ತುಮಕೂರು ಗ್ರಾಮಾಂತರ ಗೂಳೂರು ಹೋಬಳಿಯ ಪಾಲಸಂದ್ರ ಗ್ರಾಮದಲ್ಲಿ ನೂರಾರು ಕುಟುಂಬಗಳಿಗೆ ಸಮಸ್ಯೆಯಾಗಿದ್ದ ಸುಮಾರು ಮೂವತ್ತು ವರ್ಷಗಳಿಂದ ಬಗೆಹರಿಯದೇ ನೆನೆಗುದಿಗೆ ಬಿದ್ದಿದ್ದ ರಸ್ತೆ ವಿಚಾರವನ್ನು ಬಗೆಹರಿಸಿಕೊಡುವಂತೆ ಸನ್ಮಾನ್ಯ ಶಾಸಕರಾದ ಡಿಸಿ ಗೌರಿಶಂಕರ್ ಅವರನ್ನು ಗ್ರಾಮಸ್ಥರು ಭೇಟಿ ಮಾಡಿ ಕೇಳಿಕೊಂಡಾಗ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಖುದ್ದು ಶಾಸಕರೇ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನೆಲ್ಲ ಒಂದೆಡೆ ಸೇರಿಸಿ ಕುಳಿತು ಮಾತನಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿ, ಗ್ರಾಮಸ್ಥರೆಲ್ಲರೂ ಒಂದೇ ಕುಟುಂಬದಂತೆ ಯಾವುದೇ ಸಮಸ್ಯೆ ಇಲ್ಲದೆ ಒಟ್ಟಿಗೆ ಇರಬೇಕೆಂದು ತಿಳಿಸಿ, ಸ್ವತಹ ಶಾಸಕರೆ ಮುಂದು ನಿಂತು ಜೆಸಿಬಿ ವಾಹನವನ್ನು ತರಿಸಿ ರಸ್ತೆ ಮಾಡಿಸಿ ಗ್ರಾಮಸ್ಥರ ಓಡಾಟಕ್ಕೆ ಅನುವು ಮಾಡಿಕೊಟ್ಟರು, ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲರೂ ಶಾಸಕರ ಈ ಕಾರ್ಯಕ್ಕೆ ಮೆಚ್ಚುಗೆ ಸಲ್ಲಿಸಿ, ಹರುಷ ವ್ಯಕ್ತಪಡಿಸಿದರು.