ಪಾವಗಡ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಿಂದ ಸಾರ್ವಜನಿಕ ಕುಂದು ಕೊರತೆಗಳನ್ನು ಸಭೆಯಲ್ಲಿ ಪಾವಗಡ ಪಟ್ಟಣದ ಸಿರಾ ರಸ್ತೆ ನಾಗರಕಟ್ಟೆ ಮುಂಭಾಗದ ಐತಿಹಾಸಿಕವಾದಂತಹ ಪುರಾತನ ಕಾಲದ ಚನ್ನಕ್ಕ ಧರ್ಮಚತ್ರವನ್ನು ಬಳಾಡ್ಯರು ಅಕ್ರಮವಾಗಿ ಖಾತೆ ಸೃಷ್ಟಿಸಿಕೊಂಡು ಚನ್ನಕ್ಕ ಧರ್ಮಚತ್ರವನ್ನು ರಾತ್ರೋ ರಾತ್ರಿ ನೆಲಸಮ ಮಾಡಿ ವಾಣಿಜ್ಯ ಮಳಿಗೆ ನಿರ್ಮಿಸಿರುವುದರ ಬಗ್ಗೆ ಖಾತೆಗಳ ಸಮಗ್ರ ತನಿಖೆ ನಡೆಸುವಂತೆ ಪಾವಗಡ ಪಟ್ಟಣ ನಿವಾಸಿ ಬೇಕರಿ ನಾಗರಾಜ 30 ಪುಟಗಳ ದಾಖಲಾತಿಯೊಂದಿಗೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಗೆ ದೂರನ್ನು ನೀಡಲಾಯಿತು,
ಶೀಘ್ರವೇ ಸ್ಪಂದಿಸಿದ ಅಧಿಕಾರಿಗಳು ಪುರಸಭೆ ಇಲಾಖೆ ಅಧಿಕಾರಿಗಳಿಗೆ ಸಮಗ್ರ ತನಿಖೆ ನಡಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಹಲವಾರು ಸಾರ್ವಜನಿಕರು ದೂರನ್ನು ನೀಡಿ ಅಹವಾಲುಗಳನ್ನು ಹೇಳಿಕೊಂಡರು.ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು