ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿರವರಿಗೆ ಹುಟ್ಟು ಹಬ್ಬ ಆಚರಣೆ : ಅಂಬಿಕಾ ಹುಲಿನಾಯ್ಕರ್

ತುಮಕೂರು:      ದೇಶ ಕಂಡ ಅಪರೂಪದ ರಾಜಕಾರಣಿಯಾಗಿರುವ ಪ್ರಧಾನಿ ನರೇಂದ್ರಮೋದಿರವರು ಎಲ್ಲಾ ವರ್ಗಗಳ ಹಿತಾಸಕ್ತಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ತುಮಕೂರು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ವೀರಭದ್ರಯ್ಯನವರು ತಿಳಿಸಿದರು.

ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಸೆ.17 ರಂದು ಶ್ರೀ ನರೇಂದ್ರಮೋದಿಯವರ 71 ನೇ ಹುಟ್ಟು ಹಬ್ಬದ ಅಂಗವಾಗಿ ಸೇವಾ ಮತ್ತು ಸಮರ್ಪಣಾ ಅಭಿಯಾನ ಸೆ.17 ರಿಂದ ಅ.7 ರವರೆಗೆ ಸುಮಾರು 21 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು ಕೊರೋನಾ ಮಹಾಮಾರಿಯಿಂದ ಜನತೆ ತತ್ತರಿಸಿ ಹೋಗಿದ್ದರು, ನಮ್ಮ ಪ್ರಧಾನಿ ನರೇಂದ್ರ ಮೋದಿರವರು ದೇಶಕ್ಕೆ ಕೊವ್ಯಾಕ್ಸಿನ್, ಕೋವಿಶೀಡ್ ನಮ್ಮ ಸ್ವದೇಶಿ ಲಸಿಕೆಯನ್ನು ನೀಡಿ ದೇಶದ ವಿದೇಶದ ಜನತೆಗೆ ವರದಾನವಾಗಿದೆ. ಭಯದ ವಾತಾವರಣದಲ್ಲಿ ಬದುಕುವಂತಿತ್ತು, ಮೋದಿ ಜೀಯವರು ದೇಶದಲ್ಲಿ ಮಹಾಲಸಿಕೆ ಕಾರ್ಯಕ್ರಮದ 108 ಕೋಟಿ ವ್ಯಾಕ್ಸಿನ್ ನೀಡಲಾಗಿದೆ. ನಮ್ಮ ದೇಶದಲ್ಲಿ 2 ಕೋಟಿ 30 ಲಕ್ಷ ವ್ಯಾಕ್ಸಿನ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮೋರ್ಚಾ ಜಿಲ್ಲಾಧ್ಯಕ್ಷರಾದ ಅಂಬಿಕಾ ಹುಲಿನಾಯ್ಕರ್‌ರವರು ಮಾತನಾಡುತ್ತಾ ನರೇಂದ್ರ ಮೋದಿರವರ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ರೋಗಿಗಳಿಗೆ ಹಾಗೂ ಬಾಣಂತಿಯರಿಗೆ ಹಣ್ಣು- ಹಂಪಲುಗಳನ್ನು ವಿತರಿಸಲಾಗಿತ್ತು. ನಿರಂತರವಾಗಿ 7 ವರ್ಷಗಳಿಂದ ಪ್ರಧಾನಿಯಾಗಿ ಉತ್ತಮ ಆಡಳಿತ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಜಗತ್ತಿನ ಎಲ್ಲರ ಗಮನ ಸೆಳೆದಿದ್ದಾರೆ ಇವರ ಬುದ್ದಶಕ್ತಿಯಿಂದ ದೇಶದ ಸಮಗ್ರ ಅಭಿವೃದ್ಧಿಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ.

ದೀನ ದಲಿತರ ರೈತರ ಕಲ್ಯಾಣಕ್ಕಾಗಿ ಇವರು ವಿಶೇಷ ಯೋಜನೆಗಳನ್ನು ಜಾರಿಗೆ ತಂದು ಸಂಪೂರ್ಣವಾಗಿ ಅನುಷ್ಠಾನಗೊಳಿಸಿದೆ ಎಂದು ತಿಳಿಸಿದರು. ಮೋದಿಯವರ ಜನ್ಮ ದಿನವನ್ನು ಸ್ಮರಿಸುತ್ತಾ ಅವರ ಉತ್ತಮ ಆರೋಗ್ಯಕ್ಕಾಗಿ ಅವರ ದೀರ್ಘ ಆಯುಷ್ಯಕ್ಕಾಗಿ ಮತ್ತು ಇನ್ನಷ್ಟು ವರ್ಷಗಳ ಕಾಲ ಅವರ ರಾಷ್ಟ್ರ ಸೇವೆಗಾಗಿ ಪ್ರಾರ್ಥಿಸುತ್ತಾರೆ. ದಲಿತರು, ಬುಡಕಟ್ಟುಗಳು, ರೈತರು ಮತ್ತು ಹಿಂದುಳಿದ ವರ್ಗಗಳಂತಹ ಸಮಾಜದ ಅಂಚಿನಲ್ಲಿರುವ ವರ್ಗಗಳ ಸಬಲೀಕರಣಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ, ನಂತರ ಅವರು ತಮ್ಮ ನಿರ್ಣಾಯಕ ನೀತಿಗಳ ಮೂಲಕ ಭಾರತೀಯರ ಜೀವನದಲ್ಲಿ ಪರಿವರ್ತನೆಯನ್ನು ತಂದಿದ್ದಾರೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ಧ್ಯೇಯ ವಾಕ್ಯವನ್ನು ನಿರೂಪಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮೋಚಾ ಕಾರ್ಯಕಾರಣಿ ಸದಸ್ಯರಾದ ವಿಜಯಭಾಸ್ಕರ್‌ರವರು ಮಾತನಾಡುತ್ತಾ ಈ ನಿಸ್ವಾರ್ಥ ಸೇವೆ ಮತ್ತು ಸಮರ್ಪಣಾ ಮನೋಭಾವ ಮತ್ತು ಸೇವಾ ಹಿ ಸಂಘಟನ್ ಮಂಥ್ರದಿಂದ ಸ್ಪೂರ್ತಿ ಪಡೆದು ಮಹಿಳಾ ಮೋರ್ಚಾವು ಆರೋಗ್ಯಕರ ಮಹಿಳೆ, ಆರೋಗ್ಯಕರ ಭಾರತ ಎಂಬ ಧ್ಯೇಯ ವಾಕ್ಯದಡಿ ರಾಜ್ಯಾದ್ಯಾಂತ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಅಂಬಿಕಾ ಹುಲಿನಾಯ್ಕರ್‌ರವರು ರಾಜ್ಯ ಮಹಿಳಾ ಮೋಚಾ ಕಾರ್ಯಕಾರಣಿ ಸದಸ್ಯರಾದ ವಿಜಯಭಾಸ್ಕರ್, ಪ್ರಧಾನ ಕಾರ್ಯದರ್ಶಿಯಾದ ರೇಖಾ ಶಿವಕುಮಾರ್, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಆದ್ಯಗೌಡ, ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಾವ್ಯಶಿವಶಂಕರ್, ರೈತ ಮೋರ್ಚಾ ಕಾರ್ಯದರ್ಶಿಗಳಾದ ಶೈಲಾಶ್ರೀ ನಗರ ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಭಾರತಿರಾಜ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!