ತುಮಕೂರು: 2022 ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ತುಮಕೂರು ಕ್ಷೇತ್ರಕ್ಕೆ ಪರಿಶಿಷ್ಟ ಜಾತಿಯ ಎಡಗೈ ಸಮಾಜಕ್ಕೆ ಪ್ರಾತಿನಿಧ್ಯ ನೀಡುವಂತೆ ಪತ್ರಿಕಾಗೋಷ್ಠಿಯಲ್ಲಿ ಎಡಗೈ ಸಮುದಾಯದ ಮುಖಂಡ ನರಸೀಯಪ್ಪ ಒತ್ತಾಯಿಸಿದರು.
ತುಮಕೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ( ಎಡಗೈ ) ಸಮುದಾಯದವರು 4 ಲಕ್ಷಕ್ಕು ಹೆಚ್ಚು ಜನಸಂಖ್ಯೆ ಹೊಂದಿದ್ದು , ಪರಿಶಿಷ್ಟ ಜಾತಿಯಲ್ಲಿ ಅತೀ ಹೆಚ್ಚಿನ ಜನಸಂಖ್ಯೆ ಎಡಗೈ ಸಮಾಜದವರು ಇರುತ್ತಾರೆ . ತುಮಕೂರು ಜಿಲ್ಲೆಯಲ್ಲಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಗೆ 2 ಮೀಸಲು ಕ್ಷೇತ್ರಗಳಿವೆ , ಆದರೆ ಕಾಂಗ್ರೆಸ್ ಪಕ್ಷವು ಎರಡೂ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ( ಎಡಗೈ ) ಸಮುದಾಯಕ್ಕೆ ಅಂತಹ ಸೂಕ್ತ ಅವಕಾಶವನ್ನು ಕೊಟ್ಟಿರುವುದಿಲ್ಲ , ಮಾದಿಗ ಸಮುದಾಯವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅತಿ ದೊಡ್ಡ ಸಮುದಾಯವಾಗಿದ್ದರೂ ಸಹ ಕಾಂಗ್ರೆಸ್ ಪಕ್ಷದಿಂದ ಪ್ರಾತಿನಿಧ್ಯ ಸಿಕ್ಕಿಲ್ಲವಾದ್ದರಿಂದ ಕಾಂಗ್ರೆಸ್
ಪಕ್ಷದ ಬಗ್ಗೆ ನಿರಾಶೆಗೊಂಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ 2020 ರಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಿಂದ ಪರಿಶಿಷ್ಟ ಜಾತಿ ( ಎಡಗೈ ಸಮುದಾಯದವರು 960 ಚುನಾಯಿತ ಸದಸ್ಯರು ಇರುತ್ತಾರೆ. ಮೇಲಾಗಿ ಎಡಗೈ ಸಮುದಾಯವು ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ , ಆದ್ದರಿಂದ 2022 ರಲ್ಲಿ ತುಮಕೂರು ಕ್ಷೇತ್ರಕ್ಕೆ ಮುಂಬರುವ ಸ್ಥಳೀಯ ಸಂಸ್ಥೆಗಳ ಎಂ.ಎಲ್.ಸಿ , ಚುನಾವಣೆಯ ಮೂಲಕ ಎಡಗೈ ಸಮುದಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ( ಎರಡು ಬಾರಿ ) ಹಾಲಿ ಕೆ.ಪಿ.ಸಿ.ಸಿ. ಸದಸ್ಯರೂ ಆಗಿರುವ ಹೆಚ್ , ಕೆಂಚಮಾರಯ್ಯ ಇವರಿಗೆ ಎಂ.ಎಲ್.ಸಿ ಟಿಕೆಟ್ ನೀಡುವ ಮೂಲಕ ಪರಿಶಿಷ್ಟ ಜಾತಿ ( ಎಡಗೈ ) ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡುವಂತೆ ರಾಷ್ಟ್ರೀಯ ಕಾಂಗ್ರೆಸ್ ಗೆ ಪಕ್ಷಕ್ಕೆ ಎಡಗೈ ಸಮುದಾಯದರು ಒತ್ತಾಯಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಕೆಂಚಮಾರಯ್ಯ, ನರಸೀಯಪ್ಪ, ದಲಿತ ಮುಖಂಡರು, ಇತರರು ಇದ್ದರು.