ತುಮಕೂರು: ಕಳೆದ ದಶಕಗಳಿಂದ ಅಂಗಾಂಗ ದಾನಗಳಲ್ಲಿ ತುಂಬಾ ಮುಂದುವರೆಯುತ್ತಿದ್ದು, ಭಾರತವೂ ವಿಶೇಷ ಪ್ರಚಾರಗಳನ್ನು ಹಮ್ಮಿಕೊಳ್ಳುತ್ತಿದೆ. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಅಂಗಾಂಗ ದಾನ ಮಾಹಿತಿಯ ಬಗ್ಗೆ ತುಂಬಾ ಕೆಲಸ ಮಾಡುತ್ತೀವೆ. ವೈಜ್ಞಾನಿಕವಾಗಿ ಮುಂದುವರೆದಿರುವುದು ನೇತ್ರದಾನಕ್ಕಿಂತ ದೇಹದಾನವು ಅತ್ಯಂತ ತುಂಬಾ ಅತ್ಯಮೂಲ್ಯ ವಾಗಿರುತ್ತದೆ. ನಮ್ಮ ಶ್ರೀದೇವಿ ಸಂಸ್ಥೆಯು ಇಂತಹ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದೆ. ನೇತ್ರದಾನಕ್ಕೆ ತಮ್ಮ ಹೆಸರಗಳನ್ನು ನೊಂದಾಯಿಸಿ ಸಂಬಂಧಿಕರಿಗೆ ಮಾಹಿತಿ ನೀಡಿ ನೇತ್ರದಾನಕ್ಕೆ ಸಮಯ ಅತ್ಯಮೂಲ್ಯವಾಗಿದೆ, ದೇಹದಾನ ಪಡೆದುಕೊಳ್ಳವುದರಲ್ಲಿ ನಮ್ಮ ಸಂಸ್ಥೆಯೂ ಮಹತ್ವವಾಗಿದೆ. ಪ್ರಪಂಚದಲ್ಲಿ ನೇತ್ರದಾನ ಮಾಡುವುದರಲ್ಲಿ ನಮ್ಮ ಭಾರತ ಎರಡನೇ ರಾಷ್ಟ್ರವಾಗಿದೆ. ನಮ್ಮ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯಲ್ಲಿ ನೇತ್ರದಾನ ಬ್ಯಾಂಕ್ ಸ್ಥಾಪನೆಯಾಗಿದೆ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‌ರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ನೇತ್ರದಾನ ಮತ್ತು ದೇಹದಾನಗಳ ಜಾಗೃತಿಯ ಅರಿವು ಕಾರ್ಯಕ್ರಮವನ್ನು ಶ್ರೀದೇವಿ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ ಸೆ.೧೫ ರಂದು ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರಿನ ಐ.ಎಂ.ಎ. ಅಧ್ಯಕ್ಷರಾದ ಡಾ.ಎಂ.ಸಂಜಯ್‌ರವರು ಮಾತನಾಡುತ್ತಾ ನೇತ್ರದಾನ ಎಂಬುದು ಅತ್ಯಮೂಲ್ಯವಾದದ್ದು, ನೇತ್ರದಾನ ಬಗ್ಗೆ ಜನಸಾಮಾನ್ಯರಲ್ಲಿ ಅರಿವುವನ್ನು ಮೂಡಿಸಬೇಕು. ವೈದ್ಯಕೀಯ ವಿದ್ಯಾರ್ಥಿಗಳು ನೇತ್ರದಾನ ಜಾಗೃತಿಯ ಬಗ್ಗೆ ಸಭೆ ಸಮಾರಂಭಗಳಲ್ಲಿ ತಿಳಿಸಬಹುದಾಗಿದೆ. ಈ ನೇತ್ರದಾನದಲ್ಲಿ ಯುವ ಜನಾಂಗದ ಜವಾಬ್ದಾರಿಯೂ ತುಂಬಾ ಅತ್ಯವಶ್ಯಕವಾಗಿದೆ. ಅಂಧರ ಬಾಳಿನಲ್ಲಿ ದೃಷ್ಟಿಪಡೆದ ವ್ಯಕ್ತಿಗಳು ಬೆಳಕಾಗಬಹುದು ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ವೈದ್ಯಕೀಯ ನಿರ್ದೇಶಕರಾದ ಡಾ. ರಮಣ್ ಎಂ ಹುಲಿನಾಯ್ಕರ್‌ರವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಲಕ್ಷಾಂತರ ಜನರು ಕಣ್ಣುಗಳಿಲ್ಲದೇ ಹಲವಾರು ಕಾರಣಗಳಿಂದ ದೃಷ್ಟಿಹೀನರಾಗುತ್ತಿದ್ದಾರೆ. ಮರಣಾನಂತರ ನೇತ್ರಗಳನ್ನು ದಾನ ಮಾಡುವುದರಿಂದ ಅಂಧರಿಬ್ಬರಿಗೆ ಬೆಳಕು ನೀಡಲು ಸಾಧ್ಯ ಎಂದರು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೇ ದೃಷ್ಟಿದೋಷಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ನೇತ್ರ ತಜ್ಞರಲ್ಲಿ ಸರಿಪಡಿಸಿ ಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಮಂಜುನಾಥ್‌ರವರು ಮಾತನಾಡುತ್ತಾ ಸರ್ಕಾರಿ ಆಸ್ಪತ್ರೆ ಹಾಗೂ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯಲ್ಲಿಯೂ ನೇತ್ರ ಬ್ಯಾಂಕ್‌ನ್ನು ಸ್ಥಾಪಿಸಲಾಗಿದೆ. ಎಲ್ಲರೂ ನೇತ್ರದಾನದ ಮಹತ್ವವನ್ನು ತಿಳಿಸಬೇಕು. ಸರ್ಕಾರಿ ಆಸ್ಪತ್ರೆ ಮತ್ತು ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯಲ್ಲಿ ನೇತ್ರ ಬ್ಯಾಂಕ್‌ನ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಣ್ಣುಗಳ ದಾನ ಮಾಡಲು ಉತ್ತಮ ಡಿ.ಎನ್.ಬಿ. ತರಬೇತಿ ಮಾಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ.ಚಿನ್ಮಯಿ ಜಿ ತ್ರಿಶೂಲಮೂರ್ತಿರವರು ಮಾತನಾಡುತ್ತಾ ನೇತ್ರದಾನದ ಮೂಲಕ ಬೆಳಕು ನೀಡಲು ಸಾಧ್ಯವಾಗುತ್ತಿದೆ. ಮರಣದ ನಂತರ ಸುಮಾರು ೬ ಗಂಟೆಯೊಳಗೆ ಕಣ್ಣುಗಳನ್ನು ದಾನ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಡಿ.ಕೆ.ಮಹಾಬಲರಾಜುರವರು ಮಾತನಾಡುತ್ತಾ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯಲ್ಲಿ ನೇತ್ರದಾನ ಮತ್ತು ದೇಹದಾನ ಕಾರ್ಯವೈಖರಿ ನೀಡುತ್ತಿರುವುದಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಐ. ಪೌಂಢೇಶನ್ ಮುಖ್ಯಸ್ಥರಾದ ಎನ್.ಎನ್.ಶ್ರೀಧರ್‌ರವರು ಮಾತನಾಡುತ್ತಾ ನಮ್ಮ ದೇಶದಲ್ಲಿ ಸುಮಾರು ೩೦ ಲಕ್ಷ ಪುರುಷರು ಮತ್ತು ಮಹಿಳೆಯರು, ಮಕ್ಕಳು ಮೃತ ವ್ಯಕ್ತಿಗಳು ದಾನ ಮಾಡಿದ ನೇತ್ರಗಳಿಂದ ದೃಷ್ಟಿ ಪಡೆಯಲು ಕಾಯುತ್ತಿದ್ದಾರೆ. ವ್ಯಕ್ತಿಯೂ ಮರಣದ ನಂತರ ಸುಮಾರು ೬ ಗಂಟೆಯೊಳಗೆ ನೇತ್ರಗಳನ್ನು ಸಂಗ್ರಹಿಸ ಬೇಕಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಿಗೆ ಸನ್ಮಾನಿಸಲಾಗಿತ್ತು. ಹಾಗೂ ವೈದ್ಯ ವಿದ್ಯಾರ್ಥಿಗಳಿಂದ ನೇತ್ರದಾನ ಮತ್ತು ದೇಹದಾನದ ಬಗ್ಗೆ ಕಿರುನಾಟಕ ಪ್ರದರ್ಶನ ನೀಡಲಾಗಿತ್ತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶ್ರೀದೇವಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಕಲ್ಲೇಶ್, ಡಾ. ಲಾವಣ್ಯ, ಡಾ.ರವಿಪ್ರಕಾಶ್, ಡಾ.ಪ್ರಸನ್ನಶಂಕರ್‌ಬಾಬು, ಡಾ.ಪ್ರವೀಣ್, ಶ್ರೀದೇವಿ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸ್ತೂತಿ ವಿಭಾಗ ಮುಖ್ಯಸ್ಥರು ಹಾಗೂ ಉಪಪ್ರಾಂಶುಪಾಲರಾದ ಡಾ.ರೇಖಾಗುರುಮೂರ್ತಿ, ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅನುಪಮ ಮುಂತಾದ ವರು ಉಪಸ್ಥಿತರಿದ್ದರು.