ತುಮಕೂರು: ಶ್ರೀದುಗಾಂಬಿಕಾದೇವಿಯ ಈ ಸ್ಥಳ ನೂರಾರು ವರ್ಷಗಳಿಂದ ಇಲ್ಲಿನ ದೇವತೆ ಶ್ರೀ ಉಚ್ಚಂಗಮ್ಮನ ತುಳಜಾಭವಾನಿ ಆವಾಸ ಸ್ಥಾನ. ಆಕೆಯ ಸುದೀರ್ಘ ಯೋಗ ನಿದ್ರೆಯಲ್ಲಿ ನೆಲೆಸಿದ್ದಳು. ಭಕ್ತರು ಪ್ರಾರ್ಥನೆಗೊಲಿದು, ಶ್ರೀದುರ್ಗಾಂಬಿಕಾ ದೇವಿಯಾಗಿ ಇದೀಗ ನಮ್ಮಲ್ಲಿ ಪ್ರತಿಷ್ಠಾಪನೆಗೊಂಡಿರುವಳು. ಗೌರಿಯ ರೀತಿಯಲ್ಲಿ ವಿಶೇಷ ಪೂಜೆ ಆರಾಧನೆ ಮಾಡಲಾಗಿತ್ತು. ಎಂದು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್. ಹುಲಿನಾಯ್ಕರ್ ರವರು ತಿಳಿಸಿದರು.
ತುಮಕೂರಿನ ಶಿರಾ ರಸ್ತೆಯಲ್ಲಿರುವ ಶ್ರೀದೇವಿ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿರುವ ಶ್ರೀ ಆದಿಶಕ್ತಿ ಶ್ರೀ ದುರ್ಗಾಂಬಿಕೆ ದೇವಸ್ಥಾನದಲ್ಲಿ ಸೆ.9 ರಂದು ಮುಂಜಾನೆಯಿಂದಲೇ ಶಿರಾರಸ್ತೆಯ ಶ್ರೀದುರ್ಗಾಂಬಿಕಾ ದೇವಾಲಯದಲ್ಲಿ ಗೌರಿಹಬ್ಬದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದ್ದು, ದೇವಾಲಯಗಳಿಗೆ ತೆರಳಿದ ಮಹಿಳೆಯರು, ಯುವತಿಯರು ಪರಸ್ಪರ ಹಬ್ಬದ ಶುಭಾಷಯ ವಿನಿಯಮ ಮಾಡಿಕೊಂಡ ದೃಶ್ಯಗಳು ಸಾಮಾನ್ಯವಾಗಿದ್ದವು.
ಶ್ರೀದುರ್ಗಾಂಬಿಕಾ ಟ್ರಸ್ಟ್‌ನ ದೇವಿಯ ಮಾನ್ಯೇಜಿಂಗ್ ಟ್ರಸ್ಟಿಯಾದ ಶಾಂತಾದುರ್ಗಾದೇವಿರವರು ಮಾತನಾಡುತ್ತಾ ತುಮಕೂರಿನ ಶಿರಾಗೇಟಿನ ಶ್ರೀದೇವಿ ಸಂಸ್ಥೆಯ ಆವರಣದಲ್ಲಿರುವ ಶ್ರೀದುರ್ಗಾಂಬಿಕಾ ದೇವಸ್ಥಾನವು ಅನೇಕ ವರ್ಷಗಳಿಂದ ವಾಸವಾಗಿದೆ. ಹಾಗೂ ಶ್ರೀದುರ್ಗಾಂಬಿಕೆ ಜಗತ್ತಿನಲ್ಲಿ ಕೊರೋನಾ ಮಹಾಮಾರಿಯಿಂದ ನಮ್ಮೆಲ್ಲರನ್ನು ರಕ್ಷಿಸುತ್ತಾಳೆ, ಭಕ್ತಿಗೆ ಒಲಿಯುತ್ತಾಳೆ, ಇಂತಹ ನಂಬಿಕೆ ಮಾನವ ಕುಲವನ್ನು ಇಂದಿಗೂ ಮುನ್ನಡೆಸುತ್ತಿದೆ. ಕೊರೋನಾದಿಂದ ಎಲ್ಲರೂ ಏಕಮನದಿಂದ ಶ್ರೀದೇವಿಯನ್ನು ಪ್ರಾರ್ಥಿಸಿ ಈ ಸಂಕಷ್ಟದಿಂದ ಕಾಪಾಡಲಿ ಎಂದು ತಿಳಿಸಿದರು.
ಗೌರಿಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತ್ತು. ಶ್ರೀ ಆದಿಶಕ್ತಿ ಶ್ರೀ ದುರ್ಗಾಂಬಿಕೆ ದೇವಸ್ಥಾನದಲ್ಲಿ ಸಾರ್ವಜನಿಕರು ತೆರಳಿ ಸುಮಂಗಲಿಯರು, ಮಕ್ಕಳು, ಯುವತಿಯರು ಗೌರಿಯ ರೀತಿಯಲ್ಲಿ ಅಲಂಕಾರವನ್ನು ಮಾಡಿದ ಶ್ರೀದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿಬಾಗಿನ ಅರ್ಪಿಸಿ ಆಶೀರ್ವಾದವನ್ನು ಪಡೆದರು.
ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ ಹುಲಿನಾಯ್ಕರ್‌ರವರು ಮಾತನಾಡುತ್ತಾ ಶ್ರೀದುರ್ಗಾಂಬಿಕಾ ದೇವಿಗೆ ಪ್ರತಿದಿನ ಪೂಜೆ, ಅಭಿಷೇಕ, ಪ್ರತಿನಿತ್ಯ ವಿಶೇಷ ಅಲಂಕಾರ ಮತ್ತು ಮಹಾಮಂಗಳಾರತಿಗಳನ್ನು ನಡೆಯುತ್ತವೆ ಹಾಗೂ ಶ್ರೀ ದುರ್ಗಾಂಬಿಕಾ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.