ರಾಶಿ ಭವಿಷ್ಯ : ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ? ನೋಡಿ…

ಮೇಷ – ಯಾವುದೇ ಎದುರಾಳಿಯ ಟೀಕೆಗಳಿಗೆ ಗಮನ ಕೊಡದೆ ನಿಮ್ಮ ಕೆಲಸವನ್ನು ಮಾಡಿ. ಭವಿಷ್ಯದಲ್ಲಿ, ಯಶಸ್ಸು ನಿಮ್ಮ ಪಾದಗಳನ್ನು ಚುಂಬಿಸುತ್ತದೆ. ನಿಮ್ಮ ಸಾಮಾಜಿಕ ವಲಯದಲ್ಲಿ ಬಾಂಧವ್ಯವನ್ನು ಹೆಚ್ಚಿಸಲು ನಿಮಗೆ ಸಾಧ್ಯವಾಗುತ್ತದೆ.

ವೃಷಭ – ನಿಮ್ಮ ವಿಶ್ವಾಸ ಬೆಳೆಯುತ್ತದೆ ಮತ್ತು ಪ್ರಗತಿ ನಿಶ್ಚಿತವಾಗಿದೆ. ಹೂಡಿಕೆ ಮಾಡಲು ಮತ್ತು ಊಹಪೋಹಗಳಿಗೆ ಒಳ್ಳೆಯ ದಿನವಲ್ಲ. ನಿಮ್ಮ ಮನೆಯಲ್ಲಿ ಸಾಮರಸ್ಯ ತರಲು ನಿಕಟ ಸಹಕಾರದೊಂದಿಗೆ ಕೆಲಸ ಮಾಡಬೇಕು.

ಮಿಥುನ – ಜೀವನದಲ್ಲಿ ಏರಿಳಿತಗಳಿವೆ. ನೀವು ಸಂಪೂರ್ಣ ಧೈರ್ಯ ಮತ್ತು ತಾಳ್ಮೆಯಿಂದ ಅವರನ್ನು ಎದುರಿಸಿದರೆ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ದೊಡ್ಡ ಲಾಭಕ್ಕಾಗಿ ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಲು ವ್ಯಾಪಾರಿಗಳಿಗೆ ಸೂಚಿಸಲಾಗಿದೆ.

ಕಟಕ – ಇದಕ್ಕಿದ್ದಂತೆ ನಿಮ್ಮ ಖರ್ಚು ವೆಚ್ಚಗಳಲ್ಲಿ ಏರಿಕೆ ಕಂಡು ಬರಲಿದೆ. ಇದರಿಂದ ಚಿಂತೆಗೆ ಒಳಗಾಗುವಿರಿ. ಹೊಸ ವ್ಯಾಪಾರ ಯೋಜನೆಗಳಲ್ಲಿ ಹೂಡಿಕೆ ಮಾಡಲಿದ್ದೀರಿ. ವಿದೇಶಿ ಪ್ರಯಾಣ ಮಾಡುವ ಅವಕಾಶ ಕೂಡಿಬಂದರೂ ಸಹ ಹಣದ ಕೊರತೆಯಿಂದಾಗಿ ಅದು ಸಾಧ್ಯವಾಗದೇ ಹೋಗಬಹುದು.

ಸಿಂಹ- ನಿಮಗೆ ಹಣಕಾಸು ಸಮಸ್ಯೆ ಇದ್ರೂ ನೆಮ್ಮದಿ ಬಯಸುವಿರಿ, ಅನಗತ್ಯ ಅಧಿಕವಾದ ಖರ್ಚು ಮಾಡುವಿರಿ, ಕುಟುಂಬದಲ್ಲಿ ಅಧಿಕವಾದ ಕೋಪ, ವಾದ-ವಿವಾದಗಳಿಂದ ದೂರ ಉಳಿಯುವುದು, ಈಸಂಜೆ ಶುಭ ಸುದ್ದಿ ಕೇಳುವಿರಿ‌.

ಕನ್ಯಾ – ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಚರ್ಚೆ ನಡೆಯಲಿದೆ. ಪೋಷಕರ ಜೊತೆ ಅನಗತ್ಯ ವಾದಕ್ಕೆ ಇಳಿಯಬೇಡಿ. ತಾಳ್ಮೆಯಿಂದ ವರ್ತಿಸಿ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಕ್ಕೆ ಸಾಥ್​ ನೀಡಲಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ಇಡೀ ದಿನ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ.

ತುಲಾ – ದಾಂಪತ್ಯದಲ್ಲಿ ಉಂಟಾದ ಕಲಹವು ಬೀದಿ ಜಗಳದವರೆಗೆ ಬಂದು ನಿಲ್ಲಲಿದೆ. ಇದರಿಂದ ನೀವು ಮಾನಸಿಕವಾಗಿ ತುಂಬಾನೇ ಕೊರಗಲಿದ್ದೀರಿ. ಇದು ನಿಮ್ಮ ಪಾಲಿಗೆ ಅತ್ಯಂತ ಕಠಿಣಕರ ಘಟ್ಟವಾಗಿದೆ. ಕುಲದೇವತೆಯನ್ನು ಪ್ರಾರ್ಥಿಸಿ. ವಿದ್ಯಾರ್ಥಿಗಳಿಗೆ ಒಳಿತಿದೆ.

ವೃಶ್ಚಿಕ – ನಿಮ್ಮ ಕೆಲಸಗಳನ್ನು ಒಂದೊಂದಾಗಿ ನಿಧಾನವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಸರ್ಕಾರಿ ಕೆಲಸ ಮಾಡುವ ಜನರಿಗೆ ಇಂದು ಅತ್ಯಂತ ಬಿಡುವಿಲ್ಲದ ದಿನ. ಅಧಿಕ ಕೆಲಸದ ಹೊರೆಯಿಂದಾಗಿ ಇಂದು ನೀವು ಹೆಚ್ಚಿನ ಒತ್ತಡ ಅನುಭವಿಸುವಿರಿ.

ಧನುಸ್ಸು – ಸಣ್ಣ ಸಣ್ಣ ವಿಷಯಗಳಿಗೂ ನೀವು ಕೋಪ ಮಾಡಿಕೊಳ್ಳುತ್ತೀರಿ. ಹಾಗೆಯೇ ವಿನಾಕಾರಣ ಒಂದಿಷ್ಟು ಜನರ ಮೇಲೆ ಹೆಚ್ಚಿನ ಅನುಮಾನ ವ್ಯಕ್ತ ಪಡಿಸುತ್ತೀರಿ. ವಿವಾಹ ಆಗಿರುವ ಹೆಣ್ಣುಮಕ್ಕಳಿಗೆ ಅತ್ತೆ ಮನೆಯಲ್ಲಿ ಅಷ್ಟೇನೂ ಶುಭ ಫಲ ಇರೋದಿಲ್ಲ.

ಮಕರ – ಈ ದಿನ ಮಿಶ್ರ ಫಲದಾಯಕ ದಿನ. ಹಿರಿಯ ಅಧಿಕಾರಿಯೊಂದಿಗಿನ ಭಿನ್ನಾಭಿಪ್ರಾಯವು ಹಾನಿಕಾರಕವಾಗಿದೆ. ಕೋಪವನ್ನು ನಿಯಂತ್ರಣದಲ್ಲಿಡಿ. ಅದೃಷ್ಟವು ಹೊಸ ಸಂಬಂಧದೊಂದಿಗೆ ಹೊಳೆಯುತ್ತದೆ. ನೀವು ಸಾಮಾಜಿಕ ಗೌರವವನ್ನು ಪಡೆಯುತ್ತೀರಿ.

ಕುಂಭ – ದೀರ್ಘಕಾಲದ ಸಾಲದಿಂದ ನಿಮಗೆ ಪರಿಹಾರ ಸಿಗಲಿದೆ. ನೀವು ಹತ್ತಿರದ ಸಂಬಂಧಿ ಅಥವಾ ಸ್ನೇಹಿತರಿಂದ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಸಂಜೆಯಲ್ಲಿ ಸಾಮಾಜಿಕ ಸಂಬಂಧಗಳು ಲಾಭದಾಯಕವಾಗುತ್ತವೆ ಮತ್ತು ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲಾಗುವುದು.

ಮೀನ – ವಾಹನದಿಂದ ನಷ್ಟ ಸಂಭವ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಸಂಗಾತಿಯಿಂದ ಸೂಕ್ತ ಸಲಹೆ, ಹಿರಿಯರಿಂದ ಹಣಕಾಸಿನಲ್ಲಿ ಅಸಹಕಾರ,ಆರೋಗ್ಯದಲ್ಲಿ ವ್ಯತ್ಯಾಸ, ಹಿರಿಯರೊಡನೆ ವಿರಸ, ನೆಮ್ಮದಿ ಇಲ್ಲದ ಜೀವನವಾಗುವುದು. ಪ್ರೇಮಿಗಳಿಬ್ಬರಲ್ಲಿ ಮನಸ್ತಾಪ.

Leave a Reply

Your email address will not be published. Required fields are marked *

error: Content is protected !!