ಸ್ಮಶಾನ ಬಳಿ ವಿದ್ಯಾರ್ಥಿ ನಿಲಯ ಕಟ್ಟಡ ರದ್ದುಪಡಿಸಿ, ಸೂಕ್ತ ಸ್ಥಳದಲ್ಲಿ ನಿರ್ಮಾಣ ಮಾಡಲು ಒತ್ತಾಯಿಸಿ, : ಜೆಡಿಎಸ್ ಪ್ರತಿಭಟನೆ

ಪಾವಗಡ : “ಮುಕ್ತಿಧಾಮ ಬಳಿ ಸತ್ತವರನ್ನು ಸುಡುವಂತಹ ಜಾಗದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ” ಮಾಡಿ ಹೆಣಗಳು ಸುಡುವ ವಾಸನೆಗೆ, ವಿದ್ಯಾರ್ಥಿಗಳ ಆರೋಗ್ಯ ಕೆಡುವುದರ ಜೊತೆಗೆ, ಭಯದ ವಾತಾವರಣ ಎದುರಾಗಿ, ಕರೋನ ಸಂದರ್ಭದಲ್ಲಿ, ವಿದ್ಯಾರ್ಥಿಗಳ ಉಜ್ಜಲ ಭವಿಷ್ಯ ದೃಷ್ಟಿಯಿಟ್ಟುಕೊಂಡು ಮಾನ್ಯ ರಾಜ್ಯದ ಮುಖ್ಯಮಂತ್ರಿಗಳು, ಸಂಬಂಧ ಪಟ್ಟ ಸಚಿವರು, ಹಾಗೂ ಜಿಲ್ಲಾದಿಕಾರಿಗಳಲ್ಲಿ ಕೆ. ಎಂ. ತಿಮ್ಮರಾಯಪ್ಪರವರು ಮನವಿ ಮಾಡಿಕೊಂಡರು. ಸರ್ಕಾರ ಸ್ಥಳದಲ್ಲಿ 178 ಸರ್ವೇ ನಂಬರ್ ನಲ್ಲಿರುತಕಂತ ಸ್ಥಳದಲ್ಲಿ ವಿದ್ಯಾರ್ಥಿಗಳ ನಿಲಯಗಳ ಕಟ್ಟಡ ನಿರ್ಮಾಣ ಮಾಡಿ ಗಡಿನಾಡಿನ ಬರಪೀಡಿತ ಪ್ರದೇಶದ ವಿದ್ಯಾರ್ಥಿಗಳಿಗೆ ಅನುವು ಮಾಡಬೇಕೆಂದು ಮಾಜಿ ಶಾಸಕ ಕೆ. ಎಂ. ತಿಮ್ಮರಾಯಪ್ಪರವರು ಮನವಿ ಮಾಡಿಕೊಂಡರು.
ಪ್ರತಿಭಟನಕಾರರು ತಹಶೀಲ್ದಾರ್ ಕಚೇರಿ ಎದುರು ರಸ್ತೆ ತಡೆದು ಪ್ರತಿಭಟಿಸಿ, ಹಾಲಿ ಶಾಸಕರ ವಿರುದ್ಧ ದಿಕ್ಕಾರ ಕೂಗಿ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯದ ಕಟ್ಟಡ ನಿಲ್ಲಿಸಿ ಸ್ಥಳಂತರಿಸಿ ವಿದ್ಯಾರ್ಥಿಗಳಿಗೆ ಅನುವು ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ, ಜನಪ್ರಿಯ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪರವರು, ತಿಮ್ಮಾರೆಡ್ಡಿರವರು,ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾದ ಆರ್. ಸಿ. ಅಂಜನಪ್ಪರವರು, ಮಾನಂ ವೆಂಕಟಸ್ವಾಮಿ, ಸೊಗಡು ವೆಂಕಟೇಶ್, ರಾಜಶೇಖರಪ್ಪರವರು, ಬಲರಾಮರೆಡ್ಡಿ, ಬಿ. ಎಸ್. ಪಿ. ಮಂಜುನಾಥ, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಮಂಜುನಾಥ ಚೌದರಿ, ಪ್ರಭು, ವಸಂತಕುಮಾರ್ , ಗುಟ್ಟಹಳ್ಳಿ ಮಣಿ, ಜಿ. ಯಾ. ವೆಂಕಟೇಶ್, ಕಾವಲಗೆರೆ ರಾಮಾಂಜಿನಪ್ಪ, ನಾಗೇಂದ್ರ, ಶಾಂತಕುಮಾರ್, ಕಮಲ್ ಬಾಬು, ಕೊತ್ತೂರು ನಾಗೇಶ್, ಜೆಡಿಎಸ್
ಐ. ಟಿ. ಘಟಕದ ಅಧ್ಯಕ್ಷ ರಾದ ಶಿವಕುಮಾರ, ಉಪಾಧ್ಯಕ್ಷ ರಾದ ತಿಮ್ಮರಾಜು, ಐ. ಟಿ. ಘಟಕದ ಪದಾಧಿಕಾರಿಗಳು, ಹಲವಾರು ಕನ್ನಡಪರ ಸಂಘಟನೆಗಳು, ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!