ದಿನ ಭವಿಷ್ಯ ದಿನಾಂಕ 04/09/2021

ಮೇಷ: ಇವರಿಗೆ ಇಂದು ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟದಲ್ಲಿ ಗಣನೀಯ ಏರಿಕೆ.

ವೃಷಭ: ನಿಮ್ಮ ವ್ಯಾಪಾರ ಬೇರೆ ನಗರದಲ್ಲಿ ವಿಸ್ತಾರದ ಚಿಂತನೆ, ಪ್ರೇಮಿಗಳು ಮರಳಿ ಒಂದಾಗುವರು, ವೀಸಾ ಕೈಸೇರಲಿದೆ, ನಿವೇಶನ ಖರೀದಿ ಸುವ ಭಾಗ್ಯ, ಶಿಕ್ಷಕರಿಗೆ ಪ್ರಮೋಷನ್ ಭಾಗ್ಯ, ವೈದ್ಯಕೀಯ ಕ್ಷೇತ್ರದಲ್ಲಿ ಇರುವರಿಗೆ ಮಾನಸಿಕ ಖಿನ್ನತೆ ಮಾಯವಾಗುವುದು.

ಮಿಥುನ: ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಬಹುದು, ಎಚ್ಚರಿಕೆಯಿಂದಿರಿ. ಅನವಶ್ಯಕ ಖರ್ಚು, ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕು. ಇಲ್ಲದೇ ಇದ್ದಲ್ಲಿಮಾಡಿದ ಸಾಲ ದುಪ್ಪಟ್ಟಾಗಿ ಬೆಳೆಯುವ ಸಾಧ್ಯತೆ ಇದೆ. ಅದನ್ನು ತೀರಿಸುವಲ್ಲಿಸಾಕಷ್ಟು ಶ್ರಮ ಪಡಬೇಕಾಗುವುದು.

ಕಟಕ: ಇಂದು ನಿಮ್ಮ ಎಲ್ಲಾ ಕೆಲಸಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ಅದೇ ಸಮಯದಲ್ಲಿ, ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಲಾಭದ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರು ಹಣದ ವಿಷಯದಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ.

ಸಿಂಹ: ವಿನಯಪೂರ್ವಕ ಕಾರ್ಯ ಸಾಧಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ವಿವಿಧ ಮೂಲದಿಂದ ಧನಪ್ರಾಪ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಯೋಗವಿದೆ. ವಾಹನ ಖರೀದಿ ಯೋಗವಿರುವುದು.

ಕನ್ಯಾ: ಈ ರಾಶಿಯವರು ಹೊಸ ವ್ಯಾಪಾರದಲ್ಲಿ ಹಣ ಹೂಡಿಕೆ ಮಾಡುವಿರಿ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರದಿಂದ ಇರುವುದು ಮುಖ್ಯ. ಹಣಕಾಸಿನ ಸಮಸ್ಯೆಯಿಂದ ಚಿಂತೆಗೀಡಾಗುವಿರಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ.

ತುಲಾ: ಸಂಗಾತಿಯಿಂದ ಬೆಲೆಬಾಳುವ ಉಡುಗೊರೆ ಸಿಗಲಿದೆ. ಇದು ನಿಮ್ಮ ಇಂದಿನ ಸಂತೋಷವನ್ನು ಇಮ್ಮಡಿ ಮಾಡಲಿದೆ. ನಿಮ್ಮಿಂದ ಸಹಾಯ ಪಡೆದವರೇ ನಿಮಗೆ ಬೆನ್ನ ಹಿಂದೆ ಚೂರಿ ಹಾಕಲಿದ್ದಾರೆ. ಇದು ನಿಮ್ಮ ಮನಸ್ಸಿಗೆ ಘಾಸಿ ಮಾಡಲಿದೆ.

ವೃಶ್ಚಿಕ: ಇಂದು ನಿಮಗೆ ವಿದೇಶಿ ಮೂಲಗಳಿಂದ ಧನ ಲಾಭ. ಶೃಂಗಾರ ಸಾಮಗ್ರಿಗಳನ್ನು ಮಾರುವವರಿಗೆ ಬೇಡಿಕೆ ಹೆಚ್ಚಾಗಲಿದೆ. ರಾಜಕಾರಣಿಗಳು ತಮ್ಮ ಹಿತೈಷಿಗಳ ಬಗ್ಗೆ ಎಚ್ಚರವಹಿಸಿ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ನಿಮಗೆ ಜಯದ ಜೊತೆ ಧನಲಾಭ.

ಧನುಸ್ಸು: ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಮಗೆ ಪ್ರಯೋಜನಗಳನ್ನು ಪಡೆಯುವ ಸಂಪೂರ್ಣ ಅವಕಾಶಗಳಿವೆ. ಹಣ ಮತ್ತು ವ್ಯವಹಾರದ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ನೀವು ಮನೆಯಲ್ಲಿ ಬಳಸಿದ ವಸ್ತುಗಳನ್ನು ಖರೀದಿಸಬಹುದು.

ಮಕರ: ಈ ದಿನ ಹೆಚ್ಚು ಬುದ್ಧಿವಂತಿಕೆಯನ್ನು ತಪ್ಪಿಸಿ ಇಲ್ಲದಿದ್ದರೆ ಲಾಭದ ಬದಲು ನಷ್ಟವಾಗಬಹುದು. ಸಂಗಾತಿಯ ಚಡಪಡಿಕೆಯಿಂದ ತೊಂದರೆ ಉಂಟಾಗಲಿದೆ. ಕೊನೆಯಲ್ಲಿ ಪ್ರತಿಕೂಲ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಈ ಸಮಯವು ನಿಮಗೆ ಆರ್ಥಿಕವಾಗಿ ಒಳ್ಳೆಯದಲ್ಲ.

ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ಪುರಸ್ಕಾರ. ಕಳೆದುಹೋಗಿರುವ ವಸ್ತುಗಳು ಆಕಸ್ಮಿಕವಾಗಿ ಸಿಗಬಹುದಾದ ಸಾಧ್ಯತೆ ಇದೆ. ಸಂಗಾತಿ ನಿಮ್ಮ ಪ್ರೀತಿಗಾಗಿ ಹಂಬಲಿಸುತ್ತಾರೆ ಅವರನ್ನು ಹತಾಶೆ ಮಾಡದಂತೆ ನೋಡಿಕೊಳ್ಳುವುದು ಒಳ್ಳೆಯದು.

ಮೀನ: ಆರೋಗ್ಯ ಗಮನಿಸಿ. ಧನಾರ್ಜನೆಗೆ ಕೊರತೆ ಯಾಗದು. ಮಾತಿನಲ್ಲಿ ಸ್ಪಷ್ಟತೆ, ತಾಳ್ಮೆ ಅಗತ್ಯ. ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಕಾರ್ಯ ನಿರ್ವಹಿಸಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ. ದಾಂಪತ್ಯ ತೃಪ್ತಿದಾಯಕ.

Leave a Reply

Your email address will not be published. Required fields are marked *

error: Content is protected !!