ಶ್ರೀ ದುರ್ಗಾಂಬಿಕಾ ದೇವಿಗೆ ನಾಗರ ಪಂಚಮಿಯ ವಿಶೇಷ ಪೂಜೆ ಅಲಂಕಾರ

ತುಮಕೂರು: ಶ್ರೀದುಗಾಂಬಿಕಾದೇವಿಯ ಈ ಸ್ಥಳ ನೂರಾರು ವರ್ಷಗಳಿಂದ ಇಲ್ಲಿನ ದೇವತೆ ಶ್ರೀ ಉಚ್ಚಂಗಮ್ಮನ ತುಳಜಾಭವಾನಿ ಆವಾಸ ಸ್ಥಾನ. ಆಕೆಯ ಸುದೀರ್ಘ ಯೋಗ ನಿದ್ರೆಯಲ್ಲಿ ನೆಲೆಸಿದ್ದಳು. ಭಕ್ತರು ಪ್ರಾರ್ಥನೆಗೊಲಿದು, ಶ್ರೀದುರ್ಗಾಂಬಿಕಾ ದೇವಿಯಾಗಿ ಇದೀಗ ನಮ್ಮಲ್ಲಿ ಪ್ರತಿಷ್ಠಾಪನೆಗೊಂಡಿರುವಳು. ಈಸ್ಥಾನ ನಾಗನ ವಾಸಸ್ಥಳ ಆ ನಾಗದೇವನಿಗೂ ಇಂದು ವಿಶೇಷ ಪೂಜೆ ಆರಾಧನೆ ಮಾಡಲಾಗಿತ್ತು. ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತ್ತು ಎಂದು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‌ರವರು ತಿಳಿಸಿದರು.


ತುಮಕೂರಿನ ಶಿರಾ ರಸ್ತೆಯಲ್ಲಿರುವ ಶ್ರೀದೇವಿ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿರುವ ಶ್ರೀ ಆದಿಶಕ್ತಿ ಶ್ರೀ ದುರ್ಗಾಂಬಿಕೆ ದೇವಸ್ಥಾನದಲ್ಲಿ ಆಗಸ್ಟ್ ೧೩ ರಂದು ನಾಗರಪಂಚಮಿಯ ವಿಶೇಷ ಪೂಜೆಯನ್ನು ಶ್ರೀದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶ್ರೀ ದುರ್ಗಾಂಬಿಕಾ ಟ್ರಸ್ಟ್‌ನ ದೇವಿಯ ಮಾನ್ಯೇಜಿಂಗ್ ಟ್ರಸ್ಟಿಯಾದ ಶಾಂತಾದುರ್ಗಾದೇವಿರವರು ಮಾತನಾಡುತ್ತಾ ತುಮಕೂರಿನ ಶಿರಾಗೇಟಿನ ಶ್ರೀದೇವಿ ಸಂಸ್ಥೆಯ ಆವರಣದಲ್ಲಿರುವ ಶ್ರೀದುರ್ಗಾಂಬಿಕಾ ದೇವಸ್ಥಾನವು ಅನೇಕ ವರ್ಷಗಳಿಂದ ಶ್ರೀ ಉಚ್ಚಂಗಮ್ಮನ ಆವಾಸ ಸ್ಥಳವಾಗಿದೆ. ಶ್ರೀದುರ್ಗಾಂಬಿಕಾ ದೇವಿಯ ಹೆಸರಿನಲ್ಲಿ ಪ್ರತಿಷ್ಠಾಪನೆಯಾಗಿರುವುದು ಶ್ರೀದೇವಿ ಶಿಕ್ಷಣ ಸಂಸ್ಥೆ ಮತ್ತಷ್ಟು ವೃದ್ಧಿಯಾಗಿ ವಿಶ್ವವಿದ್ಯಾಲಯ ರೂಪುಗೊಳ್ಳಲಿ ಎಂದರು. ಹಾಗೂ ಶ್ರೀದುರ್ಗಾಂಬಿಕೆ ಜಗತ್ತಿನಲ್ಲಿ ಕೊರೋನಾ ಮಹಾಮಾರಿಯಿಂದ ನಮ್ಮೆಲ್ಲರನ್ನು ರಕ್ಷಿಸುತ್ತಾಳೆ, ಭಕ್ತಿಗೆ ಒಲಿಯುತ್ತಾಳೆ, ಇಂತಹ ನಂಬಿಕೆ ಮಾನವ ಕುಲವನ್ನು ಇಂದಿಗೂ ಮುನ್ನಡೆಸುತ್ತಿದೆ. ಎಲ್ಲರೂ ಏಕಮನದಿಂದ ಶ್ರೀದೇವಿಯನ್ನು ಪ್ರಾರ್ಥಿಸಿ ಈ ಸಂಕಷ್ಟದಿಂದ ಕಾಪಾಡಲಿ ಎಂದು ತಿಳಿಸಿದರು.

ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ ಹುಲಿನಾಯ್ಕರ್‌ರವರು ಮಾತನಾಡುತ್ತಾ ಶ್ರೀದುರ್ಗಾಂಬಿಕಾ ದೇವಿಗೆ ಪ್ರತಿದಿನ ಪೂಜೆ, ಅಭಿಷೇಕ, ಪ್ರತಿನಿತ್ಯ ವಿಶೇಷ ಅಲಂಕಾರ ಮತ್ತು ಮಹಾಮಂಗಳಾರತಿಗಳನ್ನು ನಡೆಯುತ್ತವೆ. ಸಾರ್ವಜನಿಕರು, ಭಕ್ತಾದಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆದಿಶಕ್ತಿ ಕರುಣಾಮಯಿ ಹಾಗೂ ಮಾತೃ ಸ್ವರೂಪಿಣಿ ಶ್ರೀ ದುರ್ಗಾಂಬಿಕಾ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!