ರಾಶಿ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದ ಮೇಲೆ ದುಷ್ಪರಿಣಾಮ

ಮೇಷ: ನೀವು ಇಂದು ಪ್ರೀತಿ ಮಾಡುವ ಅವಕಾಶವನ್ನು ಕಳೆದುಕೊಳ್ಳದಿದ್ದಲ್ಲಿ, ನಿಮ್ಮ ಇಡೀ ಜೀವನದಲ್ಲಿ ಈ ದಿನವನ್ನು ಎಂದಿಗೂ ಮರೆಯುವುದಿಲ್ಲ. ಪ್ರೀತಿ ಇಂದ್ರಿಯಗಳ ಮಿತಿಯನ್ನು ಮೀರಿದ್ದಾಗಿದೆ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ.

ವೃಷಭ: ಭೂಮಿಯ ಪತ್ರ ವ್ಯವಹಾರಗಳಿಂದ ಅನುಕೂಲ, ಕೆಲಸ ಕಾರ್ಯಗಳಿಗೆ ಅಡೆತಡೆ, ಉದ್ಯೋಗ ವ್ಯಾಪಾರದ ಒತ್ತಡ, ದಾಂಪತ್ಯದ ಮೇಲೆ ದುಷ್ಪರಿಣಾಮ ಬೀರಲಿದೆ, ಅಧಿಕ ಖರ್ಚು, ಸಣ್ಣ ಉದ್ಯಮಿಗಳು ಕೂಡ ಉತ್ತಮ ಲಾಭ ಪಡೆಯಬಹುದು.

ಮಿಥುನ: ಇಂದು ನಿಮ್ಮ ದೊಡ್ಡ ಚಿಂತೆಯೊಂದು ದೂರವಾಗಲಿದೆ. ನೀವು ಯಾವುದೇ ಹಳೆಯ ಸಾಲವನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗುತ್ತೀರಿ. ಬಹಳ ಸಮಯದ ನಂತರ ನೀವು ಉತ್ತಮ ಮನಸ್ಥಿತಿಯಲ್ಲಿರುವಿರಿ.

ಕಟಕ: ಕೆಲಸದ ಬಗ್ಗೆ ಹೇಳುವುದಾದರೆ ಉದ್ಯೋಗಸ್ಥರು ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಪ್ರಗತಿಯ ಮಾರ್ಗಗಳು ನಿಮಗಾಗಿ ತೆರೆಯಬಹುದು. ನೀವು ತಾಳ್ಮೆಯಿಂದಿರಬೇಕು.

ಸಿಂಹ: ಮಹತ್ವಾಕಾಂಕ್ಷೆಗೆ ಪೂರಕವಾದ ವಾತಾವರಣ ಇರುವುದು. ಬಂಧುಮಿತ್ರರ ಸಹಕಾರ ದೊರೆಯುವುದು. ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು. ಮನೆಯಲ್ಲಿ ಸಂತಸ ಮೂಡುವುದು. ಶುಭಕಾರ್ಯಗಳು ಜರುಗುವವು.

ಕನ್ಯಾ: ಆತ್ಮೀಯರೇ ವಿರೋಧಿಗಳಂತೆ ವರ್ತಿಸುವರು. ಮಾಡದ ತಪ್ಪಿಗೆ ಕ್ಷಮೆಕೇಳುವ ಪ್ರಸಂಗ ಇರುವುದರಿಂದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಮನಸ್ಸಿನಲ್ಲಿ ಸಂಕಲ್ಪಿಸಿದ ಕಾರ್ಯವು ನಿಧಾನವಾಗಿ ನೆರವೇರಿ ಲಾಭದಾಯಕವಾಗುವುದು.

ತುಲಾ: ಒಂದು ಪ್ರಣಯದ ಸಂಜೆ ನಿಮಗೆ ಉತ್ಸಾಹ ಮತ್ತು ಆನಂದವನ್ನು ನೀಡಲಿದೆ. ಇಂದು ನೀವು ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಹಿಡಿದ ಕೆಲಸ ಬಿಡದಿರಿ. ನೌಕರರಿಗೆ ಕೆಲಸದಲ್ಲಿ ಬಡ್ತಿ ಯೋಗ ನ್ಯಾಯ ಮತ್ತು ಧರ್ಮದ ಮೇಲಿನ ನಿಮ್ಮ ನಿಷ್ಠೆ ಹೆಚ್ಚುತ್ತದೆ.

ವೃಶ್ಚಿಕ – ಈ ದಿನ ನಿಮಗೆ ಅತ್ಯಂತ ಮುಖ್ಯವಾದ್ದದ್ದು. ಇಂದು ನೀವು ಪ್ರೇಮ ನಿವೇದನೆ ಮಾಡಲಿದ್ದೀರಿ. ಇದು ನಿಮ್ಮ ಜೀವನದ ಅತ್ಯಮೂಲ್ಯ ಕ್ಷಣವಾಗಿರಲಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆಯ ಮಾತುಗಳನ್ನು ಕೇಳುವಿರಿ.

ಧನುಸ್ಸು – ಅನಿರೀಕ್ಷಿತ ಮೂಲಗಳಿಂದ ಹಣ ಹರಿದು ಬರಲಿದೆ. ಸಂಗಾತಿ ನಿಮಗೆ ದುಬಾರಿ ಉಡುಗೊರೆಯನ್ನು ನೀಡಲಿದ್ದಾರೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ದೊರಕಲಿದೆ. ಉದ್ಯೋಗಕ್ಕಾಗಿ ಅರಸುತ್ತಿರುವವರು ಇಂದು ಯೋಗ್ಯ ಅವಕಾಶವನ್ನು ಪಡೆಯಲಿದ್ದಾರೆ.

ಮಕರ –  ನಿಮ್ಮ ಅಜಾಗರೂಕತೆಯಿಂದ ಹಣ ಕಳೆದುಕೊಳ್ಳುವಿರಿ, ಯೋಗ ಅಧ್ಯಾತ್ಮಿಕ ಶಾಲೆ ಪ್ರಾರಂಭಿಸುವ ಚಿಂತನೆ ಮಾಡುವಿರಿ, ಮಕ್ಕಳ ನಡವಳಿಕೆ ಆತಂಕ ತರಲಿದೆ, ಸಂಪೂರ್ಣ ಮಾಹಿತಿ ಪಡೆಯದೇ ವ್ಯಾಪಾರ ಪ್ರಾರಂಭಿಸಿ ನಷ್ಟ ಅನುಭವಿಸುವಿರಿ,

ಕುಂಭ – ಆಕಸ್ಮಿಕ ಆರೋಗ್ಯದಲ್ಲಿ ತೊಂದರೆ ಸಂಭವ, ಶಿಕ್ಷಕರ ಸೃಜನಶೀಲ ವಿಚಾರಗಳು ಪ್ರಯೋಜನ ಪಡೆಯುತ್ತಿವೆ, ಬೇರೆಯವರಿಗೆ ಜಾಮೀನ್ ಆಗಿ ನೀಡಿರುವ ಹಣಕ್ಕೆ ನಿಮಗೆ ತೊಂದರೆ ಉಂಟುಮಾಡಬಹುದು,

ಮೀನ – ನಿಮ್ಮ ಜನ್ಮ ನಕ್ಷತ್ರ ರಾಶಿ ಪ್ರಕಾರ ಆದಾಯ ತರುವ ನಿರ್ದಿಷ್ಟ ಕೆಲಸಕಾರ್ಯಗಳಲ್ಲಿ ನೀವು ತೊಡಗಿಸಿಕೊಂಡರೆ ಲಾಭವಿದೆ, ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಸಕರಾತ್ಮಕ ಸ್ಪಂದನೆ ಮಾಡುವರು.

Leave a Reply

Your email address will not be published. Required fields are marked *

error: Content is protected !!