ಕಂದನ ಉಳಿಸು ಅಭಿಯಾನ’ ಕಾರ್ಯಕ್ರಮಕ್ಕೆ ಪ್ರಸಿದ್ಧ ಚಿತ್ರನಟಿ ಪ್ರೇಮ ಬೆಂಬಲ ……………….ಬೆಂಗಳೂರು ಮಲ್ಲೇಶ್ವರಂ ಬಳಿ ಇರುವ ರೇಣುಕಾಂಬಾ ಸ್ಟುಡಿಯೋದಲ್ಲಿ ‘ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್’ ಸಂಸ್ಥೆ ವತಿಯಿಂದ ‘ಕಂದನ ಉಳಿಸು’ ಪತ್ರಿಕಾ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂಧರ್ಭದಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಹೆಸರಾಂತ ಚಿತ್ರನಟಿ ಪ್ರೇಮ ಅವರು ‘ಕಂದನ ಉಳಿಸು’ ಲಾಂಛನವನ್ನು ಬಿಡುಗಡೆಗೊಳಿಸಿದರು. ಮಹೇಶ್ ಲಲಿತ ಕಲಾ ತಂಡದ ಮಹೇಶ್ ಅವರು ರಚಿಸಿ ಹಾಡಿರುವ ‘ಕಂದನ ಉಳಿಸು’ ವಿಡಿಯೋವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ರೂವಾರಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ. ಶಿವಕುಮಾರ್ ನಾಗರ ನವಿಲೆಯವರು ಮಾತನಾಡಿ, “ಬೆಂಗಳೂರಿನ ಸಂಜೀವಿನಿ ನಗರದ ನಿವಾಸಿಯಾದ ಶ್ರೀ ನವೀನ್ ಕುಮಾರ್ ಅವರ ಒಂದು ವರ್ಷ, 6 ತಿಂಗಳ ಮಗು ಜನೀಶ್ ಅನುವಂಶೀಯ ಬೆನ್ನುಮೂಳೆಯ ಸ್ನಾಯುಗಳ ಕ್ಷೀಣತೆ ಅನ್ನೋ ಖಾಯಿಲೆಯಿಂದ ಬಳಲುತ್ತಿದ್ದು, ಈ ಮಗುವಿನ ಖಾಯಿಲೆಗೆ ಭಾರತದಲ್ಲಿ ಯಾವುದೇ ರೀತಿಯ ಔಷಧಿ ಇಲ್ಲದ ಕಾರಣ ಅಮೇರಿಕಾದ ಜೊಲ್ಗೊನಿಸ್ಮ – ಜೀನ್ ತೆರೆಫಿ ಎಂಬ ಔಷಧಿಯನ್ನು ಅವರು ಆಮದು ಮಾಡಿಕೊಳ್ಳಬೇಕಾಗಿದ್ದು, ಇದರ ವೆಚ್ಚ ಸುಮಾರು 16 ಕೋಟಿ ರೂಪಾಯಿಗಳು ಆಗಿರುತ್ತದೆ. ಇದುವರೆಗೆ ವಿವಿಧ ಮೂಲಗಳಿಂದ ಶೇಕಡ 50% ಹಣ ಸಂಗ್ರಹವಾಗಿದ್ದು, ಬಾಕಿ 50% ರಷ್ಟು ಹಣವನ್ನು ಸಂಗ್ರಹ ಮಾಡಿಕೊಡುವ ಉದ್ದೇಶದಿಂದ ನಮ್ಮ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಕಾರ್ಯಕ್ರಮ ಮಾಡುವುದರ ಮುಖಾಂತರ ಹಣ ಸಂಗ್ರಹಣೆಗೆ ಮುಂದಾಗಿದ್ದು, ಈ ಕಾರ್ಯಕ್ರಮ ದಿನಾಂಕ : 21-8-2021 ರಂದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೆಂಗಳೂರಿನ ಅಕ್ಷಯ ಸ್ಟುಡಿಯೋ, ನಂಬರ್ 28/2, “ಡಿ ” ಗ್ರೂಪ್ ಲೇಔಟ್, ನಾಗರಬಾವಿ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕರು ಸಂಗೀತ ಕಾರ್ಯಕ್ರಮ ನಡೆಸಿಕೊಳ್ಳಲಿದ್ದಾರೆ, ಹಾಗೆಯೇ ಹಲವು ಪ್ರಸಿದ್ಧ ನೃತ್ಯ ತಂಡಗಳು ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೂಜ್ಯ ಡಾ. ಆನಂದ ಗುರೂಜಿ, ಸಾಯಿರಾಂ ಪ್ರಸಾದ್ ಗುರೂಜಿ, ಬಸವ ರಮಾನಂದ ಸ್ವಾಮೀಜಿ, ಗಡಿನಾಡು ಪ್ರಧಿಕಾರ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಚಿತ್ರನಟಿಯರಾದ ಪ್ರಿಯಾಂಕಾ ಉಪೇಂದ್ರ, ಪ್ರೇಮ, ರೂಪಿಕಾ, ಸಾಹಿತಿಗಳಾದ ಡಾ. ವಿ. ನಾಗೇಂದ್ರ ಪ್ರಸಾದ್ ಮುಂತಾದ ಗಣ್ಯರು ಆಗಮಿಸಲಿದ್ದಾರೆ.
ಈ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಬೇಕಾದರೆ ಪತ್ರಿಕೆ ಮತ್ತು ಮಾಧ್ಯಮಗಳ ಪಾತ್ರ ಮಹತ್ವವಾಗಿದೆ. ತಾವುಗಳು ಪರಿಣಾಮಕಾರಿ ಸುದ್ದಿ ಮಾಡಿದಾಗ ಮಾತ್ರ ಇದು ಮನೆ ಮನೆಗೂ ತಲುಪಿ ಹಣ ಸಂಗ್ರಹಣೆಗೆ ಸಹಾಯವಾಗುವುದು. ಈ ದಿನ ಪತ್ರಿಕಾ ಗೋಷ್ಠಿಗೆ ಆಗಮಿಸಿರುವ ತಮಗೆಲ್ಲರಿಗೂ ಧನ್ಯವಾದಗಳು. ಇದೇ 21ನೇ ತಾರಿಖಿನಂದು ‘ಕಂದನ ಉಳಿಸು ಅಭಿಯಾನ’ಕ್ಕೂ ಕೂಡ ತಾವೆಲ್ಲರೂ ತಪ್ಪದೇ ಆಗಮಿಸಿ, ಸುದ್ಧಿ ಪ್ರಕಟಿಸಿ, ಪ್ರಸಾರ ಮಾಡಬೇಕು” ಎಂದು ವಿನಂತಿಸಿದರು.
ಕನ್ನಡದ ಹೆಸರಾಂತ ಚಿತ್ರನಟಿ ಪ್ರೇಮರವರು ಈ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮೊಂದಿಗೆ ಕೈಜೋಡಿಸಿರುವುದು ಸಂತೋಷದ ಸಂಗತಿ. ಅದೇ ರೀತಿ ಪ್ರಸಿದ್ಧ ಸಂಗೀತ ನಿರ್ದೇಶಕರು, ಸಾಹಿತಿಗಳಾದ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಆಗಮಿಸಿ ‘ಕಂದನ ಉಳಿಸು’ ಕಾರ್ಯಕ್ರಮಕ್ಕೆ ಕೈಜೋಡಿಸಿರುವುದು ಹೆಮ್ಮೆಯ ವಿಷಯ. ಕೊನೆಯವರೆಗೂ ನಿಮ್ಮ ಸಹಕಾರವಿರಲೆಂದು ಮನವಿ ಮಾಡಿ ಆಗಮಿಸಿದ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ರವಿಕುಮಾರ್ ಜಿ.ಎನ್., ರವಿ ಸಂತು, ಡಾ. ಮಂಜುನಾಥ್, ಧನಂಜಯ್, ಮಹೇಶ್, ಕಲ್ಪನಾ, ಗುರುದತ್, ಆಶಾ ಸೂರ್ಯನಾರಾಯಣ್, ಸೌಭಾಗ್ಯ, ಪರಮ್ ಗುಬ್ಬಿ, ಪ್ರಸಿದ್ಧ ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.
‘ ಕಾರ್ಯಕ್ರಮಕ್ಕೆ ಪ್ರಸಿದ್ಧ ಚಿತ್ರನಟಿ ಪ್ರೇಮ ಬೆಂಬಲ ……………….ಬೆಂಗಳೂರು ಮಲ್ಲೇಶ್ವರಂ ಬಳಿ ಇರುವ ರೇಣುಕಾಂಬಾ ಸ್ಟುಡಿಯೋದಲ್ಲಿ ‘ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್’ ಸಂಸ್ಥೆ ವತಿಯಿಂದ ‘ಕಂದನ ಉಳಿಸು’ ಪತ್ರಿಕಾ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂಧರ್ಭದಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಹೆಸರಾಂತ ಚಿತ್ರನಟಿ ಪ್ರೇಮ ಅವರು ‘ಕಂದನ ಉಳಿಸು’ ಲಾಂಛನವನ್ನು ಬಿಡುಗಡೆಗೊಳಿಸಿದರು. ಮಹೇಶ್ ಲಲಿತ ಕಲಾ ತಂಡದ ಮಹೇಶ್ ಅವರು ರಚಿಸಿ ಹಾಡಿರುವ ‘ಕಂದನ ಉಳಿಸು’ ವಿಡಿಯೋವನ್ನು ಬಿಡುಗಡೆಗೊಳಿಸಲಾಯಿತು.