ಏರುತ್ತಿರುವ ಬೆಲೆಗಳ ವಿರುದ್ದ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ: ಕೆಪಿಸಿಸಿ ಪ್ರಚಾರ ಸಮಿತಿ ಸಂಚಾಲಕ ತಿಬ್ಬೇಗೌಡ

ಬೆಂಗಳೂರು : ದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅನಿಯಂತ್ರಿತವಾಗಿ ಏರುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಹಾಗೂ ಖಾದ್ಯ ತೈಲಗಳ ಬಗ್ಗೆ ಹಾಗೂ ಅದಕ್ಕೆ ಕಾರಣವಾಗಿರುವ ಕೇಂದ್ರ ಸರಕಾರದ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಂಚಾಲಕ ತಿಬ್ಬೇಗೌಡ ಕರೆ ನೀಡಿದರು.

ಇಂದು ರಾಜರಾಜೇಶ್ವರಿ ನಗರದ ಬಾಲಕೃಷ್ಣ ರಂಗಮಂದಿರದಲ್ಲಿ ಸ್ವಾತಿ ಜ್ಯೋತಿ ಮಹಿಳಾ ಸಹಕಾರಿ ಸಂಘ ಹಾಗೂ ಯಶಸ್‌ ಚಾರಿಟೇಬಲ್‌ ಟ್ರಸ್ಟ್‌ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಬೃಹತ್‌ ಉಚಿತ ಕೋವಿಡ್‌ ಲಸಿಕೆಯನ್ನು ನೀಡುವ ಮಹಿಳೆಯರಿಗೆ ಸೀರೆ – ಬ್ಯಾಂಕ್ಯೇಟ್‌ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ಕೇಂದ್ರ ಸರಕಾರದ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಬಿಜೆಪಿ ಜನಸಾಮಾನ್ಯರ ಜೀವನವನ್ನು ದುಸ್ತರಕ್ಕೀಡುಮಾಡಿದೆ. ಅದರಲ್ಲೂ ಕರೋನಾ ಸಂಧರ್ಭದಲ್ಲಿ ಜನರಿಗೆ ಮುನ್ನೇಚ್ಚರಿಕೆ ನೀಡದೆ ಲಾಕ್‌ಡೌನ್‌ ಮಾಡಿ ಇನ್ನಷ್ಟು ತೊಂದರೆಗೀಡು ಮಾಡಿತು. ಲಾಕ್‌ಡೌನ್‌ ನ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಸಂಧರ್ಭದಲ್ಲೇ ಅಗತ್ಯವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ಜನರ ಜೀವನದ ಮೇಲೆ ಗಧಾಪ್ರಹಾರ ಮಾಡಿದೆ. ಕಾಂಗ್ರೆಸ್‌ ಸರಕಾರ 70 ವರ್ಷಗಳಲ್ಲಿ ಸಾಧಿಸದೇ ಇರುವುದನ್ನು ಬಿಜೆಪಿ ಕೇವಲ 7 ವರ್ಷಗಳಲ್ಲಿ ಸಾಧಿಸಿದೆ ಎಂದು ವಂಗ್ಯವಾಡಿದರು. ಈ ಬಗ್ಗೆ ಜನರಲ್ಲಿ ಸಾಕಷ್ಟು ಅಸಮಾಧಾನವಿದೆ. ಇದರ ಬಗ್ಗೆ ಮತ್ತಷ್ಟು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಮ್ಮ ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಮತಿ ಕುಸುಮಾ ಮಾತನಾಡಿ, ಕೋವಿಡ್‌ ಲಸಿಕೆಯನ್ನು ನೀಡುವ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಬಿಜೆಪಿ ಮುಖಂಡರುಗಳು. ಕೋವಿಡ್‌ ನಿಂದ ತೊಂದರೆಗೀಡಾದ ಜನರಿಗೆ ಬಿಜೆಪಿ ಸರಕಾರ ಯಾವುದೇ ಸಹಾಯವನ್ನು ಮಾಡಿಲ್ಲ. ಆದರೆ, ನಮ್ಮ ಪಕ್ಷ ಈ ಸಂಧರ್ಭದಲ್ಲಿ ಜನರಿಗೆ ಸಾಂತ್ವಾನ ಹೇಳುವ ಕಾರ್ಯದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದೆ. ಇಂತಹ ಬದ್ದತೆ ನಮ್ಮ ಪಕ್ಷದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ನೀಡಲಾಯಿತು. ಇದೇ ಸಂಧರ್ಭದಲ್ಲಿ ತಿಬ್ಬೇಗೌಡ ಅವರಿಂದ ಸೀರೆ ಹಾಗೂ ಬ್ಯಾಂಕೇಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಜ್‌ಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಪ್ರೀತಂ, ಶಿವು ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು,

Leave a Reply

Your email address will not be published. Required fields are marked *

error: Content is protected !!