ಚಮತ್ಕಾರ ಪುಡಿ
(1) 50 ಗ್ರಾಂ ಕರಿಜಿರಿಗೆ
(2) 100ಗ್ರಾಂ ಅಜ್ವಾನ (ಓಂ ಕಾಳು/ ಓವಿನಕಾಳು)
(3) 250ಗ್ರಾಂ ಮೆಂಥ್ಯ
ಈ ಚಮತ್ಕಾರ ಚೂರ್ಣ ಅಥವಾ ಪುಡಿಯನ್ನು ತಯಾರಿಸುವ ಮತ್ತು ಬಳಸುವ ವಿಧಾನ:
1. ಮೂರು ಪದಾರ್ಥಗಳನ್ನು ಚೆನ್ನಾಗಿ ಸ್ವಚ್ಛ ಮಾಡಿ ಸ್ವಲ್ಪ ಉಗುರು ಬೆಚ್ಚಗೆ ಹುರಿಯಬೇಕು.
2. ಹುರಿದ ಆ ಮೂರು ಪದಾರ್ಥಗಳನ್ನು ಬೇರೆ ಬೇರೆಯಾಗಿ ಪುಡಿ ಮಾಡಿ.
3.ಆ ಮೇಲೆ ಮೂರು ಪುಡಿಗಳನ್ನು ಕೂಡಿಸಿ ಮತ್ತೊಮ್ಮೆ ಚೆನ್ನಾಗಿ ಪುಡಿಮಾಡಿ ಒಳ್ಳೆಯ ಗಾಜಿನ ಸೀಸೆಯಲ್ಲಿ ಅಥವಾ ಸ್ಟೀಲ್ ಡಬ್ಬಿಯಲ್ಲಿ ಹಾಕಬೇಕು
4. ರಾತ್ರಿ ಮಲಗುವ ಸಮಯದಲ್ಲಿ ಅರ್ಧ ಚಮಚ ಪುಡಿಯನ್ನು ಒಂದು ಗ್ಲಾಸು ಉಗುರು ಬೆಚ್ಚಗಿನ ಬಿಸಿ ನೀರಿನಲ್ಲಿ ತೆಗೆದುಕೊಳ್ಳಬೇಕು. 5. ಚೂರ್ಣ ತೆಗೆದುಕೊಂಡ ನಂತರ ಏನನ್ನು ತಿನ್ನಬಾರದು ಹಾಗೂ ಕುಡಿಯಬಾರದು.
6. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕೂಡ ಚೂರ್ಣವನ್ನು ತೆಗೆದುಕೊಳ್ಳಬಹುದು ಮತ್ತು ನಿಮ್ಮ ದಿನಚರಿಯನ್ನು ಮಾಡಿಕೊಳ್ಳಬಹುದು.
ಈ ಚೂರ್ಣವನ್ನು ಪ್ರತಿದಿನ ತೆಗೆದುಕೊಳ್ಳುವುದರಿಂದ ಶರೀರದ ಮೂಲೆ ಮೂಲೆಯಲ್ಲಿ ಅಡಗಿರುವಂತಹ ಎಲ್ಲ ಕೆಟ್ಟ ಪದಾರ್ಥಗಳನ್ನು ಮಲ, ಮೂತ್ರ ಮತ್ತು ಬೆವರಿನ ಮೂಲಕ ಹೊರ ಹಾಕುತ್ತದೆ. ಇದರ ಪೂರ್ತಿ ಲಾಭ 80 ರಿಂದ 90 ದಿನಗಳಲ್ಲಿ ನಿಮಗೆ ತಿಳಿಯುತ್ತದೆ. ಯಾವಾಗ ದೇಹದ ಕೊಬ್ಬು ಕರಗಿ ಹೊಸ ರಕ್ತ ಸಂಚಾರವಾಗುತ್ತದೆಯೋ ಆಗ ಶರೀರದಲ್ಲಿ ಹೊಸ ಉತ್ಸಾಹ ಮತ್ತು ಚೈತನ್ಯ ಬರುತ್ತದೆ
ಉಪಯೋಗಗಳು:
1. ಮಧುಮೇಹ ಸಕ್ಕರೆ ಕಾಯಿಲೆ ರೋಗದವರು ಇದನ್ನು ತೆಗೆದುಕೊಳ್ಳುವುದರಿಂದ ತುಂಬಾ ಒಳ್ಳೆಯದು ಅವರು ತೆಗೆದುಕೊಳ್ಳುವ ಔಷಧಿಗಳನ್ನು ತೆಗೆದುಕೊಳ್ಳಬೇಕು ನಿಲ್ಲಿಸಬಾರದು ಇದರಿಂದ ಮಧುಮೇಹ ರೋಗ ಹೆಚ್ಚಾಗದಂತೆ ನಾರ್ಮಲ್ ಆಗಿರುವುದು ಈ ಚೂರ್ಣವನ್ನು ಎರಡು ತಿಂಗಳುಗಳ ಕಾಲ ತೆಗೆದುಕೊಂಡರೆ ಇದರ ಪರಿಣಾಮ ತಿಳಿಯುತ್ತದೆ.
2. ಗ್ಯಾಸ್ಟಿಕ್ ಸಮಸ್ಯೆಯು ನಿವಾರಣೆಯಾಗುತ್ತದೆ.
3. ಮೂಳೆಗಳು ಗಟ್ಟಿಯಾಗುವುದು ಮತ್ತು ಚರ್ಮವ್ಯಾಧಿ ಕಡಿಮೆಯಾಗುವುದು.
4.ಕೆಲಸ ಮಾಡಲು ಶಕ್ತಿ ಮತ್ತು ಸ್ಫೂರ್ತಿ ಬರುತ್ತದೆ
5. ದೃಷ್ಟಿಯು ಚುರುಕಾಗುತ್ತದೆ.
6. ಕೂದಲು ಚೆನ್ನಾಗಿ ಬೆಳೆಯುತ್ತದೆ
7. ಶರೀರದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುವುದು
8. ಉಸಿರಾಟ ಸುಗಮವಾಗುವುದು
9. ಹೃದಯದ ಕಾರ್ಯಗಳು ಚೆನ್ನಾಗಿ ನಡೆಯುವುದು.
10. ಸುಸ್ತಾಗುವುದಿಲ್ಲ ಹಾಗೂ ಚುರುಕಾಗಿ ದೇಹ ಸ್ಪೂರ್ತಿಯಿಂದ ಇರುವುದು.
11. ನೆನಪಿನ ಶಕ್ತಿ ಚೆನ್ನಾಗಿರುವುದು.
12. ಕಿವಿಗಳಲ್ಲಿ ಗ್ರಹಣ ಶಕ್ತಿ ಹೆಚ್ಚುವುದು.
13 ಸ್ತ್ರೀಯರಿಗೆ ಮದುವೆಯ ನಂತರವೂ ದೇಹವು ಸುಂದರವಾಗಿರುವುದು
14. ಹಿಂದೆ ತೆಗೆದುಕೊಂಡ ಮಾತ್ರ ಔಷಧಿಗಳಿಂದ ಮುಂದೆ ಆಗುವ ತೊಂದರೆಗಳನ್ನು ಪಾರ್ಶ್ವ ಅಥವಾ ಅಡ್ಡ ಪರಿಣಾಮಗಳಿಂದ ಮುಕ್ತಿ ನೀಡುವುದು.
15. ಹಲ್ಲುಗಳು ಗಟ್ಟಿಯಾಗುವುದು.
16. ಹೃದಯದ ರಕ್ತನಾಳಗಳಲ್ಲಿ ರಕ್ತ ತಡೆ ಇರುವುದಿಲ್ಲ.
17. ನಪುಂಸಕತೆ ದೂರವಾಗುವುದು ಹಾಗೂ ಆರೋಗ್ಯವಂತ ಮಕ್ಕಳು ಹುಟ್ಟುವವು.
18. ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
19. ಯಾವ ವಯಸ್ಸಿನವರು ಬೇಕಾದರೂ ತೆಗೆದುಕೊಳ್ಳಬಹುದು ಇದರಿಂದ ಯೌವ್ವನ ಯುಕ್ತರಾಗಿ ಇರಬಹುದು.
20. ಸ್ತ್ರೀಯರಿಗೆ ಮದುವೆಯ ನಂತರ ಮದುವೆಗೆ ಮುಂಚೆ ಇರುವಂತಹ ತೊಂದರೆಗಳು ಗುಣವಾಗುವವು.
21. ದೇಹದಲ್ಲಿ ವಾತಾವರಣದಿಂದ ಆಗುವ ತೊಂದರೆಯನ್ನು ತಡೆಯಬಹುದು
22. ಜೀರ್ಣಶಕ್ತಿ ಹೆಚ್ಚಾಗುವುದು.
23. ಚರ್ಮವು ಕಾಂತಿಯುಕ್ತವಾಗುವುದು.
24. ಮಲೇರಿಯಾ, ಜೋಯಿಂಡಿಸ್, ಟೈಫೈಡ್, ಕಾಲರ ಎಲ್ಲ ರೋಗಗಳು ಬರದಂತೆ ತಡೆಯುವ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
25. ಶರೀರದಲ್ಲಿ ನೀರು, ಗಾಳಿ, ಬಿಸಿಲು ಇವುಗಳ ತಾಪಮಾನದಿಂದ ಬರುವ ರೋಗಗಳಿಂದ ಮುಕ್ತಿ.
26. ಹಬ್ಬದ ಊಟ ಪಾರ್ಟಿ ಊಟ ಹೆಚ್ಚಾದಾಗ ತಿಂದ ಊಟ ಸಲೀಸಾಗಿ ಪಚನವಾಗುವುದು.
27. ಹೃದಯಾಘಾತ ಆಗದಂತೆ ತಡೆಯುವುದು ಮತ್ತು ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ.
28. ನಮ್ಮ ಚರ್ಮ ಕಾಂತಿಯುಕ್ತವಾಗಿ ಸುಕ್ಕುಗಟ್ಟಿದಂತೆ, ಒಣಗದಂತೆ ಎಲ್ಲ ಚರ್ಮ ರೋಗಗಳಿಂದ ಮುಕ್ತಿ.
* ಆರೋಗ್ಯವೇ ಭಾಗ್ಯ*