ಬಡವರಿಗೆ ಸರಕಾರದಿಂದ ಬರುವ ವೃದ್ಯಾಪ ವೇತನ ವನ್ನು ಅಧಿಕಾರಿಗಳ ಸಹಕಾರದೊಂದಿಗೆ ಮಾಡಿಕೊಟ್ಟ ಕರವೇ ಕಾರ್ಯಕರ್ತರು

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ವಯಸ್ಸಾದ ಮಹಿಳೆಯರು ಮತ್ತು ವೃದ್ಧರು ನಮಗೆ ಮಾಸಾಸನ ಬರುತ್ತಿಲ್ಲ ಮತ್ತು ಇದಕ್ಕೆ ಯಾವ ದಾಖಲೆಗಳು ಒದಗಿಸಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಕರವೇ ಕಾರ್ಯಕರ್ತರಿಗೆ ಫೋನ್ ಬಂದ ಕಾರಣ ಕರವೇ ಕಾರ್ಯಕರ್ತರು ಅವರನ್ನು ಸಂಪರ್ಕಿಸಿ ಅವರ ದಾಖಲೆಗಳನ್ನು ನೋಡಿ ಅದರಲ್ಲಿ ಆಧಾರ್ ಕಾರ್ಡ್ ಇಲ್ಲದವರಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ಮತ್ತು ಬ್ಯಾಂಕ್ ಖಾತೆ ಇಲ್ಲದವರಿಗೆ ಬ್ಯಾಂಕ್ ಖಾತೆಯನ್ನು ಮಾಡಿಸಿಕೊಟ್ಟುಕರವೇ ಕಾರ್ಯಕರ್ತರು ಇವರ ಅರ್ಜಿಗಳನ್ನು ಭರ್ತಿ ಮಾಡಿ ಒಟ್ಟು 10 ಜನರಿಗೆವೃದ್ಧಾಪ್ಯ ವೇತನಕ್ಕಾಗಿ ಶನಿವಾರಸಂತೆ ಕಂದಾಯ ಅಧಿಕಾರಿಗಳ ಮುಂದೆ ಇವರ ದಾಖಲೆಗಳನ್ನು ಕೊಟ್ಟು ಶನಿವಾರಸಂತೆ ಕಂದಾಯ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿ ದಾಖಲೆ ಸರಿ ಇದೆ ಇವರಿಗೆ ವಯಸ್ಸು ಸರಿಯಾಗಿದೆ ಹಾಗಾಗಿ ತುಂಬು ಹೃದಯದಿಂದ ಈ 10 ಬಡ ಜನರಿಗೆ ವೃದ್ಧಾಪ್ಯ ವೇತನ ಮಾಡಿಕೊಟ್ಟಿರುತ್ತಾರೆ .ಮತ್ತು ವೃದ್ಯಾಪ ವೇತನ ದ ಆರ್ಡರ್ ಕಾಪಿ ಯನ್ನು ಸಹ ಫಲಾನುಭವಿಗಳಿಗೆ ಉಪ ತಹಸಿಲ್ದಾರ್ ಮಧುಸೂದನ್ ರವರು ಮತ್ತು ಕಂದಾಯ ಪರಿವೀಕ್ಷಕರಾದ ಮಂಜುನಾಥ್ ರವರು ಈ ಎಲ್ಲ ವೃದ್ಧಾಪ್ಯ ವೇತನ ಫಲಾನುಭವಿಗಳಿಗೆ ಆರ್ಡರ್ ಕಾಪಿ ಯನ್ನು ವಿತರಿಸಿದರು .ಬಸವನಕೊಪ್ಪದ 2 ಜನ ವೃದ್ಯಾಪ ವೇತನ ಫಲಾನುಭವಿಗಳು ಹಾಗೂ ಮಾದೇಗೋಡು ನಲ್ಲಿ 2ಜನ ಹಾಗೂ ರಾಮನಳ್ಳಿ 2ಜನ ನಂದಿಗುಂದ 2 ಜನ ಗೋಪಾಲಪುರ 2ಜನ ಒಟ್ಟು 10 ಜನ ಫಲಾನುಭವಿಗಳಿಗೆ ವೃದ್ಯಾಪ ವೇತನ ವನ್ನು ಮಾಡಿಸಲಾಯಿತು ವೃದ್ಯಾಪ ವೇತನ ವನ್ನು ಮಾಡಿಸಿ ಕೊಟ್ಟಂತಹ ಉಪ ತಹಸೀಲ್ದಾರರಾದ ಮಧುಸೂದನ್ ರವರಿಗೆ ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ ಹಾಗೆಯೇ ಕಂದಾಯ ಪರಿವೀಕ್ಷಕರಾದ ಮಂಜುನಾಥ್ ರವರಿಗೆ ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ ಹಾಗೆಯೇ ಗ್ರಾಮ ಗ್ರಾಮಲೆಕ್ಕಿಗ ರವರಿಗೆ ಮತ್ತು ಗ್ರಾಮ ಸಹಾಯಕರಿಗೆ ಮತ್ತುಶನಿವಾರಸಂತೆ ಕಂದಾಯ ಅಧಿಕಾರಿಗಳಿಗೆ ಎಲ್ಲರಿಗೂ ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ ..ಈ ಸಂದರ್ಭದಲ್ಲಿ ಶನಿವಾರಸಂತೆ ಕಂದಾಯ ಉಪ ತಹಸೀಲ್ದಾರ್ ಮಧುಸೂದನ್ ರವರು ಮತ್ತು ಕಂದಾಯ ಪರಿವೀಕ್ಷಕರಾದ ಮಂಜುನಾಥ್ ರವರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮತ್ತುಕರವೇ ತಾಲ್ಲೂಕು ಅಧ್ಯಕ್ಷ ರಾದ ಫ್ರಾನ್ಸಿಸ್ ಡಿಸೋಜಾ ರವರು ಮತ್ತು ಕರವೇ ತಾಲ್ಲೂಕು ಕಾರ್ಯದರ್ಶಿ ರಾಮನಲ್ಲಿ ಪ್ರವೀಣ್ ಮತ್ತು ಕರವೇ ಗ್ರಾಮ ಘಟಕದ ಅಧ್ಯಕ್ಷರು ಹರೀಶ್ ಮತ್ತು ಕರವೇ ಹೋಬಳಿ ಅಧ್ಯಕ್ಷರಾದ ಆನಂದ್ ಮತ್ತು ಕರವೇ ಕಾರ್ಯಕರ್ತರಾದ ರಾಜಣ್ಣ ಇನ್ನಿತರ ಕರವೇ ಕಾರ್ಯಕರ್ತರು ಮತ್ತು ವೃದ್ಧಾಪ್ಯ ವೇತನದ ಫಲಾನುಭವಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!