ತುಮಕೂರು : ಇಲ್ಲಿನ ರೈತರಿಗೆ ಬರಿ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ, ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಶಾಸಕ ಶ್ರೀನಿವಾಸ್ ಸಂಸದ ಜಿ. ಎಸ್. ಬಸವರಾಜು ಅವರ ಎದರುಗೇ ಏರು ಧ್ವನಿಯಲ್ಲಿ ಮಾತನಾಡಿದ ಸಂದರ್ಭ ಮತ್ತು ಸನ್ನಿವೇಶ ನಡೆಯಿತು.
ಗುಬ್ಬಿ ತಾಲೂಕಿನ ಚೇಳೂರು ಹೋಬಳಿ, ಸಿ ನಂದಿಹಳ್ಳಿ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೂತನ ಸ್ಟೇಷನ್ ಉದ್ಘಾಟನೆ ನಂತರ ಅಧಿಕಾರಿಗಳಿಂದ ಸಂಸದರು ಮಾಹಿತಿ ಪಡೆಯುತ್ತಿದ್ದರು. ಈ ವೇಳೆ ಡ್ಯಾಮ್ ನಿರ್ಮಾಣದ ವಿಚಾರವಾಗಿ ಸಂಸದರು ಸ್ಥಳೀಯರ ಜೊತೆ ಮಾತನಾಡುತ್ತಾ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಡ್ಯಾಮ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ 500 ಕೋಟಿ ರೂಗಳನ್ನು ಮೀಸಲಿಟ್ಟಿದೆ ಎಂದರು. ಆ ಸಮಯದಲ್ಲಿ ಅಲ್ಲಿಯೇ ಇದ್ದ ಗುಬ್ಬಿ ಶಾಸಕರ ಕೋಪ ನೆತ್ತಿಗೇರಿ ಬರಿ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಿರಾ ಎಂದು ಏರುಧ್ವನಿಯಲ್ಲಿ ಸಂಸದ ಜಿ ಎಸ್ ಬಸವರಾಜುರವರ ಮೇಲೆ ಕೂಗಾಡಿದರು. ಇದಕ್ಕೆ ಸಂಸದರು ಸಹ ಹಿಂದೆ ಸರಿಯದೆ ಕೂಡ ಮಾತಿಗೆ ಮಾತು ಬೆಳೆಸಿದ ಕಾರಣ ಇವರಿಬ್ಬರ ವಾಗ್ವಾದ ತಾರಕಕ್ಕೇ ಹೋಯಿತು. ಸ್ಥಳೀಯರು ಮಧ್ಯಪ್ರವೇಶಿಸಿ ಇವರನ್ನು ಸಮಾಧಾನ ಪಡಿಸಿದ್ದಾರೆ.
ಯಾವುದೇ ಏನೇ ಇರಲಿ ಶಾಸಕರು ಮತ್ತು ಸಂಸದರ ನಡುವಿನ ಕಿತ್ತಾಟ ಮತ್ತು ತಾರತಮ್ಯಗಳಿಗೆ ಇಡೀ ರಾಜ್ಯದ ಜನರು ಇದಕ್ಕೆ ಸಾಕ್ಷಿಯಾದರು, ಪ್ರತಿಯೊಬ್ಬ ರಾಜಕಾರಣಿಗಳು ಸಾಮಾನ್ಯ ಜನರಿಗೆ ಮಾದರಿಯಾಗಿರಬೇಕೇ ವಿನಃ ತಮ್ಮ ತಮ್ಮ ಒಳ ಒಪ್ಪಂದಗಳು, ಆಂತರಿಕ ಕಿತ್ತಾಟಗಳಿಗೆ ಜನರನ್ನು ಬಲಿಪಶುಗಳನ್ನಾಗಿ ಮಾಡದಿದ್ದರೇ ಅಷ್ಟೇ ಸಾಕು. ಇನ್ಮುಂದಾದರೂ ಜನಪ್ರತಿನಿಧಿಗಳು ಜನರಿಗೆ ಒಳಿತನ್ನು ಮಾಡುವಂತಾಗಲೀ.