ಶ್ರೀದೇವಿ ವೈದ್ಯರಿಂದ 72ವರ್ಷದ ವಯೋವೃದ್ಧರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ತುಮಕೂರು: ತುಮಕೂರಿನ ಶ್ರೀದೇವಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನ ವೈದ್ಯರು 72 ವರ್ಷದ ವಯೋವೃದ್ಧೆಗೆ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಸ್ವಾವಲಂಬಿ️ಯಾಗಿಸಿದ್ದಾರೆ.

ಮಂಡ್ಯ ತಾಲ್ಲೊಕಿನ 72 ವರ್ಷದ ವಯೋವೃದ್ದೆಗೆ 3 ತಿಂಗಳಿನಿಂದ ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರನ್ನು ವೈದ್ಯರು ಪರೀಕ್ಷಿಸಿದ ನಂತರ ಅವರಿಗೆ ಬೇಕಾದ ಪರೀಕ್ಷೆಗಳಾದ ಎಕ್ಸ್ ರೇ, ರಕ್ತಪರೀಕ್ಷೆ, ಸಿ.ಟಿ.ಸ್ಕ್ಯಾನಿಂಗ್, ಎಂಡೋಸ್ಕೋಪಿ ಮಾಡಲಾಗಿತ್ತು.
ಎಂಡೋಸ್ಕೋಪಿ. ವರದಿಯಲ್ಲಿ ಸಣ್ಣಕರುಳಿನಲ್ಲಿ ಕ್ಯಾನ್ಸರ್ ಗೆಡ್ಡೆಯೂ ಕಂಡು ಬಂದಿತ್ತು. ಇದನ್ನು ಬಯಾಪ್ಸಿ ಮಾಡಿದಾಗ ಕ್ಯಾನ್ಸರ್ ಗಡ್ಡೆ ಎಂದು ದೃಢಪಟ್ಟಿತ್ತು.

ಸದರಿ ರೋಗಿಯ ಸಣ್ಣ ಕರುಳಿನ ಮೊದಲ️ನೇ ಭಾಗ (Deuodenum) ದಲ್ಲಿ ಪಿತ್ತನಾಳ, (bile duct), ಪ್ಯಾಂಕ್ರಿಯಾಟಿಕ್‍ನಾಳ ಹಾಗೂ ಹೊಟ್ಟೆಯು ಬಂಬು ಸೇರುವ ಭಾಗ ಎಲ್ಲಾ ಒಳಗೊಂಡು ಕ್ಯಾನ್ಸರ್ ಆಗಿ ಪರಿಣಮಿಸಿತ್ತು. ಈ ಸಂದರ್ಭಗಳಲ್ಲಿ ಎಲ್ಲಾ ಅಂಗಾಂಗಗಳನ್ನು ತೆಗೆಯಬೇಕಾಗುತ್ತದೆ ಹಾಗೂ ನಂತರ ಅವುಗಳನ್ನು ಪುನಃ ಸಣ್ಣ ಕರುಳಿಗೆ ಮತ್ತೇ ಜೋಡಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಸುಮಾರು 8 ಗಂಟೆಗಳ ಕಾಲ️ ನಡೆಡ ಶಸ್ತ್ರಚಿಕಿತ್ಸೆ ಯಲ್ಲಿ ಯಶಸ್ವಿಯಾಗಿ ಜೋಡಿಸಲಾಯಿತು.
ನಂತರ ಸುಮಾರು ಒಂದು ವಾರಗಳ ಕಾಲ️ ರೋಗಿಯೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿ ಆರೈಕೆ ನೀಡಿ ಗುಣಮುಖರನ್ನಾಗಿ ಮಾಡಲಾಗಿದೆ. ಸದರಿ ಯಶಸ್ವಿ ಶಸ್ತ್ರಚಿಕಿತ್ಸೆ ಯ ನಂತರ ನಂತರ ರೋಗಿಯೂ ಕುಟುಂಬಸ್ತರು ಶಸ್ತ್ರಚಿಕಿತ್ಸೆಗೆ ದೈರ್ಯ ತುಂಬಿದ ಶ್ರೀದೇವಿ ಆಸ್ಪತ್ರೆಯ ವೈದ್ಯರಾದ ಡಾ.ಎಂ.ಹೆಚ್.ಮನೋನ್ಮಣಿರವರ ತಂಡಕ್ಕೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು.

ಇಂತಹ ಕಾಯಿಲೆಯೂ ಅತಿ ವಿರಳವಾದ ಕಾಯಿಲೆಯಾಗಿದ್ದು ಸುಮಾರು 10 ಲ️ಕ್ಷದಲ್ಲಿ ಇಬ್ಬರಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಕ್ಕೆ (periampullary) ಪೆರಿಯಂಪುಲ್ಲರಿ ಕ್ಯಾನ್ಸರ್ ಎಂದು ಕರೆಯಲಾಗುವುದು. ಕ್ಯಾನ್ಸರಿನ ಗಾತ್ರಕ್ಕಿಂತ ಅದು ಕಾಣಿಸಿಕೊಳ್ಳುವ ಜಾಗ ಅತಿ ಮಹತ್ವದಾಗಿರುತ್ತದೆ. ಈ ಜಾಗದಲ್ಲಿ ಪಿತ್ತನಾಳ ,ಪ್ಯಾನ್ಕ್ರಿಯಾಸ್ (ಮೇದೋಜೀರಕ ಗ್ರಂಥಿಯೂ) ಬಂದು ಇಲ್ಲಿ ಸೇರುತ್ತದೆ, ಆದ್ದರಿಂದ ಕ್ಯಾನರ್ ಗಡ್ಡೆಯನ್ನು ತೆಗೆಯಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು. ಈ ಸವಾಲುಗಳನ್ನು ದಾಟಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲ️ಯದ ಸರ್ಜಿಕಲ್ ಗ್ಯಾಸ್ಟ್ರೋ ಎಂಟಿರಾಲ️ಜಿಸ್ಟ್ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಹೆಚ್.ಮನೋನ್ಮಣಿರವರು ಎಂದು ತಿಳಿಸಿದರು.

ಸದರಿ ರೋಗಿಯೂ ಗುಣಮುಖರಾಗಲು ಕಾಳಜಿ ವಹಿಸಿದ ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ.ಕಾವ್ಯಶ್ರೀ, ಡಾ.ಕಾವ್ಯ, ಡಾ.ವೇದಶ್ರೀ, ತೀವ್ರ ನಿಗಾ ಘಟಕದ ವೈದ್ಯರಾದ ಡಾ.ಆನಂದ್, ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಚೇತನ್, ಡಾ.ಅಮಿತ್, ಡಾ.ಹೇಮಂತ್, ಪೆಥಾಲ️ಜಿ ವಿಭಾಗದ ಡಾ.ಹರೀಶ್, ಡಾ.ಗಿರೀಶ್‍ರವರ ತಂಡಕ್ಕೆ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರಾದ ಡಾ.ಎಲ್.ನರೇಂದ್ರ ಕುಮಾರ್ ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ ಹುಲಿನಾಯ್ಕರ್ ರವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಲ️ಭ್ಯವಿರುವ ಸೌಲ️ಭ್ಯಗಳನ್ನು ಹಾಗೂ ಅಲ್ಲಿನ ಪರಿಣಿತರಾದ ವೈದ್ಯಕೀಯ ತಂಡದ ಉಪಯೋಗಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು, ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಗಿಗಳು ಚಿಕಿತ್ಸೆ ಪಡೆಯಬಹುದೆಂದು ವೈದ್ಯರು ತಿಳಿಸಿದರು. ಅಪರೂಪವಾದ ಚಿಕಿತ್ಸೆಯನ್ನು ನಮ್ಮ ವೈದ್ಯರು ನೀಡಿರುವುದು, ಹಾಗೂ ಬಡರೋಗಿಗಳ ಬಗೆಗಿನ ಕಾಳಜಿಯನ್ನು ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ.ಹುಲಿನಾಯ್ಕರ್, ಪ್ರಶಂಸಿಸಿದರು, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ️ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ವೈದ್ಯಕೀಯ ಪ್ರಾಂಶುಪಾಲ️ರಾದ ಡಾ. ಮಹಾಬಲ️ರಾಜು ಮತ್ತು ಸಿಬ್ಬಂದಿ ವರ್ಗದವರು ಹರ್ಷವ್ಯಕ್ತಪಡಿಸಿ ವೈದ್ಯರಿಗೆ ಶುಭಾಷಯ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!