ದಿನಾಂಕ : 13/08/2021ರ ಸಂಜೆ 05:30 ಕ್ಕೆ ದೇಹಾಂಗದಾನ ಸಾಹಿತ್ಯ ಪರಿಷತ್ತು ಕರ್ನಾಟಕ, ವಿಚಾರ ಮಂಟಪ ಸಾಹಿತ್ಯ ವೇದಿಕೆ ಹಾಗೂ ಶಾರದಾ ಮಹಿಳಾ ಸೇವಾ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಗಾಂಗದಾನ ದಿನ ಮತ್ತು ಸ್ವಾತಂತ್ರ್ಯದಿನದ ಪ್ರಯುಕ್ತ ಅಂಗಾಂಗ ದಾನದ ಮಾಹಿತಿ ಮತ್ತು ಆನ್ ಲೈನ್ ಕವನ ವಾಚನ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀಮತಿ ಸುಮಾ ಬಸವರಾಜ ಹಡಪದರ ಸುಮಧುರ ಕಂಠದ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಶ್ರೀಮತಿ ಕಲ್ಪನ ಡಿ.ಎನ್. ಇವರು ಮಾತನಾಡುತ್ತಾ ದೇಹಾಂಗದಾನದಲ್ಲಿ ೨ ವಿಧ ಒಂದು ಜೀವಂತವಿರುವ ವ್ಯಕ್ತಿ ತಾನು ಬದುಕಿರುವಾಗಲೇ ಅಂಗಾಂಗದಾನ ಮಾಡುವುದು ಕಿಡ್ನಿ ದಾನ, ಯಕೃತ್ತಿನ ಒಂದು ಭಾಗ, ಸಣ್ಣ ಕರುಳಿನ ಒಂದು ಭಾಗ ಇವನ್ನು ದಾನ ಮಾಡುವುದು, ಹಾಗೂ ಮರಣಾನಂತರ ಅಥವಾ ಬ್ರೈನ್ ಡೆತ್ ಆದ ವ್ಯಕ್ತಿಗಳ ಹೃದಯ, ಶ್ವಾಸಕೋಶ, ಪಿತ್ತ ಜನಕಾಂಗ, ಸಣ್ಣಕರುಳು, ಹೃದಯದ ಕವಾಟುಗಳು, ಕಾರ್ನಿಯಾ, ಮೂಳೆಗಳು ಇತ್ಯಾದಿಗಳನ್ನು ದಾನ ಮಾಡುವುದು ಮತ್ತೊಂದು ವಿಧ.
ಬ್ರೈನ್ ಡೆತ್ ಆದ ವ್ಯಕ್ತಿಯ ಕುಟುಂಬಸ್ಥರ ಸಮ್ಮತಿಯೊಂದಿಗೆ ದೇಹಾಂಗದಾನ ಮಾಡಬಹುದು. ಕ್ಯಾನ್ಸರ್, ಏಡ್ಸ, ಮತ್ತು ಮಾದಕ ದ್ರವ್ಯ ಸೇವನೆ ಮಾಡುವವರು ಅಂಗಾಂಗ ದಾನ ಮಾಡುವಂತಿಲ್ಲ. ಈ ನಡುವೆ ಹಲವಾರು ಜನ ಅಂಗಾಂಗದಾನ ಮಾಡುತ್ತಿದ್ದಾರೆ. ಹಾಗೂ ಅಂಗಾಂಗದಾನ ಮಾಡಲು ಮುಂದೆ ಬಂದಿದ್ದಾರೆ. ಇಷ್ಟಾದರೂ ಹಲವಾರು ಜನ ಅದರಲ್ಲಿಯೂ ಯುವ ಜನರು ಅಂಗಾಂಗ ದಾನಿಗಳಿಗಾಗಿ ಕಾಯುವ ಪರಿಸ್ಥಿತಿ ಇದೆ. ಎಲ್ಲರೂ ಮುಂದೆ ಬಂದು ಮೂಡ ನಂಬಿಕೆಗಳನ್ನು ಬಿಟ್ಟು ಅಂಗಾಂಗದಾನಕ್ಕೆ ಮುಂದಾಗಬೇಕು ಎಂದು ದೇಹಾಂಗದಾನದ ವಿಷಯದ ಕುರಿತು ವಿವರವಾದ ಉಪನ್ಯಾಸವನ್ನು ನೀಡಿದರು. ನಂತರದ ಕವನ ವಾಚನ ಸ್ಪರ್ಧೆಯಲ್ಲಿ ಸುಮಾರು ೫೦ ಜನ ಕವಿ ಮನಸ್ಸುಗಳು ಪಾಲ್ಗೊಂಡು ಕವನ ವಾಚನ ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮಾನ್ ಇಂಚರ ನಾರಾಯಣಸ್ವಾಮಿ ರವರು ಮಾತನಾಡುತ್ತಾ ಕಾರ್ಯಕ್ರಮ ಆಯೋಜಕರನ್ನು ಅಭಿನಂದಿಸಿ, ಇಂತಹಾ ಅಂಗಾಂಗದಾನದ ಜಾಗೃತಿ ಕಾರ್ಯಕ್ರಮಗಳು ಸಾಕಷ್ಟು ನಡೆಯಬೇಕೆಂಬ ಆಶಯ ವ್ಯಕ್ತ ಪಡಿಸಿದರು. ಸ್ಪರ್ಧೆಯ ತೀರ್ಪುಗಾರರಾದ ಮಾನ್ಯ ವಿರೇಶ್ ಆರ್ ಬಿ. ಜ್ಞಾನತೃಷೆ ಫೇಸ್ ಬುಕ್ ಬಳಗ ಇವರು ಮಾತನಾಡುತ್ತಾ ಎಲ್ಲಾ ಕವಿಗಳು ಬಹಳ ಒಳ್ಳೆಯ ಸಂದೇಶವನ್ನು ನೀಡುವ ಹಾಗೂ ದೇಹಾಂಗದಾನದ ಕುರಿತಾದ ಜಾಗೃತಿಯನ್ನು ಉಂಟಮಾಡುವ ಕವಿತೆಗಳನ್ನು ರಚಿಸಿ ಉತ್ತಮವಾಗಿ ವಾಚನ ಮಾಡಿದರೆಂದು ಹೇಳಿದರಲ್ಲದೇ ದೇಹಾಂಗದಾನ ಕ್ಕೆ ಎಲ್ಲಾ ಯುವ ಮನಸ್ಸುಗಳು ಮುಂದಾಗಬೇಕು ಅಷ್ಟೇ ಅಲ್ಲದೇ ತಮಗೆ ತಿಳಿದವರನ್ನೂ ಈ ಕಾರ್ಯಕ್ಕೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು ಹೇಳಿದರು. ನಂತರ ಶ್ರೀ ಕೆ ಎನ್ ಅಕ್ರಂಪಾಷ ಅವರು ಮಾತನಾಡುತ್ತಾ ಶ್ರೀಮತಿ ಕಲ್ಪನಾ ಅವರು ನಮ್ಮೆಲ್ಲರ ಕಲ್ಪನೆಗೂ ಮೀರಿದ ರೀತಿಯಲ್ಲಿ ಬಹಳಾ ಕ್ರಿಯಾಶೀಲವಾಗಿ ದೇಹಾಂಗದಾನದ ಜಾಗೃತಿ ಮಾಡುತ್ತಿದ್ದಾರೆ. ಸಾಹಿತ್ಯ ದ ಮೂಲಕ ಸಾಮಾಜಿಕ ಬದಲಾವಣೆ, ಸಾಹಿತ್ಯದ ಮೂಲಕ ಸಮಾಜ ಸೇವೆ, ಸಾಹಿತ್ಯದ ಮೂಲಕ ದೇಹಾಂಗದಾನದ ಜಾಗೃತಿ ಮೂಡಿಸುವುದು ಬಹಳ ವಿಶೇಷವಾದ ಕೆಲಸ ಇದಕ್ಕೆ ನಾವು ಅಭಿನಂದಿಸುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸು ೩೦ ಜನ ತಾವು ನೇತ್ರದಾನ ಹಾಗೂ ದೇಹಾಂಗದಾನಕ್ಕೆ ಸಂಕಲ್ಪ ಮಾಡುವುದಾಗಿ ಘೋಷಸಿದ್ದು ವಿಶೇಷವಾಗಿತ್ತು.
ದೇಹಾಂಗದಾನ ಸಾಹಿತ್ಯ ಪರಿಷತ್ತಿನ ಎಲ್ಲಾ ಪಧಾದಿಕಾರಿಗಳು, ವಿಚಾರ ಮಂಟಪ ಸಾಹಿತ್ಯ ವೇದಿಕೆಯ ಗೌರವ ಅಧ್ಯಕ್ಷರಾದ ಶ್ರೀ ವರುಣ್ ರಾಜ್ ಜೀ ಅವರು, ಅಧ್ಯಕ್ಷರಾದ ಶ್ರೀ ಅಂಜನ್ ಕುಮಾರ್ ಪಿ ಆರ್ ಅವರು ಕಾರ್ಯದರ್ಶಿಗಳಾದ ಕುಮಾರಿ ಪ್ರೇಮ ಈ ಅವರು ಹಾಗೂ ಎಲ್ಲಾ ರಾಜ್ಯ ಜಿಲ್ಲಾ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರು, ಪಧಾದಿಕಾರಿಗಳು ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.