ವಿದ್ಯಾಭ್ಯಾಸದಲ್ಲಿ ಸಹನೆ ತಾಳ್ಮೆ ಅಗತ್ಯ

ತುಮಕೂರು: ದೇಶದ ಭವಿಷ್ಯ ಯುವಕರ ಕೈಯಲ್ಲಿದೆ ಭಾರತ ದೇಶದ ಶೇ.75 ರಷ್ಟು ಜನ ಯುವಕರು ಅವರ ವಯೋಮಿತಿ ೨೦ ರಿಂದ ೩೫ ವರ್ಷ ಇಂದಿನ ಯುವಕರಿಗೆ ಸರಿಯಾದ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯನ್ನು ಒದಗಿಸದೇ ಇದಲ್ಲಿ ಇನ್ನೂ ಐವತ್ತು ವರ್ಷದಲ್ಲಿ ಭಾರತವು ಆಹಾರ ಅಭಾವ ಹಾಗೂ ಆರ್ಥಿಕ ಅಭದ್ರತೆಯನ್ನು ಎದುರಿಸಬೇಕಾಗುತ್ತದೆ. ಹಾಗೂ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ವ್ಯವಹಾರ ಹಾಗೂ ವ್ಯಾಪಾರವನ್ನು ಮಾಡುವುದು ಕಲಿಯಬೇಕು ಯಶಸ್ಸು ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ, ಯಾವುದೇ ಉದ್ಯಮವು ಸುಲಭವಾದ ಕೆಲಸವಲ್ಲ ಪರಿಶ್ರಮ, ಸಹನೆ, ತಾಳ್ಮೆ ಹಾಗೂ ಮನೋಭಿಲಾಷೆ ಇದ್ದಲ್ಲಿ ಯಾವ ವ್ಯಕ್ತಿಯು ಸಹ ಉದ್ಯಮಶೀಲರಾಗಬಹುದು. ನಾವು ಹಳ್ಳಿಯಿಂದ ಬಂದಿದ್ದೇವೆ ನಮ್ಮಲ್ಲಿ ಬಂಡವಾಳವಿಲ್ಲದೆ ನಮಗೆ ಇಂಗ್ಲೀಷ್ ಮಾತನಾಡಲು ಬರುವುದಿಲ್ಲ ಇಂತಹ ಕೀಳರಿಮೆಯನ್ನು ಬದಿಗಿಟ್ಟು ಎಲ್ಲಾ ವಿದ್ಯಾರ್ಥಿಗಳು ಸಹ ಉದ್ಯಮಶೀಲರಾಗುವಂತೆ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಎಂದು ರಾಜ್ಯ ರೆಡ್‌ಕ್ರಾಸ್ ಸಭಾಪತಿಗಳಾದ ಎಸ್.ನಾಗಣ್ಣರವರು ತಿಳಿಸಿದರು.


ನಗರದ ವರಾನ ಗ್ಲೋಬಲ್ ಟ್ರಸ್ಟ್‌ನ ಅಂಗಸಂಸ್ಥೆಯಾದ ಅನನ್ಯ ಇನ್ಟ್ಸಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‌ನಲ್ಲಿ ಕಾಲೇಜಿನಲ್ಲಿ ಸೆ.೧ ರಂದು ನೂತನ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಎಸ್.ನಾಗಣ್ಣರವರು ವಿದ್ಯಾರ್ಥಿಗಳನ್ನು ಕುರಿತು ಹಾಗೂ ಯಾವುದೇ ಉದ್ಯಮವನ್ನು ಪ್ರಾರಂಭಿಸುವುದು ಹಾಗೂ ನಡೆಸುವುದು ಹೂವಿನ ಹಾಸಿಗೆಯಂತೆ ಅಲ್ಲ ಉದ್ಯಮದಲ್ಲಿ ಕಷ್ಟ-ನಷ್ಟ ತೊಂದರೆ ತಾಪತ್ರಯ ಸರ್ವೇಸಾಮಾನ್ಯ ಅದನ್ನು ಎದುರಿಸಿ ನಿಂತರೆ ಮಾತ್ರ ವಿಜಯಶಾಲಿರಾಗಿರಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು. ನಾನು ಸಹ ನನ್ನ ವಿದ್ಯಾಭ್ಯಾಸವನ್ನು ಮುಗಿಸಿದ ತಕ್ಷಣ ಸಿದ್ದಗಂಗಾ ಶ್ರೀಗಳು ನನ್ನ ಕೈ ಹಿಡಿದರು ಅವರು ನನಗೆ ಮಾರ್ಗದರ್ಶಕರು ಅವರೇ ನನಗೆ ದೇವರ ಸಮಾನ ನಾನು ದೇವರನ್ನು ಕಂಡಿಲ್ಲ ನನಗೆ ಅವರೇ ಸಾಕ್ಷಾತ್ ದೇವರು ಎಂದು ತಿಳಿಸಿದರು. ಅನನ್ಯ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮವಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯಾಭಿವೃದ್ಧಿಯನ್ನು ಸಹ ಮಾಡುತ್ತಿದೆ. ಕಾಲೇಜಿನಿಂದ ಹೊರ ಬಂದ ವಿದ್ಯಾರ್ಥಿಗಳು ಕೆಲಸವನ್ನು ಅರಸುವುದು ಬಹಳ ಸುಲಭ ಎಂದು ಅನನ್ಯ ಸಂಸ್ಥೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್‌ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಉದ್ಯಮಶೀಲರಾಗಲು ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ ಹಲವಾರು ಯೋಜನೆಗಳಡಿ ಆಕಾಂಕ್ಷಿಗಳಿಗೆ ಸರ್ಕಾರ ಸಬ್ಸಿಡಿ ಸಾಲ ಕೊಡುತ್ತದೆ. ಅಲ್ಲದೆ ಆಕಾಂಕ್ಷಿಗಳಿಗೆ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲ ಜೀವನೋಪಾಯ ಇಲಾಖೆಯಿಂದ ಟ್ರೈನಿಂಗ್ ಹಾಗೂ ಮಾರ್ಗದರ್ಶನ ಸಹ ನೀಡಲಾಗುವುದು. ಈಗಾಗಲೇ ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಹಲವಾರು ಉದ್ಯಮಶೀಲರು ಉದ್ಯಮಪತಿಗಳಾಗಿದ್ದಾರೆ.


ತಾವುಗಳು ಸಹ ಇದೇ ರೀತಿ ಸರ್ಕಾರದ ಸವಲತ್ತುಗಳನ್ನು ಪ್ರಯೋಜನ ಪಡೆದುಕೊಂಡು ತಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಸಿ.ಎ.ವಿಶ್ವನಾಥ್‌ರವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು ನಾವು ಬೆಳೆಯುವುದು ದುಡಿಯುವುದು ಅಷ್ಟೇ ಅಲ್ಲದೆ ನಮ್ಮ ಕಡೆಯಿಂದ ಸಮಾಜಕ್ಕೆ ಕೊಡುಗೆ ಏನು ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕು ಕಷ್ಟಪಟ್ಟು ಉಪವಾಸವಿದ್ದು ನಮ್ಮನ್ನು ಓದಿಸಿ ಬೆಳೆಸುವ ತಂದೆ-ತಾಯಿಯರನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು ನಾವು ಸಮಾಜಕ್ಕೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಆರ್.ಉಮೇಶ್‌ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಪತಿಯಾಗ ಬಯಸುವ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಮಾರ್ಗಸೂಚಿಯನ್ನು ಕೊಡಲಾಗುವುದು ನಮ್ಮ ಕಾಲೇಜಿನಲ್ಲಿ ಮಾರ್ಗಸೂಚಿಗಳನ್ನು ಉಪಯೋಗಿಸಿಕೊಂಡು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿ ಹಾಗೂ ಪತ್ರ ಬರಹಗಾರರಾದ ಹೆಚ್.ಎನ್.ಚಂದ್ರಶೇಖರ್ ಮತ್ತು ಅನನ್ಯ ಸಂಸ್ಥೆಯ ಟ್ರಸ್ಟಿಯಾದ ಡಾ.ಹೆಚ್.ಹರೀಶ್, ಪ್ರಾಂಶುಪಾಲರಾದ ಡಾ. ಎಂ.ವಿಶ್ವಾಸ್ ಹಾಗೂ ಸಿ.ಸಿ.ಪಾವಟೆ, ದೇವಕಿಪ್ರಸಾದ್, ಅನಂತ ಲಕ್ಷ್ಮಿ, ಯತೀಶ್, ಮಂಜುನಾಥ್, ರಾಘವೇಂದ್ರ, ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!