ಹೊನ್ನಾವರ : ಜನರು ಕಷ್ಟಪಟ್ಟು ದುಡಿದ ಹಣ ಹೊಟ್ಟೆಗೆ , ಬಟ್ಟೆಗೆ ಸಾಕಾಗುತ್ತಿಲ್ಲ. ದುಬಾರಿಯಾದ ಪೆಟ್ರೋಲ್, ಡೀಸೆಲ್, ಅನಿಲ ದರ, ಆಹಾರ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದ್ದು, ಪೆಟ್ರೋಲ್, ಡೀಸೆಲ್ ಸೇರಿ ದಿನಬಳಕೆ ಸಾಮಗ್ರಿಗಳ ಬೆಲೆ ಏರಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದೊಂದೆಡೆಯಾದರೆ, ಮತ್ತೊಂದೆಡೆ ಅನ್ನದಾತರೂ ಸಹ ಸರ್ಕಾರದ ನೀತಿ ವಿರುದ್ಧ ಸೋಮವಾರ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸೇರಿದಂತೆ ಹೊನ್ನಾವರದ ವಿವಿಧ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿದೆ.
ಹೊನ್ನಾವರ ಬ್ಲಾಕ್ ಕಿಸಾನ್ ಘಟಕ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಹಾಗೂ ರೈತ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಾಳೆ ಭಾರತ್ ಬಂದ್‍ಗೆ ಕರೆ ಕೊಟ್ಟಿದೆ.
ರೈತರು ಕರೆ ಕೊಟ್ಟಿರೋ ಬಂದ್‍ಗೆ ಹೊನ್ನಾವರದಲ್ಲಿ ಆಟೊ ಚಾಲಕ ಮಾಲೀಕರು ಸಂಪೂರ್ಣ ಬೆಂಬಲ ನೀಡಿಲ್ಲ. ಹೀಗಾಗಿ ನಾಳೆ ಎಂದಿನಂತೆ ಹೋಟೆಲ್ ಓಪನ್ ಇರಲಿದೆ ಎನ್ನಲಾಗುತ್ತಿದೆ.
ಅಲ್ಲದೇ ಕೆಎಸ್‍ಆರ್‍ಟಿಸಿ ನೌಕರರ ಸಂಘವೂ ಸಹ ಬಂದ್‍ನಿಂದ ದೂರ ಉಳಿದಿದ್ದು, ಎಂದಿನಂತೆ ಬಸ್ ಓಡಿಸಲು ನೌಕರರು ನಿರ್ಧರಿಸಿದ್ದಾರೆ.
ಇನ್ನು ಬೀದಿಬದಿ ವ್ಯಾಪಾರಿಗಳು ಈಗಾಗಲೇ ಕರೊನಾ ಮಹಾಮಾರಿಯಿಂದ ಕಂಗೆಟ್ಟು
ಹೋಗಿದ್ದು ಈಗ ಅಷ್ಟೇ ಛೇತರಿಕೆ ಕಾಣುತ್ತಿದ್ದಾರೆ. ಮತ್ತೊಂದು ಬಂದ್ ಮಾಡೋಕೆ ಆಸಕ್ತಿ ತೋರುತ್ತಿಲ್ಲ.
ಸೋಮವಾರದ ಬಂದ್‍ಗೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ವಿವಿಧ ರೈತ ಸಂಘಟನೆಗಳು ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ದ ನಡೆಸಲಿರುವ ಭಾರತ ಬಂದ್‍ಗೆ ಈಗಾಗಲೇ ಕಾಂಗ್ರೆಸ್ ಬೆಂಬಲ ಘೋಷಿಸಿದೆ.
ಜಿಲ್ಲಾ ಕಿಸಾನ್ ಕಾಂಗ್ರೆಸ್, ಸಿಐಟಿಯು, ಹೊನ್ನಾವರದ ರೈತ ಸಂಘಟನೆಗಳ ಪ್ರಮುಖರು ಸೇರಿ ವಿವಿಧ ಸಂಘಟನೆಗಳು ಹೊನ್ನಾವರದ ಶರಾವತಿ ಸರ್ಕಲ್‍ದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಬೆಳಿಗ್ಗೆ 9.30 ಗಂಟೆಗೆ ಶರಾವತಿ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಸರ್ಕಾರದ ಗಮನ ಸೆಳೆಯಲಿದೆ. ಕಿಸಾನ್ ಕಾಂಗ್ರೆಸ್‍ನ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಕಾಂಗ್ರೆಸ್‍ನ ಎಲ್ಲ ವಿಭಾಗಗಳ ನಾಯಕರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಿಜೆಪಿ ಸರ್ಕಾರದ ವಿರುದ್ಧ ಭಾರತ ಬಂದ್ ನಿಮಿತ್ತ ನಡೆಯುವ ಪ್ರತಿಭಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಾನಂದ ಹೆಗಡೆ ಕಡತೊಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.