ರೋಟರಿ ಸೆಂಟ್ರಲ್ ಮೊದಲಿನಿಂದಲೂ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಮಾಜಿ ಸೈನಿಕರನ್ನು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುತ್ತಾ ಬರುತ್ತಿದ್ದೇವೆ,ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ಸೈನಿಕರನ್ನು ಇಂದು ಗೌರವಿಸಿರುವುದು ನಮ್ಮ ದೇಶವನ್ನು ಗೌರವಿಸಿದಂತೆ ಎಂದು ರೋಟರಿ ಸೆಂಟ್ರಲ್ 3190 ಅಧ್ಯಕ್ಷರಾದ ರೋ||ಎಂ.ಇ.ನಿಜಲಿಂಗಪ್ಪ ಹೇಳಿದರು.
ಅವರು ತುಮಕೂರು ನಗರದ ಶಿವಲಾಸ್ಯ ಸಮುದಾಯಭವನದಲ್ಲಿ ರೋಟರಿ ಸೆಂಟ್ರಲ್ 3190 ವತಿಯಿಂದ ನಿವೃತ್ತ ಸೈನಿಕರು ಮತ್ತು ಡಾಕ್ಟರೇಟ್ ಪದವಿ ಪಡೆದಿರುವ ರೋ||ಬಿಳಿಗೆರೆ ಶಿವಕುಮಾರ್ ರವರನ್ನು ಸ್ವಾತಂತ್ರ್ಯ ದಿನಚರಣೆಯ ಅಮೃತ ಮಹೋತ್ಸವ ಪ್ರಯುಕ್ತ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ||ಬಿಳಿಗೆರೆ ಶಿವಕುಮಾರ್ ರೋಟರಿ ಸೆಂಟ್ರಲ್ ವತಿಯಿಂದ ಪ್ರತಿವರ್ಷ ಕೃತಕ ಕಾಲು ಮತ್ತು ಕೈ ಜೋಡಣೆ,ಹೃದಯ,ಕಿಡ್ನಿ, ಕಣ್ಣು,ಡಯಾಲಿಸಿಸ್,ಇತರೆ ಚಿಕಿತ್ಸೆಗೆ ಸಹಾಯ ಮಾಡುತ್ತಾ ಬರುತ್ತಿರುವುದು ನಮ್ಮ ಹೆಮ್ಮೆ,ನಾನು 1998-2008 ರವರೆಗೆ ಹೋಂಗಾರ್ಡ್ ಕಮಾಂಡೆಂಟ್ ಆಗಿದ್ದು ಆಗ ನನ್ನ ಸೇವೆ ಮೆಚ್ಚಿ ರಾಷ್ಟ್ರಪತಿ ಡಾ||ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿ ಬಂದಿದ್ದು ನನ್ನ ಜೀವನದ ಹೆಮ್ಮೆ, ಕಾರಣ ಈ ದೇಶ ಕಂಡ ಉತ್ತಮ ರಾಷ್ಟ್ರಪತಿಗಳು ಕಲಾಂ ರವರು, ಅವರಿಂದ ನಾನು ಪ್ರಶಸ್ತಿ ಸ್ವೀಕರಿಸಿದ್ದು ನನ್ನ ಪೂರ್ವಜನ್ಮದಪುಣ್ಯ,ಇವತ್ತು ಪೋಲಿಯೋ ಮುಕ್ತ ದೇಶ ಆಗಿದ್ದರೆ ಅದಕ್ಕೆ ಮುಖ್ಯ ಕಾರಣ ರೋಟರಿ ಸಂಸ್ಥೆ ಅವರು ಇಡೀ ಜನರಿಗೆ ಸಂಸ್ಥೆಯ ಹಣದಿಂದ ಉಚಿತ ಪೋಲಿಯೋ ಲಸಿಕೆ ನೀಡುತ್ತಿದೆ ಅದನ್ನು ಸರ್ಕಾರ ಕೇವಲ ನೀಡುವ ಜವಾಬ್ದಾರಿ ಇದೆ,ರೋಟರಿ ಕೇವಲ ಸಂಸ್ಥೆ ಅಲ್ಲ ಅದು ಪ್ರಪಂಚದ ಎಲ್ಲ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಹೇಳಿದರು.
ಮಾಜಿ ಸೈನಿಕರೂ ಮತ್ತು ಅಬ್ದುಲ್ ಕಲಾಂ ಕಾರ್ ಚಾಲಕರಾಗಿದ್ದ ಚನ್ನಬಸವಯ್ಯ ಮಾತನಾಡಿ, ರೋಟರಿಯ ಸಾಮಾಜಿಕ ಸೇವೆ ಅನನ್ಯ,ಮಾಜಿ ಸೈನಿಕರನ್ನು ಕರೆದು ಇಂದು ಸನ್ಮಾನಿಸಿರುವುದು ಸೈನಿಕರಿಗೆ ನೀಡಿದ ಗೌರವಕ್ಕೆ ನಾವು ಆಭಾರಿಗಳು,ನಾನು ಅಬ್ದುಲ್ ಕಲಾಂರವರಿಗೆ ಡ್ರೈವರ್ ಆಗಿ ಅವರ ಜೊತೆ ಕೆಲಸ ಮಾಡಿದ್ದು ನನಗೆ ಹೆಮ್ಮೆ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಸೈನಿಕರುಗಳಾದ ಸದಾಶಿವಯ್ಯ,ಬಾಲಕೃಷ್ಣ,ಡಿ.ಕೆ.ಗಂಗಯ್ಯ,ರೋಟರಿ ಕಾರ್ಯದರ್ಶಿ ಹೆಬ್ಬೂರು ಶ್ರೀನಿವಾಸಮೂರ್ತಿ,ಪಾಪಣ್ಣ,ಹಿರೇಮಠ್, ಸಿದ್ಧರಬೆಟ್ಟದ ಶಿವಕುಮಾರ್,ರೋ||ರಮೇಶ್,ರೋ||ನಾಗರತ್ನಮ್ಮ, ಮುಂತಾದವರು ಉಪಸ್ಥಿತರಿದ್ದರು.
ರೋಟರಿ ಅಸಿಸ್ಟೆಂಟ್ ಗವರ‍್ನರ್ ಬೆಳ್ಳಿಲೋಕೇಶ್ ನಿರೂಪಿಸಿ,ಬಿ.ಸಿ.ಸುಧಾರವರು ಪ್ರಾರ್ಥಿಸಿ,ಅಂಬಿಕಾರವರು ವಂದಿಸಿದರು.