ಪಾವಗಡದಲ್ಲಿ ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ

ಬರುವಂತ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಯಲ್ಲಿ ಪಾವಗಡದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮುಖೇನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ವಿಧಾನಸೌಧಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ತಿಳಿಸಿದರು.
ನಿನ್ನೆ ಪಾವಗಡ ತಾಲ್ಲೂಕು ದೊಡ್ಡಹಳ್ಳಿ ಸೇವೆ ಹಾಗೂ ಸಮರ್ಪಣಾ ಅಭಿಯಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 17ರಿಂದ ಅಕ್ಟೋಬರ್‌ 7ರ ವರೆಗೆ ಸೇವೆ ಹಾಗೂ ಸಮರ್ಪಣಾ ಅಭಿಯಾನದ ಮೂಲಕ ಲಕ್ಷಾಂತರ ಜನರಿಗೆ ನೆರವು ನೀಡಲಾಗುವುದು ಎಂದು  ಬಿಜೆಪಿ ಜಿಲ್ಲಾಧ್ಯಕ್ಷ ಬಿ. ಸುರೇಶಗೌಡ ತಿಳಿಸಿದರು.ಗ್ರಾಮಗಳಲ್ಲಿ ದಿವ್ಯಾಂಗರಿಗೆ ಸೈಕಲ್‌, ಬೈಕ್‌, ಶ್ರವಣ ಸಾಧನ ಸೇರಿದಂತೆ ಅಗತ್ಯ ಉಪಕರಣ ನೀಡುವುದು ಸೇರಿದಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುವುದು ಸೇರಿದಂತೆ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.
ಕೇಂದ್ರ ಸರಕಾರದ ಜನೋಪಯೋಗಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು ಸ್ವದೇಶಿ ಅಭಿಯಾನದ ಭಾಗವಾಗಿ ಕುಂಬಾರರು, ಕಮ್ಮಾರರು ಸೇರಿ ಕೌಶಲ್ಯ ಆಧರಿತ ಬದುಕು ಸಾಗಿಸುವವರಿಂದ ಅವರಿಂದ ವಸ್ತುಗಳನ್ನು ಖರೀದಿಸಿ ಅವರಿಗೆ ನಾವು ನೇರವಾಗಬೇಕು.ಎಂದು ತಿಳಿಸಿದರು.ದೇಶದಲ್ಲಿ ಮೋದಿ ಅವರಿಗೆ ಧನ್ಯವಾದ ತಿಳಿಸುವ ಪೋಸ್ಟ್‌ ಕಾರ್ಡ್‌ ಬರೆಯಲು ಪ್ರೇರೇಪಿಸಬೇಕು.ಪ್ರತಿ ಬೂತ್‌ನಿಂದ ಕನಿಷ್ಠ 100  ಪತ್ರಗಳು ದಿಲ್ಲಿ ತಲುಪಬೇಕು ಈ ನಿಟ್ಟಿನಲ್ಲಿ ನಾವೆಲ್ಲ ಕೂಡಲೇ ಪತ್ರ ಬರೆದು ಮೋದಿ ಅವರಿಗೆ ಧನ್ಯವಾದ ಸಮರ್ಪಣೆ ಮಾಡಬೇಕು ಎಂದರು. ಯಾರು ಯಾರು ಪತ್ರ ಬರೆಯಬಹುದು ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸೌಲಭ್ಯ ಪಡೆದುಕೊಂಡವರು ಸಣ್ಣ ಹಾಗೂ ಮಧ್ಯಮ ರೈತರು ಪಡೆದಿರುವ ಸಹಾಯಧನ ಇನ್ಸೂರೆನ್ಸ್  ಸೌಲಭ್ಯ ಪಡೆದಿರುವ ರೈತರು ಮಹಿಳೆಯರು, ತಾಯಂದಿರ ಮೂಲಕ ಪತ್ರ ಬರೆಸಬೇಕು.
 21 ದಿನಗಳ ಕಾಲ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’ದಲ್ಲಿ ನಾವೆಲ್ಲ ಭಾಗವಹಿಸಬೇಕು ಎಂದರು.
ಬೂತ್ ಸಮಿತಿ ಅಧ್ಯಕರ ಮನೆಗೆ ನಾಮಪಲಕ ಅಳವಡಿಸುವ ಕಾರ್ಯಕ್ಕ್ಕೆ ಚಾಲನೆ ನೀಡಿದರು.
ಪಾವಗಡ ವೆಂಕಟಾಪುರ ದೊಡ್ಡಹಳ್ಳಿ ಬುಗುಡೂರು ನಾಗಲಮಡಿಕೆ ಹಾಗೂ ಮಚರಾಜನಹಳ್ಳಿ ಗ್ರಾಮಗಳಲ್ಲಿ  ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
 ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ರವಿ ಶಂಕರ್ ನಾಯಕ್, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ರವಿ ಕೆಕೆ ರಮೇಶ್. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಭಾಕರ್. ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ್  ಮುಖಂಡರಾದ ಡಾಕ್ಟರ್ ವೆಂಕಟರಾಮಯ್ಯ. ದೊಣ ತಿಮ್ಮಣ್ಣ. ಕೃಷ್ಣ ನಾಯಕ್ ಹನುಮಂತರಾಯಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!