ಸವಿತಾ ಬಂಧು-ನಾವೆಲ್ಲಾ ಒಂದು ಎನ್ನುವುದಕ್ಕೆ ಇದೇ ನಿದರ್ಶನ

ತುಮಕೂರು ನಗರದ ಶ್ರೀರಾಮ ನಗರ ನಿವಾಸಿ ಕುಮಾರ್ ರವರು ಅತ್ಯಂತ ಬಡವರಾಗಿದ್ದು, ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ತಮ್ಮ ಆರೋಗ್ಯ ಚಿಕಿತ್ಸೆಗೆ ತುಮಕೂರು ಸಿದಾರ್ಥ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯಲು ತುಮಕೂರು ತಾಲ್ಲೂಕು ಮತ್ತು ನಗರ ಸವಿತಾ ಸಮಾಜದ ಸಹಾಯ ಹಸ್ತವನ್ನು ಕೇಳಿದರು, ತಕ್ಷಣವೇ ಸ್ಪಂದಿಸಿದ ಸವಿತಾ ಸಮಾಜದ ಮುಖಂಡರುಗಳು ಹಾಗೂ ಸಮಾಜದ ಬಂಧುಗಳು ತಕ್ಷಣವೇ ತಮ್ಮ ಸಮಾಜದ ತುಮಕೂರಿನ ಬಹುತೇಕ ಎಲ್ಲಾ ಸಲೂನ್ ಮಾಲೀಕರು, ಬಂಧುಗಳ ಸಹಕಾರದಿಂದ ಚಂದಾ ರೂಪದಲ್ಲಿ ಹಣವನ್ನು ಸಂಗ್ರಹಿಸಿ ಸಂದಾಯವಾದ ಹಣವನ್ನ ಖುದು ಆಸ್ಪತ್ರೆಗೆ ತೆರಳಿ ಕುಮಾರ್‌ರವರಿಗೆ ಹಸ್ತಾಂತರ ಮಾಡಿದರು, ಇದೇ ಅಲ್ಲವೇ ಸಮಾಜದಲ್ಲಿ ಒಗ್ಗಟ್ಟು ಅಂದರೆ, ಅದಕ್ಕೇ ಸವಿತಾ ಬಂಧು-ನಾವೆಲ್ಲಾ ಒಂದು ಎಂಬ ಶೀರ್ಷಿಕೆಯಲ್ಲಿ ಈ ಸಮಾಜದ ಬಂಧುಗಳು ಒಬ್ಬರಿಗೊಬ್ಬರು ಸಹಾಯ ಹಸ್ತವನ್ನು ಚಾಚಿ ಈ ಕ್ಲಿಷ್ಠಕರ ಸಂದರ್ಭದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎನ್ನುವುದಕ್ಕೆ ನಿದರ್ಶನವನ್ನು ತೋರುವುದಲ್ಲದೇ ಇತರೆ ಸಮಾಜದವರಿಗೂ ಮಾದರಿಗಳಾಗಿದ್ದಾರೆ.

ಈ ಸಂದರ್ಭದಲ್ಲಿ ತುಮಕೂರು ತಾಲ್ಲೂಕು ನಗರ ಸವಿತಾ ಸಮಾಜದ ಅಧ್ಯಕ್ಷರು ಆದ ಕಟ್ ವೆಲ್ ರಂಗನಾಥ್, ಜಿಲ್ಲಾ ಸಂಚಾಲಕರು ನಾಗೇಂದ್ರ, ಸಾಮಾಜಿಕ ಮುಖಂಡರು ಪ್ರದೀಪ್ ಹಾಗೂ ನಿರ್ದೇಶಕರು ಆದ ಉಮೇಶ್ ರವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!