ಮೇಷ: ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ, ಕಚೇರಿಯಲ್ಲಿ ವ್ಯವಹರಿಸುವಾಗ ಜಾಗ್ರತೆವಹಿಸಿ, ಸಹೋದ್ಯೋಗಿಗಳ ಜೊತೆ ಹಾಗೂ ಗ್ರಾಹಕರೊಡನೆ ವಾಗ್ವಾದ ಬೇಡ, ಉದ್ಯೋಗ ಬದಲಾವಣೆ ಮತ್ತು ಮನೆ ಬದಲಾವಣೆ ಸದ್ಯಕ್ಕೆ ಬೇಡ.
ವೃಷಭ: ಸಾಲ ನೀಡುವಾಗ ಸ್ವಲ್ಪ ಜಾಗೃತಿವಹಿಸಿ, ಅವಶ್ಯಕತೆ ಇದ್ದರೆ ಮಾರುಕಟ್ಟೆಗೆ ಹೋಗಿ, ವೇಗದ ವಾಹನ ಚಾಲನೆಯಿಂದ ಪೆಟ್ಟು ಸಂಭವ, ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿಗಳು ಇಂದು ನಿಮಗೆ ಸಿಗುತ್ತವೆ, ವ್ಯಾಪಾರ ವಹಿವಾಟಿನಲ್ಲಿ ಮಿಶ್ರಫಲ.
ಮಿಥುನ: ಸಾಲ ನೀಡುವಾಗ ಸ್ವಲ್ಪ ಜಾಗೃತಿವಹಿಸಿ, ಅವಶ್ಯಕತೆ ಇದ್ದರೆ ಮಾರುಕಟ್ಟೆಗೆ ಹೋಗಿ, ವೇಗದ ವಾಹನ ಚಾಲನೆಯಿಂದ ಪೆಟ್ಟು ಸಂಭವ, ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿಗಳು ಇಂದು ನಿಮಗೆ ಸಿಗುತ್ತವೆ, ವ್ಯಾಪಾರ ವಹಿವಾಟಿನಲ್ಲಿ ಮಿಶ್ರಫಲ.
ಕಟಕ: ಅನೇಕ ಹಳೆಯ ಸಮಸ್ಯೆಗಳು ಇತ್ಯರ್ಥವಾಗುತ್ತವೆ. ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಆರ್ಥಿಕ ಶಕ್ತಿ ಹೆಚ್ಚಾಗುತ್ತದೆ. ಉದ್ಯಮಿಗಳ ವ್ಯಾಪ್ತಿ ವಿಸ್ತರಿಸಲಿದೆ. ನಿಮ್ಮ ವೃತ್ತಿ ಜೀವನದ ಯಾವುದೇ ಪ್ರಮುಖ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.
ಸಿಂಹ: ನಿಮ್ಮ ಗುಣಗಳು ಮತ್ತು ಪ್ರತಿಭೆಯಿಂದ ಅದ್ಭುತವನ್ನು ಸೃಷ್ಟಿಸುತ್ತೀರಿ. ನಿಮ್ಮ ಕೌಶಲ್ಯದಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ನಿಮ್ಮ ಪ್ರೋತ್ಸಾಹದಿಂದ ಕೆಲವರು ಪ್ರಯೋಜನ ಪಡೆಯುತ್ತಾರೆ.
ಕನ್ಯಾ: ಸಣ್ಣ ಉದ್ಯಮಿಗಳು ಇಂದು ಉತ್ತಮ ಲಾಭ ಗಳಿಸಬಹುದು. ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ. ಉದ್ಯೋಗಾಕಾಂಕ್ಷಿಗಳು ತಮ್ಮ ಮೇಲಧಿಕಾರಿಗಳ ಸಂಪೂರ್ಣ ಬೆಂಬಲ ಪಡೆಯುತ್ತಾರೆ. ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ.
ತುಲಾ: ಖಾಸಗಿ ನೌಕರರು ಅಥವಾ ಸರಕಾರಿ ನೌಕರರರಿಗೆ ಬದಲಾವಣೆ ಅಥವಾ ವರ್ಗಾವಣೆ ಸಾಧ್ಯತೆ .ಮಹಿಳಾ ರಾಜಕಾರಣಿಗಳಿಗೆ ಅದೃಷ್ಟದ ದಿನ. ಕೃಷಿಕರಿಗೆ ಹೆಚ್ಚಿನ ಆದಾಯ ಸಿಗಲಿದೆ. ಬಂಧು ಅಥವಾ ಸ್ನೇಹಿತರ ಆಗಮನದ ನಿರೀಕ್ಷೆ .ಧಾರ್ಮಿಕ ಕ್ಷೇತ್ರಗಳ ದರ್ಶನ.
ವೃಶ್ಚಿಕ: ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುವವರಿಗೆ ಇದು ಶುಭ ದಿನವಾಗಿದೆ. ಹೊಸ ಕಚೇರಿ ವಾತಾವರಣ ಕ್ರಮೇಣವಾಗಿ ಹೊಂದಿಕೊಳ್ಳುತ್ತಿದ್ದೀರಿ. ಸಹೋದ್ಯೋಗಿಗಳಿಂದ ಕೆಲಸಗಳನ್ನು ಕಲಿತುಕೊಳ್ಳಲಿದ್ದೀರಿ. ಜೀವನ ಸಂಗಾತಿಯೊಂದಿಗೆ ಕಲಹ ಏರ್ಪಡಬಹುದು.
ಧನುಸ್ಸು: ಭಾಷಾ ಸಂಶೋಧಕರಿಗೆ ಉತ್ತಮ ಸೌಕರ್ಯ ಮತ್ತು ಭಾಷಾ ಸರಕುಗಳು ದೊರೆತು ಸಂಶೋಧನಾ ಕೆಲಸಕ್ಕೆ ಅನುಕೂಲವಾಗುತ್ತದೆ. ಕೆಲವರೊಂದಿಗೆ ವ್ಯವಹಾರದಲ್ಲಿ ಅತಿಯಾದ ಸ್ನೇಹ ಸಂಬಂಧ ವೃದ್ಧಿಸುವ ಸಾಧ್ಯತೆಗಳಿವೆ.
ಮಕರ: ಯಾವುದೇ ರೀತಿಯ ವಿವಾದಗಳಿಂದ ದೂರವಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವೃತ್ತಿಪರ ಸಮಸ್ಯೆಗಳು ದೂರವಾಗಲಿದೆ. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಸಂಬಂಧಿಕರ ಆಗಮನವಾಗಲಿದೆ. ಮನೆಯ ಹಿರಿಯರು ಅನಾರೋಗ್ಯಕ್ಕೆ ತುತ್ತಾಗಲಿದ್ದಾರೆ.
ಕುಂಭ: ಸ್ನೇಹಿತರೊಂದಿಗೆ ಪ್ರಯಾಣ ಸಾಧ್ಯತೆ. ಕೆಲಸ ಕಾರ್ಯದಲ್ಲಿ ಇತರರು ಹಸ್ತಕ್ಷೇಪ ಮಾಡಲಿದ್ದಾರೆ. ಹಿಡಿದ ಕೆಲಸ ಕೈಗೂಡಲಿದೆ. ವ್ಯಾಪಾರದಲ್ಲಿ ತಂದೆಯ ಸಹಕಾರ ಸಿಗಲಿದೆ. ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ. ಆಶಾವಾದಿಯಾಗಿ ಇರುವಿರಿ.
ಮೀನ: ಸಹೋದ್ಯೋಗಿಗಳೊಂದಿಗೆ ವಾಗ್ವಾದದಿಂದ ತೊಂದರೆ. ಒಂದು ಸಣ್ಣ ತಪ್ಪಿನಿಂದಾಗಿ ಮುಖ್ಯವಾದ ಅವಕಾಶವೊಂದು ನಿಮ್ಮ ಕೈತಪ್ಪಲಿದೆ. ಮಾನಸಿಕ ಒತ್ತಡಗಳಿಗೆ ಸ್ನೇಹಿತರು ಹೆಗಲು ನೀಡಲಿದ್ದಾರೆ. ಆರೋಗ್ಯದ ಕಡೆ ಜಾಗೃತಿ ಇರಲಿ.