ಆದರ್ಶ ಶಿಕ್ಷಕ ರಾಷ್ಟ್ರ ರಕ್ಷಕ

ತಿರುತ್ತಣಿಯಲ್ಲಿ ಸರ್ವಪಲ್ಲಿವಂಶದಲ್ಲಿ
ವೀರಸ್ವಾಮಿ ಸೀತಮ್ಮ ದಂಪತಿಗಳ

ವರಪುತ್ರನಾಗಿ ಜನಿಸಿದ ರಾಧಾಕೃಷ್ಣ

ನೀನಾದೆ ಆದರ್ಶ ಶಿಕ್ಷಕ ರಾಷ್ಟ್ರ ರಕ್ಷಕ

ಬಾಲ್ಯದಿಂದಲೂ ಚತುರಮತಿ ನೀನು
ಓದುವಾಗಲೇ ಎಲ್ಲರ ಗಮನ ಸೆಳೆದೆ
ತಂದೆ ಪುರೋಹಿತನಾಗಲೆಂದರೂ
ದೇಶದ ಹಿತವಕಾಯಲು ಶಿಕ್ಷಕನಾದೆ

ಉತ್ತಮ ಅಂಕಗಳ ಗಳಿಸಿ ವಿದ್ಯಾರ್ಥಿವೇತನದಿಂದಲೆ ವ್ಯಾಸಂಗ ನಿರತನಾಗಿ ತತ್ವಶಾಸ್ತ್ರದತ್ತವಾಲಿದೆ ಪದವಿ ಸ್ನಾತಕೋತ್ತರ ಪದವಿ ಪಡೆದು
ಪ್ರತಿಭೆತೋರಿ ಜಗತ್ತಿಗೆ ವರದಾನವಾದೆ

ಆಸಕ್ತಿಯಿಂದ ಹಿಂದು ಧರ್ಮ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನದ ಆಳವಾದ ಅಧ್ಯಯನ ಮಾಡಿದೆ
ಹಂತ ಹಂತವಾಗಿ ಬೆಳೆದು ಬೆಳಕಾಗಿ ಹರಿತವಾದ ತತ್ವ ಶಾಸ್ತ್ರದ ಲೇಖನಗಳ ಬರೆದು ವಿಶ್ವದ ಗಮನ ಸೆಳೆದೆ

ಅಪಾರವಾದ ಪಾಂಡಿತ್ಯ ಸಹೃದಯತೆ ಸಹೋದರತೆ ಮೂಡಿಸಿ ವಿಶಾಲದಲ್ಲಿ
ವಿಸ್ತಾರದಲ್ಲಿ ಬೆಳೆದು ದೇಶ ವಿದೇಶಗಳ
ವಿಶ್ವವಿದ್ಯಾಲಯಗಳ ಉಪಕುಲಪತಿ ಪದವಿಯನ್ನು ಅಲಂಕರಿಸಿ ಶಿಕ್ಷಣ ಸುಧಾರಕನಾದೆ ಸಾಧಕನಾದೆ

ಮೈಸೂರು ಮಹಾರಾಜ ಕಾಲೇಜಿನಲ್ಲಿ
ಸಲ್ಲಿಸಿದ ಅಪ್ರತಿಮ ನಿಷ್ಕಲ್ಮಶ ಸೇವೆ
ವಿದ್ಯಾರ್ಥಿಗಳ ಸಹ ಅಧ್ಯಾಪಕರ ಜನ ಸಮುದಾಯದ ಪ್ರೀತಿ ವಿಶ್ವಾಸಗಳಿಸಿದೆ
ರಾಷ್ಟ್ರದ ಸೇವೆಗಾಗಿ ನಿನ್ನನ್ನು ಬಿಳ್ಕೊಡುವ ಸಂದರ್ಭವನ್ನು ಇತಿಹಾಸ ದಲ್ಲಿ ಅವಿಸ್ಮರಣೀಯವಾಗಿಸಿದೆ

ಕಲ್ಲು ಹೃದಯದವರನ್ನು ಕರಗಿಸುವ ಮೃದು ಹಿತ ಮಿತ ಭಾಷಿ ನೀನು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿ ದೇಶಭಕ್ತಿಯನ್ನು ತೋರಿದೆ ದೇಶದ ಮೊದಲ ಉಪರಾಷ್ಟ್ರಪತಿಯಾಗಿ ಪಾರ್ಲಿಮೆಂಟ್ ವಾತಾವರಣವನ್ನು ಸುಸಂಸ್ಕೃತವಾಗಿಸಿದೆ

ಸೂಕ್ಷ್ಮಮತಿಯಾದ ನೀನು ರಾಷ್ಟ್ರಪತಿ ಯಾಗಿ ದೇಶ ವಿದೇಶಗಳ ಬಾಂಧವ್ಯ ಬೆಸೆದೆ ಆಂತರಿಕ ಕಲಹಗಳಿಗು ಇತಿಶ್ರೀ ಹಾಡಿದೆ ನಿನ್ನ ನಗುಮನದ ಸುಮನದ
ನಿಸ್ವಾರ್ಥ ದೇಶ ಸೇವೆಯಿಂದ ತತ್ವಶಾಸ್ತ್ರ ಪರಿಜ್ಞಾನದಿಂದ ಹಲವಾರು ದೇಶಗಳ ಗೌರವ ಪ್ರಶಸ್ತಿಗಳಿಗೆ ಪಾತ್ರನಾದೆ ಭಾರತ ರತ್ನವಾದೆ

ನಿಮ್ಮ ಪವಿತ್ರ ಜನುಮ ದಿನವನ್ನು ನಿಮ್ಮ ಸಹೃದಯಿ ಅಭಿಲಾಷೆಯಂತೆ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ
ನಿಮ್ಮ ಸಾಧಾನೆಯ ಪ್ರೇರಣೆಯಿಂದ
ನಿಮ್ಮ ದಾರಿಯಲ್ಲಿ ಸಾಗುವೆವು ಶ್ರೇಷ್ಠ ಶಿಕ್ಷಕರೇ ರಾಷ್ಟ್ರ ರಕ್ಷಕರೇ ನಿಮಗೆ ವಂದನೆ ಕೋಟಿ ವಂದನೆ. ||

*ವೆನ್ನಲ ಕೃಷ್ಣ*
ತುಮಕೂರು.

Leave a Reply

Your email address will not be published. Required fields are marked *

error: Content is protected !!