತೆಗೆದುಕೊಳ್ಳುವ ಸಾಧ್ಯತೆ.

ಮಿಥುನ: ನೀವು ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿದ್ದರೆ ಯಾವುದೇ ರೀತಿಯ ಔಷಧಿಗಳಲ್ಲಿ ಅಸಡ್ಡೆ ಮಾಡಬೇಡಿ, ಇಲ್ಲದಿದ್ದರೆ ನಿಮ್ಮ ಸಮಸ್ಯೆ ಇಂದು ಹೆಚ್ಚಾಗಬಹುದು. ಕೆಲಸದಲ್ಲಿ ಇಂದು ಅತ್ಯಂತ ಕಾರ್ಯನಿರತ ದಿನ.

ಕಟಕ: ಮೆಕ್ಯಾನಿಕಲ್​ ಇಂಜಿನಿಯರ್​ಗಳಿಗೆ ಇದು ಶುಭ ದಿನವಾಗಿದೆ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯಲಿದ್ದೀರಿ. ಸಂಗಾತಿಯೊಂದಿಗೆ ತಪ್ಪು ಕಲ್ಪನೆಯಿಂದಾಗಿ ಜಗಳ ಮಾಡಿಕೊಳ್ಳುವಿರಿ . ಕಂಕಣ ಭಾಗ್ಯವಿದೆ. ಅರೆಮನಸ್ಸಿನಿಂದ ಯಾವುದೇ ಕೆಲಸಕ್ಕೆ ಕೈ ಹಾಕಬೇಡಿ.

ಸಿಂಹ: ಇಂದು ನಿಮಗೆ ಅಂದುಕೊಂಡ ಕಾರ್ಯಗಳು ನೆರವೇರುವುದರಿಂದ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಆದರೆ ಚಿಂತೆ ಬೇಡ. ಮನೆಮದ್ದೇ ಸಾಕಾಗುತ್ತದೆ. ಉದ್ಯಮದಲ್ಲಿ ಮೂರ್ಖತನದಿಂದಾಗಿ ನಷ್ಟ ಉಂಟಾಗಬಹುದು.

ಕನ್ಯಾ: ಮಾಡುವ ಕಾರ್ಯಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿರುತ್ತದೆ. ಕೆಲಸದಲ್ಲಿನ ಸಮಸ್ಯೆಗಳನ್ನು ಆ ಕ್ಷಣದಲ್ಲಿ ಬಗೆಹರಿಸಿ. ಪತ್ನಿಯೊಡನೆ ಈ ದಿನ ಉತ್ತಮ ರೀತಿಯಲ್ಲಿ ಕಾಲ ಕಳೆಯುತ್ತೀರಿ. ಅವಿಸ್ಮರಣೀಯ ಎನಿಸುವ ಪ್ರೇಮ ದಯಪಾಲಿಸಲಿದೆ.

ತುಲಾ: ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ಬ್ಯಾಂಕಿನಲ್ಲಿ ವ್ಯವಹರಿಸುವಾಗ ಬ್ಯಾಂಕಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿಟ್ಟು ಕೊಳ್ಳಿ. ನಿಮ್ಮ ಗಮನವನ್ನು ಬೇರೆಡೆ ಸೆಳೆದು ಹಣ ದೋಚುವವರಿಂದ ಎಚ್ಚರದಿಂದಿರಿ.

ವೃಶ್ಚಿಕ: ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಅಪೇಕ್ಷಿತ ಧನಸಹಾಯ ದೊರೆಯುವುದು.

ಧನು: ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುವದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು.

ಮಕರ: ಮನೆಯ ಕೆಲಸಗಳಲ್ಲಿ ಪ್ರಗತಿ ಇಲ್ಲ. ಸರ್ಕಾರಿ ಕ್ಷೇತ್ರಗಳಲ್ಲಿ ಕಾರ್ಯಸಿದ್ದಿ. ಆಕಸ್ಮಿಕ ಕಾರ್ಯನಿಮಿತ್ತ ಪ್ರಯಾಣ ಬೆಳೆಸುವಿರಿ, ಭೂಮಿ ಕಟ್ಟಡ ಮರ ಇತ್ಯಾದಿ ವ್ಯಾಪಾರಿಗಳಿಗೆ ಅಭಿವೃದ್ಧಿ ಕಾಲ, ಪ್ರೇಮಿಗಳಿಗೆ ವಿವಾಹ ಕಾರ್ಯಗಳಿಗೆ ಅವಕಾಶ.

ಕುಂಭ : ನಿವೇಶನ ಖರೀದಿಗಾಗಿ ಹಣ ಖರ್ಚು ಸಂಭವ, ನಿಮ್ಮ ಪ್ರತಿಭೆಗೆ ತಕ್ಕ ಬೆಲೆ ಸಿಗಲಿದೆ, ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ನಿಮ್ಮ ಆಸೆ ಎಲ್ಲವೂ ನೆರವೇರಲಿದೆ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ.

ಮೀನ: ಸ್ತ್ರೀ ಮೂಲಕ ಧನಲಾಭ, ವ್ಯಾಪಾರಿಗಳಿಗೆ ಧನಲಾಭ, ಉದ್ಯೋಗಿಗಳಿಗೆ ಬಡ್ತಿ ಸಂಭವ, ಅಧಿಕಾರಿಗಳಿಗೆ ಧನಲಾಭ ಮತ್ತು ಸ್ಥಾನಮಾನ, ಅವಿವಾಹಿತರಿಗೆ ವಿವಾಹಯೋಗ, ಪ್ರೈವೇಟ್ ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚುತ್ತದೆ.

Leave a Reply

Your email address will not be published. Required fields are marked *

error: Content is protected !!