ಈ ರಾಶಿಯವರು ಇಂದು ಗುರುವಿನ ಮುಂದೆ ಅಹಂಕಾರ ತೋರುವುದು ಒಳ್ಳೆಯದಲ್ಲ

ಮೇಷ: ಅತಿಯಾದ ಒತ್ತಡದಿಂದ ಕಚೇರಿ ಕೆಲಸಗಳನ್ನು ಮಾಡಬೇಡಿ. ಇದು ದೇಹದ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ. ಗುರುವಿನ ಮುಂದೆ ಅತಿಯಾದ ಅಹಂಕಾರ ತೋರುವುದು ಒಳ್ಳೆಯದಲ್ಲ. ದೂರ ಪ್ರಯಾಣದ ವೇಳೆ ಎಚ್ಚರಿಕೆ ಇರಲಿ.

ವೃಷಭ: ವೃತ್ತಿರಂಗದಲ್ಲಿ ಹೆಚ್ಚು ಕೆಲಸ ಬಂದರೂ ಅವೆಲ್ಲವನ್ನು ನಿಭಾಯಿಸುವ ಸಾಧ್ಯತೆ ಬರುತ್ತದೆ. ನೀರಸವಾದ ನಿರುದ್ಯೋಗಿಗಳ ದೈನಂದಿನ ಬದುಕಿನಲ್ಲಿ ಆಶಾಕಿರಣ ಮೂಡಿ ಬರುತ್ತದೆ. ಕಿಟಕಿ ಪ್ರೇಮಿಗಳಿಗೆ ಮದುವೆ ಅನಿವಾರ್ಯವಾಗಲಿದೆ.

ಮಿಥುನ: ಈ ದಿನ ನಿಮಗೆ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಮಗುವಿನ ಬಗ್ಗೆ ಅಜಾಗರೂಕತೆಯು ಕಿರಿಕಿರಿಯನ್ನು ಉಂಟುಮಾಡಬಹುದು. ಪೋಷಕರ ಆರೋಗ್ಯ ಮತ್ತು ವರ್ತಮಾನದ ಬದಲಾದ ಸನ್ನಿವೇಶಗಳು ಕಾಳಜಿಯನ್ನು ತೋರಿಸುತ್ತದೆ. ಆರೋಗ್ಯವು ಮಧ್ಯಮವಾಗಿರುತ್ತದೆ.

ಕಟಕ: ವಿದೇಶದಲ್ಲಿ ಮಾಡುವಂತ ಉದ್ಯೋಗಿಗಳಿಗೆ ಬಿಡುವಿಲ್ಲದೆ ಕೆಲಸವಿರುತ್ತದೆ, ಶ್ರಮಕ್ಕೆ ತಕ್ಕಂತೆ ಫಲ ಸಿಗುವುದು, ಕೆಲವರು ಪಾರ್ಟ್ ಟೈಮ್ ಕೆಲಸಕ್ಕೆ ಪ್ರಯತ್ನ ಮಾಡುವವರಿಗೆ ಒಳ್ಳೆಯದಾಗಲಿದೆ, ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ.

ಸಿಂಹ: ನಿಮ್ಮ ಬುದ್ಧಿವಂತಿಕೆಯೇ ನಿಮ್ಮನ್ನು ಎಲ್ಲಾ ಜಟಿಲ ಸಮಸ್ಯೆಗಳಿಂದ ಪಾರು ಮಾಡಲಿದೆ. ಇದರಿಂದ ಪ್ರಶಂಸೆಯನ್ನೂ ಗಿಟ್ಟಿಸಿಕೊಳ್ಳಲಿದ್ದೀರಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ.

ಕನ್ಯಾ: ಆಸ್ತಿಗೆ ಸಂಬಂಧಿಸಿದಂತೆ ತೊಂದರೆಯಾಗುವ ಸಂಭವ. ನೌಕರಿಯಲ್ಲಿ ಕೆಲಸಗಾರರ ಅಸಹಕಾರ. ಮಾನಸಿಕ ನೆಮ್ಮದಿ ಇಲ್ಲ. ವ್ಯಾಪಾರಿಗಳಿಗೆ ಬೆಳಗ್ಗೆ ಹೊತ್ತು ಕೊಂಚ ನಷ್ಟ ಎನಿಸಿದರೂ ಸಹ ಕ್ರಮೇಣವಾಗಿ ಚೇತರಿಸಿಕೊಳ್ಳುತ್ತೀರಿ, ಕುಟುಂಬಸ್ಥರ ಜೊತೆ ಸೇರಿ ಕುಲದೇವರ ದರ್ಶನ ಮಾಡಿ.

ತುಲಾ: ವಿದೇಶ ಪ್ರವಾಸ ಯೋಗ. ದಿನಸಿ ವ್ಯಾಪಾರಿಗಳಿಗೆ ಸರಕು ನಷ್ಟ. ಸಂಗಾತಿಯ ಸಲಹೆಯಿಂದ ದೊಡ್ಡ ಪ್ರಮಾಣದ ಲಾಭ. ಧನ ಸಮೃದ್ಧಿ, ಧೈರ್ಯ ಹೆಚ್ಚಾಗಲಿದೆ, ಧರ್ಮ ಕಾರ್ಯಗಳಲ್ಲಿ ವಿಘ್ನ, ಶತ್ರುಗಳ ನಿವಾರಣೆ, ಉದ್ದು ಹಾಗೂ ಅಕ್ಕಿ ದಾನ ಮಾಡಿ.

ವೃಶ್ಚಿಕ: ಈ ದಿನ ಆಧ್ಯಾತ್ಮಿಕ ಮಾರ್ಗದರ್ಶನವು ಪ್ರಗತಿಗೆ ಕಾರಣವಾಗುತ್ತದೆ. ಜ್ವರ, ದೇಹದ ನೋವು ಜೊತೆಗೆ ತಲೆಯ ಒಂದು ಬದಿಯಲ್ಲಿ ನೋವು ಇರಬಹುದು. ಕ್ಷಣಿಕ ಆರ್ಥಿಕ ಒತ್ತಡ ಇರಬಹುದು. ಸಂಬಂಧಿಕರಲ್ಲಿ ಅಸೂಯೆಯ ಭಾವನೆ ಇರುತ್ತದೆ.

ಧನುಸ್ಸು: ಅನವಶ್ಯಕ ಖರೀದಿಯಲ್ಲಿ ಧನನಷ್ಟ ಸಾಧ್ಯತೆ. ಕೆಲವು ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯಧನ ಬರುವ ಸಾಧ್ಯತೆ ಇದೆ. ಹೊಸ ಕೆಲಸಗಳಿಗೆ ಪ್ರಯತ್ನ ಮಾಡುವವರು ತಮ್ಮ ಸ್ನೇಹಿತರ ವಲಯದಲ್ಲಿ ವಿಚಾರಿಸುವುದು ಒಳ್ಳೆಯದು.

ಮಕರ: ನಿರುದ್ಯೋಗಿಗಳಿಗೆ ಅನಿಶ್ಚಿತತೆ ದೂರವಾಗಲಿದೆ. ಆಕಸ್ಮಿಕ ರೀತಿಯಲ್ಲಿ ಖರ್ಚು-ವೆಚ್ಚಗಳು ಆತಂಕ ತಂದರೂ ಧನಾಗಮನದಿಂದ ಅನುಕೂಲವಾದೀತು. ಕೌಟುಂಬಿಕವಾಗಿ ಪರಸ್ಪರ ಕೊಡುವ ಮನೋಭಾವನೆಯಿಂದ ಒಂದು ಥರದ ಹೇಳಲಾಗದ ಸಮಾಧಾನ ಸಿಗಲಿದೆ.

ಕುಂಭ: ಅಧಿಕ ಖರ್ಚು, ಕಾಯಕವೇ ಕೈಲಾಸ ಅಂತ ನಂಬಿದವರಿಗೆ ಗೌರವ ಪ್ರಾಪ್ತಿ, ಶುಭ ಮಂಗಳ ಕಾರ್ಯ ಸಂಭವ, ಉದ್ಯೋಗದ ಸ್ಥಳ ಬದಲಾವಣೆ, ಮಿತ್ರರಿಂದ ಹಣಕಾಸು ನಿರಾಸೆ ಮೂಡಲಿದೆ, ಮನೆ ಬದಲಾವಣೆ, ಮಹಿಳಾ ಉದ್ಯೋಗಿಗಳಿಗೆ ಸಲ್ಲದ ಅಪವಾದ.

ಮೀನ: ನಿಮ್ಮ ಹಠದಿಂದ ಸಂಗಾತಿಗೆ ತೊಂದರೆ. ಕುಟುಂಬದ ಹಿರಿಯ ಸದಸ್ಯರಿಗೆ ಕಷ್ಟ. ನಿಮ್ಮ ಮೇಲೆ ಅಪವಾದ ಹೊರಿಸಿಯಾರು, ಕುಲಕಸುಬು ದಾರರಿಗೆ ಯಶಸ್ಸು ಕಂಡು ಬರಲಿದೆ, ನಿಮ್ಮ ಹಿತೈಷಿ ವ್ಯಕ್ತಿಯೊಬ್ಬರು ನಿಜಬಣ್ಣ ತೋರಿಸಲಿದ್ದಾರೆ ಅವರ ಕುಟಿಲತೆ ಅರಿವಿಗೆ ಬರಲಿದೆ.

Leave a Reply

Your email address will not be published. Required fields are marked *

error: Content is protected !!